ಮುಂಬೈ:ಬಾಲಿವುಡ್​ನ ನಟಿ ಕರೀನಾ ಕಪೂರ್​ ಫೆಬ್ರವರಿ 21ರಂದು ಎರಡನೇ ಮಗುವಿಗೆ ಜನ್ಮವಿತ್ತಿದ್ದಾರೆ. ಒಂದೂವರೆ ತಿಂಗಳಾದರೂ ಮಗುವಿನ ಫೋಟೋವನ್ನು ಕರೀನಾ ಮತ್ತು ಸೈಫ್​ ಅಲಿ ಖಾನ್​ ಎಲ್ಲಿಯೂ ಹಂಚಿಕೊಂಡಿಲ್ಲ. ಆದರೆ ಇದೀಗ ಕರೀನಾ ಅವರ ತಂದೆ ರಣಧೀರ್​ ಕಪೂರ್​ ಅವರು ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ರಣಧೀರ್​ ಕಪೂರ್ ಅವರು ಇಂದು ಕೊಲ್ಯಾಜ್​ ಮಾಡಿದ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಇಬ್ಬರು ಮಕ್ಕಳ ಫೋಟೋ ಕೊಲ್ಯಾಜ್ ಮಾಡಿರುವುದನ್ನು ನೀವು ಕಾಣಬಹುದು. ಈ ಎರಡು ಫೋಟೋಗಳಲ್ಲಿ ಒಂದರಲ್ಲಿರುವುದು ಕರೀನಾ ಅವರ ಮೊದಲ ಮಗ ತೈಮೂರ್ ಅಲಿ ಖಾನ್ ಎನ್ನಲಾಗಿದೆ. ಹಾಗೆಯೇ ಇನ್ನೊಂದು ಮಗುವನ್ನು ಅವರ ಎರಡನೇ ಮಗುವೆಂದು ಹೇಳಲಾಗಿದೆ. ಎರಡನೇ ಮಗು ಕೂಡ ತೈಮೂರ್​ ರೀತಿಯೇ ಇರುವುದುನ್ನು ನೆಟ್ಟಿಗರು ಗಮನಿಸಿದ್ದಾರೆ.
ಫೋಟೋ ಶೇರ್​ ಮಾಡಿ ಕೆಲವೇ ಹೊತ್ತಿನಲ್ಲಿ ರಣಧೀರ್ ಅವರು ಫೋಟೋವನ್ನು ಡಿಲೀಟ್​ ಮಾಡಿದ್ದಾರೆ. ಆದರೆ ಅದಾಗಲೇ ಫೋಟೋ ಎಲ್ಲೆಡೆ ಶೇರ್​ ಆಗಿದ್ದು, ವೈರಲ್​ ಆಗಿದೆ.
ಕರೀನಾ ಅವರು ಮಹಿಳಾ ದಿನಾಚರಣೆಯಂದು ತಾವು ಮಗುವನ್ನು ಎತ್ತಿಕೊಂಡಿರುವ ಫೋಟೋ ಶೇರ್​ ಮಾಡಿದ್ದರು. ಆದರೆ ಮಗುವಿನ ಮುಖ ಕಾಣದಂತೆ ನೋಡಿಕೊಂಡಿದ್ದರು. (ಏಜೆನ್ಸೀಸ್​)
ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ್ದವನಿಗೆ ಎಂಗೇಜ್ಮೆಂಟ್!

ಮಗನ ಜತೆ ಮಗಳ ಮದುವೆ! ಕಳೆದು ಹೋಗಿದ್ದ ಮಗಳನ್ನೇ ಸೊಸೆಯಾಗಿ ತಂದುಕೊಂಡ ತಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 13 =
Remember me
