ಬೆಂಗಳೂರು:ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕೆಜಿಎಫ್-2 ಚಿತ್ರದ ಮ್ಯೂಸಿಕ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.ಇದನ್ನೂ ಓದಿ:ಡಾ. ವಿಜಯ ಸಂಕೇಶ್ವರರ ತ್ಯಾಗದಿಂದ ಯತ್ನಾಳ್ ಕೇಂದ್ರ ಸಚಿವ ಆಗಲು ಸಾಧ್ಯವಾಗಿದ್ದು: ಮುರುಗೇಶ್ ನಿರಾಣಿಕಳೆದ ವರ್ಷ ನವೆಂಬರ್‌ನಲ್ಲಿ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ವೇಳೆ ಬ್ಲಾಕ್‌ಬಸ್ಟರ್ ಕನ್ನಡದ ಚಲನಚಿತ್ರ ಕೆಜಿಎಫ್-2 ಹಾಡನ್ನು ಅನಧಿಕೃತವಾಗಿ ಬಳಸಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇಟ್ ವಿರುದ್ಧ ಸಂಗೀತ ಕಂಪನಿ ಎಂಆರ್‌ಟಿ ಮ್ಯೂಸಿಕ್ ದಾಖಲಿಸಿದ ಎಫ್‌ಐಆರ್ ದಾಖಲಿಸಿತ್ತು.ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಪೀಠವು, ಕಾಂಗ್ರೆಸ್ ನಾಯಕರು ದೂರುದಾರರ ಹಕ್ಕುಸ್ವಾಮ್ಯವನ್ನು ಲಘುವಾಗಿ ತೆಗೆದುಕೊಂಡಂತೆ ತೋರುತ್ತಿದೆ ಎಂದು ಹೇಳಿದರು. ಅರ್ಜಿದಾರರು ಅನುಮತಿಯಿಲ್ಲದೆ ಮೂಲ ಕೋಡ್​​​ನ್ನು ತಿದ್ದಿರುವುದು ನಿಸ್ಸಂದೇಹವಾಗಿ ದೂರುದಾರರ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.ಏನಿದು ಪ್ರಕರಣ?ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆಯನ್ನು ಪ್ರಚಾರ ಮಾಡುವುದಕ್ಕಾಗಿ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಆ ವಿಡಿಯೋದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಇದ್ದರು. ವಿಡಿಯೋದ ಹಿನ್ನೆಲೆಯಲ್ಲಿ ‘ಕೆಜಿಎಫ್‌: ಚಾಪ್ಟರ್ 2’ ಸಿನಿಮಾದ ಹಿಂದಿ ವರ್ಷನ್‌ನ  ಸುಲ್ತಾನ್​ ಎಂಬ ಗೀತೆಯನ್ನು ಬಳಕೆ ಮಾಡಲಾಗಿತ್ತು. ಆ ಹಾಡಿನ ಹಕ್ಕುಗಳು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಬಳಿ ಇದ್ದು, ಯಾವುದೇ ಅನುಮತಿ ಪಡೆಯದೇ ‘ಕೆಜಿಎಫ್‌ 2’ ಸಿನಿಮಾದ ಗೀತೆಯನ್ನು ಬಳಕೆ ಮಾಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯು ಕೇಸ್ ದಾಖಲು ಮಾಡಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
