ನವದೆಹಲಿ:ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರನ್ನೇ ತಪಾಸಣೆ ಮಾಡಿ ಚುನಾವಣಾ ಆಯೋಗದಿಂದ ಕ್ರಮ ಎದುರಿಸಿದ್ದ ಐಎಎಸ್ ಅಧಿಕಾರಿಯೊಬ್ಬರು ಇದೀಗ ತಬ್ಲಿಘಿಗಳನ್ನು ಪ್ರಶಂಸಿಸಿ ವಿವಾದಕ್ಕೆ ಒಳಗಾಗಿದ್ದಾರೆ.
ಕಳೆದ ವರ್ಷ ಲೋಕಸಭಾ ಚುನಾವಣೆ ವೇಳೆ ಒಡಿಶಾದ ಸಂಭಲ್‌ಪುರ ಕ್ಷೇತ್ರದಲ್ಲಿ ವೀಕ್ಷಕರಾಗಿ ನೇಮಕಗೊಂಡಿದ್ದ ಐಎಎಸ್ ಅಧಿಕಾರಿ ಮೊಹಮದ್ ಮೊಹ್ಸೀನ್, ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ತಪಾಸಿಸಿದ್ದರು. ಎಸ್‌ಪಿಜಿ ರಕ್ಷಣೆ ಪಡೆದವರಿಗೆ ಸಂಬಂಧಿಸಿದಂತೆ ಇರುವ ನಿಯಮಗಳ ಪಾಲನೆ ಮಾಡಿಲ್ಲವೆಂಬ ಕಾರಣಕ್ಕೆ ಆಯೋಗವು ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಿತ್ತು. ಈ ಘಟನೆ ದೇಶಾದ್ಯಂತ ಪರ-ವಿರೋಧ ವಾಗ್ವಾದಕ್ಕೆ ಸಾಕ್ಷಿಯಾಗಿತ್ತು.
ಇದೀಗ ಅದೇ ಅಧಿಕಾರಿ ಇತ್ತೀಚೆಗೆ ಟ್ವಿಟರ್‌ನಲ್ಲಿರುವ ತಮ್ಮ ಖಾಸಗಿ ಖಾತೆಯಲ್ಲಿ ತಬ್ಲಿಘಿ ಜಮಾತ್ ಸಂಘಟನೆಯ ಕಾರ್ಯಕರ್ತರ ಕುರಿತು ಪ್ರಶಂಸಾತ್ಮಕ ರೀತಿಯಲ್ಲಿ ಟ್ವೀಟ್ ಮಾಡಿದ್ದಲ್ಲದೆ, ಕೆಲವು ಮಾಧ್ಯಮಗಳ ಕಾರ‌್ಯನಿರ್ವಹಣೆಯ ಬಗ್ಗೆಯೂ ಟೀಕೆ ವ್ಯಕ್ತಪಡಿಸಿದ್ದರು.
‘‘ದೆಹಲಿಯಲ್ಲಿರುವ ಮುನ್ನೂರಕ್ಕೂ ಹೆಚ್ಚು ತಬ್ಲಿಘಿ ಹೀರೋಗಳು ತಮ್ಮ ಪ್ಲಾಸ್ಮಾವನ್ನು ದೇಶಕ್ಕಾಗಿ ದೇಣಿಗೆ ನೀಡಿದ್ದಾರೆ. ಗೋದಿ ಮೀಡಿಯಾ ಈಗ ಏನನ್ನುತ್ತದೆ? ಈ ಹೀರೋಗಳ ಮಾನವೀಯ ಕಾರ‌್ಯಗಳನ್ನು ಅವರು ತೋರಿಸುವುದಿಲ್ಲ’’ ಎಂದು ಆ ಟ್ವೀಟ್‌ನಲ್ಲಿ ಟೀಕಿಸಿದ್ದರು.
ಇದನ್ನೂ ಓದಿ:‘ಇನ್ನೊಂದೇ ದಿನ..ಅದೆಷ್ಟೋ ಜನರ ಆಸೆ ಈಡೇರಲು…’; ರಾಜ್ಯ ಸರ್ಕಾರದಿಂದ ಗ್ರೀನ್​ ಸಿಗ್ನಲ್​ ಸಿಕ್ರೂ ಕಂಟೇನ್​ಮೆಂಟ್​ ಝೋನ್​ನವರಿಗಿಲ್ಲ ಅದೃಷ್ಟ..!
ಇದಕ್ಕೆ ಹಲವಾರು ಜನ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ಕೂಡ ಇದನ್ನು ಗಮನಿಸಿ ಮೊಹ್ಸೀನ್ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಮೊಹ್ಸೀನ್ ಈಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಏಪ್ರಿಲ್ 30ರಂದೇ ನೋಟಿಸ್ ನೀಡಲಾಗಿದ್ದು, ಉತ್ತರಿಸಲು ಐದು ದಿನಗಳ ಕಾಲಾವಕಾಶ ನೀಡಲಾಗಿದೆ.
ಅಷ್ಟರೊಳಗೆ ಪ್ರತಿಕ್ರಿಯೆ ನೀಡದಿದ್ದರೆ ಈ ಟ್ವೀಟನ್ನು ಸಮರ್ಥಿಸಿಕೊಳ್ಳಲು ಅವರ ಬಳಿ ಯಾವುದೇ ಸಾಕ್ಷಾೃಧಾರ ಇಲ್ಲವೆಂದು ಪರಿಗಣಿಸಿ ನಿಯಮಾವಳಿಗಳ ಪ್ರಕಾರವೇ ಸರ್ಕಾರ ಕ್ರಮಕ್ಕೆ ಮುಂದಾಗುತ್ತದೆ.
ಇದನ್ನೂ ಓದಿ:2014ರಲ್ಲೇ ನಡೆದಿತ್ತು ಪ್ರಿಯಾಂಕಾ ಚೋಪ್ರಾ ಮದುವೆ!! ಹಾಗಾದರೆ ನಿಕ್​ ಜೋನಸ್​ ಪಿಗ್ಗಿಗೆ ಎರಡನೇ ಪತಿಯೇ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
