ಕರೀಂನಗರ:ಫ್ರೆಶರ್ಸ್ ಡೇ ಪಾರ್ಟಿಯಲ್ಲಿ ನೃತ್ಯ ಮಾಡುವಾಗ ವಿದ್ಯಾರ್ಥಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಸಲಿಂಗಕಾಮಿ ಡೇಟಿಂಗ್ ಆ್ಯಪ್ ಜಾಲ…ಖಾಸಗಿ ವಿಡಿಯೋ ಮಾಡಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ 6 ವಿದ್ಯಾರ್ಥಿಗಳ ಬಂಧನ
ಮಂಡಲದ ವೆಂಕಟಾಯಪಲ್ಲಿ ಗ್ರಾಮದ ಗುಂಡು ಅಂಜಯ್ಯ ಎಂಬುವರು ಪುತ್ರಿ ಪ್ರದೀಪ್ತಿ ಮೃತ ದುರ್ದೈವಿಯಾಗಿದ್ದು, ಗಂಗಾಧರದ ಮಾದರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಫ್ರೆಶರ್ಸ್ ಡೇ ಹಿನ್ನೆಲೆಯಲ್ಲಿ ಡ್ಯಾನ್ಸ್​ನ್ನು ಆಯೋಜಿಸಲಾಗಿದ್ದು, ತನ್ನ ಸಹ ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾಳೆ.
ಕೂಡಲೇ ಆಕೆಗೆ ಶಿಕ್ಷಕರು ಸಿಪಿಆರ್‌ ನೀಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾಳೆ. ಸಡಗರ ಸಂಭ್ರಮದ ಪಾರ್ಟಿಯಲ್ಲಿ ಖುಷಿಯಿಂದ ಎಂಜಾಯ್ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬಳಿಗೆ ಈ ರೀತಿ ಆಗಿದ್ದು ನೋಡಿ, ಇಡೀ ಶಾಲೆಯೇ ಬೆಚ್ಚಿಬಿದ್ದಿದೆ. ಸದಾ ಜೊತೆಗಿದ್ದ ಪ್ರದೀಪ್ತಿ ಇನ್ನಿಲ್ಲ ಎಂದು ತಿಳಿದ ಆಕೆಯ ಆತ್ಮೀಯ ಗೆಳೆಯರು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ:ಹುಬ್ಬೇರಿಸುವಂತಿದೆ ಸಲಿಂಗಕಾಮಿ ಜೋಡಿ ಮದುವೆ ಕುರಿತು ಸಮಂತಾ ಮಾಡಿರುವ ಪೋಸ್ಟ್​..!
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಹಠಾತ್ ಹೃದಯಾಘಾತದಿಂದಾಗಿ ಇತ್ತೀಚಿಗೆ ಬಾಲ್ಯದಿಂದ ಮಧ್ಯ ವಯಸ್ಸಿನವರೆಗೆ ಅನೇಕ ಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ವಯಸ್ಸಿನ ಬೇಧವಿಲ್ಲದೆ ಹೃದಯಾಘಾತ ಸಾವುಗಳು ಸಂಭವಿಸುತ್ತಿರುವುದು ಆತಂಕಕಾರಿಯಾಗಿದೆ.
ಬದಲಾದ ಆಹಾರ ಪದ್ಧತಿ, ಕಲುಷಿತ ಆಹಾರ, ಸಮಯದ ನಿರ್ವಹಣೆಯ ಕೊರತೆ, ಕೆಲಸದ ಒತ್ತಡ, ಮಾನಸಿಕ ಚಿಂತೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ಹೃದಯಾಘಾತಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ಅನೇಕ ವೈದ್ಯಕೀಯ ತಜ್ಞರು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
