ಬೆಂಗಳೂರು:ನ್ಯಾಯಾಲಯಗಳು ಕಾನೂನು ಪಾಲನೆಯಲ್ಲಿ ಹಿಂದೆ ಇರುವವರಿಗೆ ಆಗಾಗ ಚಾಟಿ ಬೀಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಬಡವ, ಶ್ರೀಮಂತರ ವ್ಯತ್ಯಾಸ ನೋಡದೇ ಎಲ್ಲರನ್ನೂ ಸಮಾನವಾಗಿ ನೋಡುವ ನಮ್ಮ ಕರ್ನಾಟಕ ಹೈ ಕೋರ್ಟ್ ಇದೀಗ ಫೇಸ್​ಬುಕ್​ಗೂ ಚುರುಕು ಮುಟ್ಟಿಸಿದೆ.
ಸೌದಿ ಅರೇಬಿಯಾದಲ್ಲಿ ಬಂಧಿತನಾದ ವ್ಯಕ್ತಿಯ ಪ್ರಕರಣದಲ್ಲಿ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ಕಾರಣಕ್ಕೆ ಫೇಸ್​​ಬುಕ್​ಗೆ ಕರ್ನಾಟಕ ಹೈ ಕೋರ್ಟ್ ಎಚ್ಚರಿಕೆ ನೀಡಿದೆ. ಮಂಗಳೂರು ಪೊಲೀಸರು, ಫೇಸ್​ಬುಕ್ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದು ಈ ಕಾರಣಕ್ಕೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಇದ್ದ ಪೀಠ ಗಂಭೀರ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಅಪರಿಚಿತನೊಂದಿಗೆ ಫೇಸ್​ಬುಕ್​​ನಲ್ಲಿ ಸ್ನೇಹ; ವಿವಾಹಿತ ದಲಿತ ಮಹಿಳೆಗೆ ಕಾದಿತ್ತು ಆಪತ್ತು!
ಮಂಗಳೂರಿನ ಬಿಕರನಕಟ್ಟೆ ಮೂಲದ ಶೈಲೇಶ್ ಎಂಬುವರು 2019 ರಲ್ಲಿ NRC CAA ಕಾಯ್ದೆ ಬೆಂಬಲಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ‌ ಅವರಿಗೆ ಬೆದರಿಕೆ ಕರೆಗಳು ಬರಲು ಆರಂಭಿಸಿದ್ದವು. ಈ ಕಾರಣಕ್ಕೆ ಶೈಲೇಶ್ ಫೇಸ್​ಬುಕ್ ನಿಷ್ಕ್ರಿಯಗೊಳಿಸಿದ್ದರು. ಈ ಸಂದರ್ಭದಲ್ಲಿ ಶೈಲೇಶ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು.
2020ರಲ್ಲಿ ಶೈಲೇಶ್ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ನಕಲಿ ‌ಖಾತೆ ತೆರೆದು ಸೌದಿ ಅರೇಬಿಯಾ ದೊರೆ ಹಾಗೂ ಧರ್ಮವನ್ನ ಅವಹೇಳನ ಮಾಡಿ ಪೋಸ್ಟ್ ಹಾಕಿದ್ದರು. ಈ ಕಾರಣಕ್ಕೆ ಸೌದಿ ಅರೇಬಿಯಾದಲ್ಲಿ ಶೈಲೇಶ್​ರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ:ಜನಾರ್ದನ ರೆಡ್ಡಿಗೆ ಶಾಕ್​ ಕೊಟ್ಟ ನ್ಯಾಯಾಲಯ: ರೆಡ್ಡಿ ದಂಪತಿ ಒಡೆತನದ ಆಸ್ತಿಗಳ ಜಪ್ತಿಗೆ ಆದೇಶ
ಹೀಗಾಗಿ ಕೇಂದ್ರ‌ ಸರ್ಕಾರಕ್ಕೆ ತನ್ನ ಗಂಡನನ್ನು ಬಿಡುಗಡೆ ಮಾಡಿಸಿ ಮನೆಗೆ ಕಳಿಸಿ ಎಂದು ಶೈಲೇಶ್ ಪತ್ನಿ ಮನವಿ ಸಲ್ಲಿಸಿದ್ದರು. ಅದರೊಂದಿಗೆ ಮಂಗಳೂರು ಪೊಲೀಸರಿಗೂ ದೂರು ನೀಡಿದ್ದರು. ಆದರೆ ಇದರ ಬಗ್ಗೆ ಸಮರ್ಪಕ ಕ್ರಮ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಶೈಲೇಶ್ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಫೇಸ್ಬುಕ್​ನಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಮಂಗಳೂರು ಪೊಲೀಸರು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ. ಈ ಕಾರಣಕ್ಕೆ ಫೇಸ್​ಬುಕ್ ಬಂದ್ ಮಾಡಿಸಬೇಕಾಗುತ್ತೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದ್ದು ಗರಂ ಆಗಿದೆ.
ಇದನ್ನೂ ಓದಿ:ಮಂಗಳ ದೋಷ ನಿವಾರಣೆ ಮಾಡುವುದಾಗಿ ಮನೆಗೆ ಬಂದ ಫೇಸ್​ಬುಕ್​ ಫ್ರೆಂಡ್​ ಮಾಡಿದ್ದು ಮಾತ್ರ ನೀಚ ಕೃತ್ಯ!
ಒಂದು ವಾರದಲ್ಲಿ ವರದಿ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಮಂಗಳೂರು ಪೊಲೀಸರಿಗೆ ಸೂಚನೆಯನ್ನು ನ್ಯಾಯಾಲಯ ನೀಡಿದ್ದು ವಿಚಾರಣೆಯನ್ನು 22 ನೇ ತಾರೀಕಿಗೆ ಮುಂದೂಡಿಕೆ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 18 =
Remember me
