ನವದೆಹಲಿ:ಕರ್ನಾಟಕದ 2023ರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾಪೂರ್ವ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದೆ. ಸದ್ಯಕ್ಕೆ ಐದು ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದ್ದು, ಸರಾಸರಿಯಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಕಂಡುಬಂದಿದೆ. ಎಬಿಪಿ ಸಿವೋಟರ್, ಮ್ಯಾಟ್ರಿಸ್​, ಲೋಕ್​ಪಾಲ್, ಪಾಪ್ಯುಲರ್ ಪೋಲ್ಸ್​​ ಮತ್ತು ಝೀ ನ್ಯೂಸ್​ ತಮ್ಮ ಚುನಾವಣಾಪೂರ್ವ ಸಮೀಕ್ಷೆಯನ್ನು ಪ್ರಕಟ ಮಾಡಿವೆ.
ಎಬಿಪಿ ಸಿವೋಟರ್ ಚುನಾವಣಾಪೂರ್ವ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 115ರಿಂದ 127 ಸ್ಥಾನ ಬರಲಿದ್ದು, ಬಿಜೆಪಿಗೆ 68-80 ಸ್ಥಾನ ಸಿಗಲಿದೆ. ಜೆಡಿಎಸ್​ಗೆ 23ರಿಂದ 35 ಸ್ಥಾನ ದಕ್ಕಲಿದೆ. ಇತರ ಪಕ್ಷಗಳು 0-2 ಸ್ಥಾನ ಗಳಿಸಲಿವೆ.
ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 88ರಿಂದ 98 ಸ್ಥಾನ ಬರಲಿದ್ದು, ಬಿಜೆಪಿಗೆ 96-106 ಸ್ಥಾನ ಸಿಗಲಿದೆ. ಜೆಡಿಎಸ್​ಗೆ 23ರಿಂದ 33 ಸ್ಥಾನ ಸಿಗಲಿದೆ. ಇಲ್ಲಿ 2ರಿಂದ 7 ಇತರರ ಪಾಲಾಗಲಿದೆ.
ಲೋಕ್​ಪೋಲ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ 116-123, ಬಿಜೆಪಿ 77-83, ಜೆಡಿಎಸ್​ 21-27 ಸ್ಥಾನ ಪಡೆಯಲಿದ್ದು, ಇತರ ಪಕ್ಷಗಳು 1-4 ಸ್ಥಾನ ಪಡೆಯಲಿವೆ.
ಪಾಪ್ಯುಲರ್ ಪೋಲ್ಸ್​ ಪ್ರಕಾರ ಕಾಂಗ್ರೆಸ್​-ಬಿಜೆಪಿ ಸಮಬಲವಾಗಿ ಇರಲಿವೆ. ಅಂದರೆ ಎರಡಕ್ಕೂ ತಲಾ 82ರಿಂದ 87 ಸ್ಥಾನಗಳು ಸಿಗಲಿವೆ. ಜೆಡಿಎಸ್​ 42-45 ಸ್ಥಾನಗಳಿದ್ದು, ಇತರ ಪಕ್ಷಗಳಿಗೆ ಯಾವುದೇ ಸ್ಥಾನ ಸಿಗುವುದಿಲ್ಲ.
ಝೀ ನ್ಯೂಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ 88-98, ಬಿಜೆಪಿ 96-106, ಜೆಡಿಎಸ್​ 23-33 ಸ್ಥಾನ ಗಳಿಸಲಿದ್ದು, 2ರಿಂದ 7 ಸ್ಥಾನಗಳು ಇತರ ಪಕ್ಷಗಳ ಪಾಲಾಗಲಿವೆ.
ಎಬಿಪಿ ಸಿವೋಟರ್ ಸಮೀಕ್ಷೆ ಪ್ರಕಾರ ಮುಂಬೈ-ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್​-ಬಿಜೆಪಿಗೆ ತಲಾ ಶೇ. 43 ವೋಟ್ ಹಂಚಿಕೆಯಾಗಲಿದೆ. ಅದಾಗ್ಯೂ ಕಾಂಗ್ರೆಸ್​ ಈ ಭಾಗದಲ್ಲಿ 25ರಿಂದ 29 ಮತ್ತು ಬಿಜೆಪಿ 21ರಿಂದ 25 ಸೀಟು ಗೆಲ್ಲಲಿದೆ.
ಕರಾವಳಿಯಲ್ಲಿ ಬಿಜೆಪಿ ಗರಿಷ್ಠ ಸ್ಥಾನ ಗೆಲ್ಲಲಿದೆ ಎಂದಾದರೂ ಕಾಂಗ್ರೆಸ್​ ಬಿಗಿ ಪೈಪೋಟಿ ನೀಡಲಿದೆ ಎಂಬುದೂ ಕಂಡುಬಂದಿದೆ. ಅಂದರೆ ಕರಾವಳಿಯಲ್ಲಿ ಬಿಜೆಪಿಗೆ ಶೇ. 46 ಮತ ಸಿಕ್ಕರೆ, ಕಾಂಗ್ರೆಸ್​ಗೆ ಶೇ. 41 ಮತ ಸಿಗಲಿದೆ. ಜೆಡಿಎಸ್​ ಶೇ. 6 ಮತ ಪಡೆಯಲಿದೆ ಎನ್ನಲಾಗಿದೆ.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಶೇ. 38 ಮತ ಗಳಿಸಿದರೆ, ಕಾಂಗ್ರೆಸ್ ಶೇ. 41 ಮತ ಗಳಿಸಲಿದೆ ಎನ್ನಲಾಗಿದೆ. ಅಂದರೆ ಬಿಜೆಪಿ 12ರಿಂದ 16 ಮತ್ತು ಕಾಂಗ್ರೆಸ್​ 18ರಿಂದ 22 ಸ್ಥಾನ ಗೆಲ್ಲಲಿದೆ.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಶೇ. 20 ಮತ್ತು ಕಾಂಗ್ರೆಸ್​ಗೆ ಶೇ. 36 ಮತ ಚಲಾವಣೆ ಆಗಲಿದೆ. ಆದರೆ ಜೆಡಿಎಸ್​ಗೆ 26ರಿಂದ 27 ಮತ್ತು ಕಾಂಗ್ರೆಸ್​ಗೆ 24ರಿಂದ 28 ಸೀಟು ಸಿಗಲಿದ್ದು, ಬಿಜೆಪಿ 1 ಅಥವಾ ಗರಿಷ್ಠ 5 ಸ್ಥಾನಕ್ಕೆ ಸೀಮಿತವಾಗಲಿದೆ ಎಂದು ಸಮೀಕ್ಷೆ ಹೇಳಿದೆ.
ಮುಂದಿನ ಮುಖ್ಯಮಂತ್ರಿಯ ವೋಟಿಂಗ್​ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗರಿಷ್ಠ ಮತದಾನ ಆಗಿದ್ದು, ಅವರೇ ಮುಂದಿನ ಸಿಎಂ ಎಂದು ಸಮೀಕ್ಷೆ ಹೇಳಿದೆ. ಬಹುತೇಕ ಮತದಾರರು ಕಾಂಗ್ರೆಸ್​ ಬಹುಮತ ಗಳಿಸಲಿದೆ ಎಂದಿದ್ದು, ಸಿಎಂ ವೋಟಿಂಗ್​ನಲ್ಲಿ ಸಿದ್ದರಾಮಯ್ಯಗೆ ಶೇ. 39.1 ಮತದಾನ ಆಗುವ ಮೂಲಕ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

‘ನಂಗೆ ಮನೆಯಲ್ಲೇ ಪ್ರೈವೆಸಿ ಇಲ್ಲ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳ್ಕೊಂಡ ಮಗ; ಅಪ್ಪ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 12 =
Remember me
