ನವದೆಹಲಿ:ಕರಿಪ್ಪುರ್ ವಿಮಾನ ನಿಲ್ದಾಣದ ರನ್‌ವೇ ನಂ.10 ಅಸುರಕ್ಷಿತವಾಗಿದೆ ಮತ್ತು ವಿಶೇಷವಾಗಿ ಆರ್ದ್ರ ವಾತಾವರಣದಲ್ಲಿ ವಿಮಾನ ಇಳಿಯಲು ಆ ರನ್​ವೇಯನ್ನು ಬಳಸಬಾರದು ಎಂದು ತಜ್ಞರು 2011 ರಲ್ಲಿ ಎಚ್ಚರಿಕೆ ನೀಡಿದ್ದರು.ಮಂಗಳೂರಿನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಂ. 812 ಅಪಘಾತವಾಗಿ 158 ಜನ ಸಾವಿಗೀಡಾದ ದುರಂತ ಸಂಭವಿಸಿದ ನಂತರ ನಾಗರಿಕ ವಿಮಾನಯಾನ ಸಚಿವಾಲಯ ರಚಿಸಿದ ಸುರಕ್ಷತಾ ಸಲಹಾ ಸಮಿತಿಯ ಸದಸ್ಯ ಕ್ಯಾಪ್ಟನ್ ಮೋಹನ್ ರಂಗನಾಥನ್ 2011 ರಲ್ಲಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ:ಜೋಡಿ ದುರಂತ ಕೇರಳಕ್ಕೆ ಆಘಾತ: 2 ಹೋಳಾದ ವಿಮಾನ, ಭೂಕುಸಿತಕ್ಕೆ 13 ಮಂದಿ ಜೀವಂತ ಸಮಾಧಿ
ಶುಕ್ರವಾರ ರಾತ್ರಿ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ಕೋಳಿಕ್ಕೋಡ್​ನ ಕರಿಪ್ಪುರ್ ವಿಮಾನ ನಿಲ್ದಾಣದ ರನ್​ವೇಯಲ್ಲಿ ಜಾರಿ ಕಮರಿಗೆ ಬಿದ್ದು ಇಬ್ಭಾಗವಾಗಿದೆ. ಈ ದುರಂತದಲ್ಲಿ ಪೈಲಟ್ ಸೇರಿ 17 ಜನ ಸಾವಿಗೀಡಾದ್ದು, 123 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ನಾಗರಿಕ ವಿಮಾನ ಯಾನ ಸಚಿವರು, ಕೇರಳದ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಇತರೆ ಸಚಿವರು ಆಗಮಿಸುತ್ತಿದ್ದು, ಪರಿಹಾರ ಕ್ರಮಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ.ಮೃತಪಟ್ಟವರಲ್ಲಿ ಪೈಲಟ್ ಕಮಾಂಡ್ ಕ್ಯಾಪ್ಟನ್ ದೀಪಕ್ ಸಾಥೆ ಮತ್ತು ಸಹ ಪೈಲಟ್ ಅಖಿಲೇಶ್ ಕುಮಾರ್ ಸೇರಿದ್ದಾರೆ ಎಂದು ಪೊಲೀಸ್ ಮತ್ತು ವಿಮಾನಯಾನ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಸಾಥೆ ಭಾರತೀಯ ವಾಯುಪಡೆಯ (ಐಎಎಫ್) ಮಾಜಿ ವಿಂಗ್ ಕಮಾಂಡರ್ ಆಗಿದ್ದರು ಮತ್ತು ವಾಯುಪಡೆಯ ವಿಮಾನ ಪರೀಕ್ಷಾ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ:ಅಯೋಧ್ಯೆ ಶ್ರೀರಾಮಮಂದಿರ ಭೂಮಿ ಪೂಜೆ ನೇರ ಪ್ರಸಾರ ವೀಕ್ಷಿಸಿದವರ ಸಂಖ್ಯೆ ಎಷ್ಟು?
ಮಂಗಳೂರು ಅಪಘಾತದ ನಂತರ ಅವರು ನೀಡಿದ ಎಚ್ಚರಿಕೆ ನಿರ್ಲಕ್ಷಿಸಲಾಗಿದೆ ಎಂದು ಕ್ಯಾಪ್ಟನ್ ರಂಗನಾಥನ್ ತಿಳಿಸಿದ್ದಾರೆ.ಇದು ಇಳಿಜಾರಿನೊಂದಿಗೆ ಕೂಡಿದ ಟೇಬಲ್‌ಟಾಪ್ ರನ್‌ವೇ ಆಗಿದ್ದು, ರನ್‌ವೇಯ ಕೊನೆಯಲ್ಲಿರುವ ಬಫರ್ ವಲಯವು ಅಸಮರ್ಪಕವಾಗಿದೆ ಎಂದು ಅವರು ಹೇಳಿದ್ದಾರೆ.
ಎಲ್​ಎಸಿ ಬಳಿ ಚೀನಾದ ಉಪಟಳ: ರೋಬೋಟಿಕ್ಸ್​ ಸೇರಿ ಆಧುನಿಕ ಯುದ್ಧ ತಂತ್ರಗಾರಿಕೆ ಕುರಿತು ಭಾರತದ ಚಿಂತನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 9 =
Remember me
