| ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಬಾಲರಾಮನ ಮೂರ್ತಿಯೇ ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ಪ್ರತಿಷ್ಠಾಪನೆಗೊಳ್ಳಲಿದ್ದು, ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಂದು ಹಿರಿಮೆ.
ಎಚ್.ಡಿ.ಕೋಟೆಯ ಕೃಷ್ಣಶಿಲೆ ಬಳಕೆ:ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕೃಷ್ಣಶಿಲೆಯಲ್ಲಿ ಈ ರಾಮನ ಮೂರ್ತಿ ಅರಳಿದೆ. ಈ ಕಲ್ಲು ಬಳಸಿಕೊಂಡು ಬಾಲರಾಮನ ಮೂರ್ತಿ ಕೆತ್ತನೆ ಮಾಡಲು ಅರುಣ್ ಆರು ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ‘ಕಠಿಣ ಶ್ರಮವಹಿಸಿ ಮೂರ್ತಿಗೆ ಅಂತಿಮರೂಪ ನೀಡಲಾಗಿದೆ. ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಬಾಲಕನಂತೆ ಗೋಚರವಾಗುವ ಶ್ರೀರಾಮನ ಮೂರ್ತಿ ಇದಾಗಿದೆ. ಇದು 8 ಅಡಿ ಎತ್ತರ, ಮೂರೂವರೆ ಅಡಿ ಅಗಲ ಇದೆ. 5 ವರ್ಷದ ಬಾಲಕನ ದೇಹಸ್ವರೂಪ, ಶ್ರೀರಾಮನ ದೈವಿಕತೆಯನ್ನು ಕಣ್ಣಿನಲ್ಲಿ ತುಂಬಿಕೊಂಡು ಈ ಮೂರ್ತಿಯನ್ನು ಕೆತ್ತನೆ ಮಾಡಿದ್ದೇನೆ’ ಎಂದು ಶಿಲ್ಪಿ ಅರುಣ್ ತಿಳಿಸಿದ್ದಾರೆ. ಜ. 22ರಂದು ನಡೆಯುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ಪಡೆದ ಗಣ್ಯರ ಪೈಕಿ ಅರುಣ್ ಕೂಡ ಸೇರಿದ್ದಾರೆ.
ಓದಿದ್ದು ಎಂಬಿಎ, ಆಯ್ದುಕೊಂಡಿದ್ದು ಶಿಲ್ಪ ಕೆತ್ತನೆಮೈಸೂರಿನ ಬ್ರಹ್ಮಶ್ರೀ ಕಶ್ಯಪ ಶಿಲ್ಪಕಲಾನಿಕೇತನದ ಅರುಣ್, 14 ವರ್ಷಗಳಿಂದ ಶಿಲ್ಪ ಕೆತ್ತನೆ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ತಂದೆಯ ಶಿಲ್ಪಕಲೆಯಿಂದ ಇವರು ಈ ಕಲೆಯತ್ತ ಬಂದರು. ಅರುಣ್ ಯೋಗಿರಾಜ್ ಎಂಬಿಎ ಪದವೀಧರರು. ಓದು ಮುಗಿದ ಬಳಿಕ ಖಾಸಗಿ ಕಂಪನಿಗೆ ಕೆಲಸಕ್ಕೂ ಸೇರಿಕೊಂಡರು. ಅದು ಅವರಿಗೆ ಹಿಡಿಸಲಿಲ್ಲ. ಹೀಗಾಗಿ, ಶಿಲ್ಪಕೆತ್ತನೆಯತ್ತ ಆಕರ್ಷಿತಗೊಂಡರು. ಅರುಣ್ ಅವರದು ಶಿಲ್ಪಕಾರರ ಕುಟುಂಬ. ಅವರ ತಂದೆ ಯೋಗಿರಾಜ್ ಮತ್ತು ಅಜ್ಜ ಬಸವಣ್ಣ ಕೂಡ ಶಿಲ್ಪಿಗಳು. ತಲೆಮಾರುಗಳಿಂದ ಶಿಲ್ಪ ಕೆತ್ತನೆ ಕಲೆಯಲ್ಲಿ ಇಡೀ ಕುಟುಂಬ ಸಕ್ರಿಯವಾಗಿದೆ. ಇವರು ಶಿಲ್ಪ ಕಲಾಕೃತಿಯ 5ನೇ ತಲೆಮಾರಿನವರು.
ಪ್ರಧಾನಿಯಿಂದ ಮೆಚ್ಚುಗೆ:ಈ ಹಿಂದೆಯೇ ಅನೇಕ ಪ್ರತಿಷ್ಠಿತ ಪ್ರತಿಮೆಗಳನ್ನು ರಚನೆ ಮಾಡಿ ಅರುಣ್ ಯೋಗಿರಾಜ್ ಸೈ ಎನಿಸಿಕೊಂಡಿದ್ದಾರೆ. ದೆಹಲಿಯಲ್ಲಿರುವ ಸುಭಾಷ್ ಚಂದ್ರಬೋಸರ ಪ್ರತಿಮೆ, ಉತ್ತರಾಖಂಡದ ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ ಮಾಡಿ ರಾಷ್ಟ್ರದ ಗಮನ ಸೆಳೆದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದರು. ರಾಮಕೃಷ್ಣ ಪರಮಹಂಸ, ಸರ್ ಎಂ. ವಿಶ್ವೇಶ್ವರಯ್ಯ, ಡಾ.ಬಿ.ಆರ್.ಅಂಬೇಡ್ಕರ್, ಜಯಚಾಮರಾಜ ಒಡೆ ಯರ್, ಶ್ರೀ ಶಿವಕುಮಾರ ಸ್ವಾಮೀಜಿ, ಹನುಮಂತ ಸೇರಿದಂತೆ ಅನೇಕ ಪ್ರತಿಮೆಗಳನ್ನು ಕೆತ್ತನೆ ಮಾಡಿದ್ದಾರೆ.
ಕುಟುಂಬದಲ್ಲೂ ಸಂತಸದ ಸಿಹಿ:ಅರುಣ್ ಸಿದ್ಧಪಡಿಸಿದ ಮೂರ್ತಿ ಆಯ್ಕೆ ಖಚಿತವಾಗುತ್ತಿದ್ದಂತೆ ಅವರ ಕುಟುಂಬದಲ್ಲಿ ಸಂಭ್ರಮ ಮೇಳೈಸಿದೆ. ತಾಯಿ ಸರಸ್ವತಿ, ಪತ್ನಿ ವಿಜೇತಾ ಎಂ.ರಾವ್, ಮಗಳು ಸಾನ್ವಿ, ಸಹೋದರ ಸೂರ್ಯಪ್ರಕಾಶ್ ಅವರು ಸಂತಸಗೊಂಡಿದ್ದಾರೆ.
ಅಯೋಧ್ಯೆಗೆ ಋಷ್ಯ ಶೃಂಗೇಶ್ವರನ ಪ್ರಸಾದಉಡುಪಿ: ದಶರಥ ಮಹಾರಾಜ ಅಮಾತ್ಯ ಸುಮಂತ್ರನ ಸೂಚನೆಯಂತೆ ಸಂತಾನಪ್ರಾಪ್ತಿಗಾಗಿ ಪ್ರಾರ್ಥಿಸಿ ವಿಭಾಂಡಕ ಮಹರ್ಷಿಗಳ ಪುತ್ರರಾದ ಋಷ್ಯಶೃಂಗ ಮಹರ್ಷಿಗಳನ್ನು ಕರೆಸಿ ಅವರ ನೇತೖತ್ವದಲ್ಲಿ ಪುತ್ರಕಾಮೇಷ್ಟಿ ಯಾಗ ನೆರವೇರಿಸಿದ್ದು, ಅದರ ಫಲವಾಗಿ ರಾಮ, ಭರತ, ಲಕ್ಷ್ಮಣ, ಶತ್ರುಘ್ನರು ಜನಿಸಿದ್ದರು ಎಂಬುದಾಗಿ ರಾಮಾಯಣದಲ್ಲಿ ಉಲ್ಲೇಖವಿದೆ. ಮಳೆ ಮಹರ್ಷಿಗಳೆಂದೇ ಪ್ರಸಿದ್ಧರಾದ ಋಷ್ಯಶೃಂಗರಿಂದ ಪ್ರತಿಷ್ಠಾಪಿಸಲ್ಪಟ್ಟ ಕಿಗ್ಗ ಋಷ್ಯಶೃಂಗೇಶ್ವರನ ಪ್ರಸಾದವನ್ನು ದೇವಸ್ಥಾನದ ಅರ್ಚಕರು ಅಯೋಧ್ಯೆ ರಾಮನಿಗೆ ಅರ್ಪಿಸಲು ಸೋಮವಾರ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥರಿಗೆ ನೀಡಿದ್ದಾರೆ.
ಮಧ್ಯಪ್ರದೇಶದಲ್ಲೂ ರಜೆಇಂದೋರ್: ರಾಮಮಂದಿರ ಉದ್ಘಾಟನೆ ದಿನವಾದ ಜನವರಿ 22ರಂದು ಉತ್ತರಪ್ರದೇಶ ಸರ್ಕಾರ ಸಾರ್ವಜನಿಕ ರಜೆ ಘೋಷಿಸಿದ ಬೆನ್ನಲ್ಲೇ, ಮಧ್ಯಪ್ರದೇಶ ಸರ್ಕಾರವೂ ಇದೇ ನಿರ್ಣಯ ಕೈಗೊಂಡಿದೆ. ಮಂದಿರ ಉದ್ಘಾಟನೆಯನ್ನು ರಾಜ್ಯದ ಎಲ್ಲ ಜನರು ಉತ್ಸವದಂತೆ ಆಚರಿಸಬೇಕು, ಈ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಜ.22ರಂದು ಎಲ್ಲ ಪಂಚಾಯಿತಿಗಳಲ್ಲಿ ಭಜನೆ ಸ್ಪರ್ಧೆಯನ್ನೂ ಆಯೋಜಿಸಲಾಗಿದ್ದು. ಜ.26ರಂದು ಬಹುಮಾನ ವಿತರಣೆ ನಡೆಯಲಿದೆ.
ಧರ್ಮಸ್ಥಳದಿಂದ ರಾಮ ಮಂದಿರಕ್ಕೆ ರಜತ ಪೂಜಾ ಪರಿಕರ ಸಮರ್ಪಣೆ
ಉಡುಪಿ:ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ರಜತ ಪೂಜಾ ಪರಿಕರಗಳನ್ನು ಸೋಮವಾರ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಮೂಲಕ ಸಮರ್ಪಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೆಂದ್ರ ಕುಮಾರ್ ಧರ್ಮಸ್ಥಳದಿಂದ ಕೊಡಮಾಡಿದ ಪರಿಕರಗಳನ್ನು ಪೇಜಾವರ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಮ ದೇವರಿಗೆ ಮತ್ತು ರುದ್ರ ದೇವರಿಗೆ ಅನ್ಯೋನ್ಯ ಭಾವ ಜಗಜನಿತವಾಗಿದೆ. ಧರ್ಮಸ್ಥಳದ ರುದ್ರ ದೇವರ ಸನ್ನಿಧಿಯಿಂದ ರಾಮ ದೇವರ ನಿತ್ಯಪೂಜೆಗೆ ಬೇಕಾಗುವ ಬೆಳ್ಳಿಯ ಪರಿಕರಗಳನ್ನು ಸಮರ್ಪಿಸಿರುವುದರಿಂದ ತೀರ್ಥಕ್ಷೇತ್ರ ಮತ್ತು ಧರ್ಮಸ್ಥಳದ ಸಂಬಂಧ ನಿಷ್ಠವಾಗಿದೆ. ಈ ಎಲ್ಲ ಸಾಮಗ್ರಿಗಳನ್ನು ಟ್ರಸ್ಟ್ ಪರವಾಗಿ ಸ್ವೀಕರಿಸಲಾಗಿದ್ದು, ಅಯೋಧ್ಯೆಯಲ್ಲಿ ರಾಮ ದೇವರಿಗೆ ಅರ್ಪಿಸಲಾಗುವುದು ಎಂದು ಹೇಳಿದರು. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಅರ್ಚಕ ರಾಮಕೃಷ್ಣ ಕಲ್ಲೂರಾಯ, ಮಣೆಗಾರರಾದ ವಸಂತ ಮಂಜಿತ್ತಾಯ, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್, ವಾಸುದೇವ ಪೆರಂಪಳ್ಳಿ, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.
ರಾಮ ದೇವರೊಂದಿಗೆ ಕ್ಷೇತ್ರದ ಸಂಬಂಧಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೆಂದ್ರ ಕುಮಾರ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಸಂದರ್ಭ ಡಾ.ವೀರೇಂದ್ರ ಹೆಗ್ಗಡೆಯವರು ರಾಮ ದೇವರೊಂದಿಗೆ ಕ್ಷೇತ್ರದ ಸಂಬಂಧವಿರಲಿ ಎಂಬ ದೃಷ್ಟಿಯಿಂದ ದೇವರಿಗೆ ನಿತ್ಯಪೂಜೆಗೆ ಬೇಕಾಗುವ ದೀಪ, ಆರತಿ, ತಂಬಿಗೆ ಮೊದಲಾದ ಬೆಳ್ಳಿಯ ಪರಿಕರಗಳನ್ನು ಒಪ್ಪಿಸಿದ್ದಾರೆ ಎಂದು ಹೇಳಿದರು.
ಜ.23ರಿಂದ ಭಕ್ತರಿಗೆ ಶ್ರೀರಾಮನ ದರ್ಶನಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳಿಗೆ ಇಂದಿನಿಂದ (ಮಂಗಳವಾರ) ಚಾಲನೆ ಸಿಗಲಿದೆ. ದೋಷ ನಿವಾರಣೆ, ಗೋದಾನ, ವಿಶೇಷ ಪೂಜೆ ಮತ್ತು ಪುಣ್ಯಸ್ನಾನ ಈ ಆಚರಣೆಯ ಭಾಗವಾಗಿವೆ. ಜನವರಿ 20ರಿಂದ 22ರವರೆಗೆ ಹೊರಗಿನವರಿಗೆ ಅಯೋಧ್ಯೆ ಪ್ರವೇಶಕ್ಕೆ ಅವಕಾಶ ಇಲ್ಲ. ಜನವರಿ 23ರಿಂದ ಭಕ್ತರಿಗೆ ಶ್ರೀರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಅಯೋಧ್ಯೆಯಲ್ಲಿ ಮನೆ ನಿರ್ವಿುಸಲಿರುವ ಅಮಿತಾಭ್ಮುಂಬೈ: ಬಾಲಿವುಡ್​ನ ಬಿಗ್​ಬಿ ಎಂದೇ ಖ್ಯಾತಿ ಪಡೆದ ನಟ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ಮನೆ ನಿರ್ವಿುಸಲು 14.5 ಕೋಟಿ ರೂಪಾಯಿ ವೆಚ್ಚದ ನಿವೇಶನ ಖರೀದಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಸಮಯದಲ್ಲಿಯೇ ಬಿಗ್​ಬಿ ಈ ಆಸ್ತಿ ಖರೀದಿ ಮಾಡಿದ್ದಾರೆ. ಜನವರಿ 22ರಂದು ಉದ್ಘಾಟನೆಗೊಳ್ಳಲಿರುವ ಸರಯು ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ನಲ್ಲಿ ಈ ಖರೀದಿ ಮಾಡಿದ್ದಾರೆ. ಪ್ರಸಕ್ತ ನಿವೇಶನದಲ್ಲಿ 10 ಸಾವಿರ ಚದರಡಿ ಮನೆಯನ್ನು ನಿರ್ವಿುಸಲು ಅಮಿತಾಭ್ ಉದ್ದೇಶಿಸಿದ್ದಾರೆ.
ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಅಯೋಧ್ಯೆಯಲ್ಲಿ ಮನೆ ಕಟ್ಟಲು ಎದುರು ನೋಡುತ್ತಿದ್ದೇನೆ. ಅಯೋಧ್ಯೆಯ ಪುರಾತನ ಅಧ್ಯಾತ್ಮ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯು ಭೌಗೋಳಿಕೆ ಗಡಿಗಳನ್ನು ಮೀರಿದ ಭಾವನಾತ್ಮಕ ಸಂಬಂಧವನ್ನು ಬೆಸೆದಿದೆ. ಅಯೋಧ್ಯೆಯಲ್ಲಿ ನೆಲೆಸುವ ಪ್ರಯಾಣದ ಪ್ರಾರಂಭ ಇದಾಗಿದೆ. ಅಲ್ಲಿ ಸಂಪ್ರದಾಯ ಮತ್ತು ಆಧುನಿಕತೆ ಎರಡೂ ಇದೆ. ನನ್ನನ್ನು ಪ್ರಭಾವಿಸಿರುವ ಭಾವನಾತ್ಮಕ ಅಂಶಗಳೂ ಇವೆ.
| ಅಮಿತಾಭ್ ಬಚ್ಚನ್ ನಟ
ಯುವಿ ಹೆಸರಿನಲ್ಲಿದ್ದ ಐತಿಹಾಸಿಕ ದಾಖಲೆಯನ್ನು ಪುಡಿ ಪುಡಿ ಮಾಡಿದ ಕರ್ನಾಟಕದ ಯುವ ಕ್ರಿಕೆಟಿಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + six =
Remember me
