ನವದೆಹಲಿ:ಉದಯೋನ್ಮುಖ ಉದ್ಯಮಿಗಳಿಗೆ ಪೂರಕ ಔದ್ಯಮಿಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಕರ್ನಾಟಕ ಮತ್ತು ಗುಜರಾತ್ ಅತ್ಯುತ್ತಮ ನಿರ್ವಹಣೆ (ಬೆಸ್ಟ್ ಪರ್ಫಾರ್ವೆನ್ಸ್) ತೋರಿದ ರಾಜ್ಯಗಳೆಂದ ಮೆಚ್ಚುಗೆಗೆ ಪಾತ್ರವಾಗಿವೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಗುರುತಿಸಿ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ಕಡೆಯಿಂದ ನೀಡಲಾಗುವ ಶ್ರೇಯಾಂಕ ಪಟ್ಟಿಯಲ್ಲಿ ಈ 2 ರಾಜ್ಯಗಳಿಗೆ ಉನ್ನತ ಸ್ಥಾನಗಳು ಲಭಿಸಿವೆ. ಅದೇ ರೀತಿ, ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ರಾಜ್ಯಗಳೂ ಅತ್ಯುತ್ತಮ ನಿರ್ವಹಣೆ ತೋರಿವೆ ಎಂದು ತಿಳಿಸಲಾಗಿದೆ.
ಇಲಾಖೆ ವತಿಯಿಂದ ವಾರ್ಷಿಕವಾಗಿ ಇಂಥದ್ದೊಂದು ರಾಂಕಿಂಗ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಉದ್ಯಮ ಮತ್ತು ಉದ್ಯಮಿಗಳಿಗೆ ಆರಂಭಿಕ ಬೆಳವಣಿಗೆಗೆ ಅನುಕೂಲಕರವಾದ ಪರಿಸರ ವ್ಯವಸ್ಥೆ ರೂಪಿಸುವ ರಾಜ್ಯಗಳ ಪ್ರಯತ್ನಗಳನ್ನು ಮೌಲ್ಯಮಾಪನ ಮಾಡಿ ಸ್ಥಾನಗಳನ್ನು ನೀಡಲಾಗುತ್ತದೆ. ಒಟ್ಟು 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಅತ್ಯುತ್ತಮ ನಿರ್ವಹಣೆ, ಉತ್ತಮ ನಿರ್ವಹಣೆ, ನಾಯಕರು, ಮಹತ್ವಾಕಾಂಕ್ಷಿ ನಾಯಕರು ಮತ್ತು ಪೂರಕ ಔದ್ಯಮಿಕ ಪರಿಸರ ವ್ಯವಸ್ಥೆ ವಿಭಾಗಗಳಡಿ ಶ್ರೇಯಾಂಕ ಪಟ್ಟಿ ನೀಡಲಾಗಿದೆ.
ರಾಜ್ಯಗಳನ್ನು ಅವುಗಳ ಜನಸಂಖ್ಯೆ ಗಾತ್ರದ ಆಧಾರದ ಮೇಲೆ, ಅಂದರೆ 1 ಕೋಟಿಗಿಂತ ಹೆಚ್ಚು ಜನಸಂಖ್ಯೆ ಮತ್ತು 1 ಕೋಟಿಗಿಂತ ಕಡಿಮೆ ಜನಸಂಖ್ಯೆ ಎಂದು 2 ವಿಭಾಗಗಳಾಗಿ ವಿಂಗಡಿಸಲಾಗಿದೆ. ಗುಜರಾತ್ ಸತತ ನಾಲ್ಕನೇ ಬಾರಿಗೆ ಅತ್ಯುತ್ತಮ ನಿರ್ವಹಣೆ ತೋರಿದ ಶ್ರೇಯಾಂಕ ಪಡೆದಿದೆ.
ಕರ್ನಾಟಕ ಸತತ ಎರಡನೇ ವರ್ಷವೂ ಈ ವಿಭಾಗದಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳು ಟಾಪ್ ಪರ್ಫಾರ್ವೆನ್ಸ್ ತೋರಿರುವ ಪಟ್ಟಿಯಲ್ಲಿವೆ. ಆಂಧ್ರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ, ತ್ರಿಪುರ ಸೇರಿ ಎಂಟು ರಾಜ್ಯಗಳಿಗೆ ‘ನಾಯಕ’ ಸ್ಥಾನ ನೀಡಲಾಗಿದೆ. ಬಿಹಾರ, ಹರಿಯಾಣ, ಅಂಡಮಾನ್-ನಿಕೋಬಾರ್ ದ್ವೀಪ ಮತ್ತು ನಾಗಾಲ್ಯಾಂಡ್​ಗೆ ‘ಆಕಾಂಕ್ಷಿ ನಾಯಕತ್ವ’ ವಿಭಾಗದಲ್ಲಿ ಸ್ಥಾನ ಸಿಕ್ಕಿದೆ. ಛತ್ತೀಸ್​ಗಢ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಚಂಡೀಗಢ, ದಾದ್ರಾ ಮತ್ತು ನಾಗರ್ ಹವೇಲಿ , ಡಾಮನ್-ಡಿಯು, ಲಡಾಖ್, ಮಿಜೋರಾಂ, ಪುದುಚೇರಿ ಮತ್ತು ಸಿಕ್ಕಿಂ ಬೆಳೆಯುತ್ತಿರುವ ಆರಂಭಿಕ ಉದ್ಯಮ ಪರಿಸರ ವ್ಯವಸ್ಥೆಗಳಡಿ ಸ್ಥಾನ ಪಡೆದಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 18 =
Remember me
