ಬೆಂಗಳೂರು:ರಷ್ಯಾದ ಪೌರತ್ವ ಮತ್ತು ದೊಡ್ಡ ಸಂಬಳದ ಆಮಿಷ ಒಡ್ಡಿ ಕರ್ನಾಟಕ ಮೂಲದ ಯುವಕರನ್ನು ರಷ್ಯಾ-ಉಕ್ರೇನ್ ಯುದ್ಧಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಜಿಲ್ಲಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದ ಮಾಹಿತಿ ಇದೆ ಎಂದರು.
ಇಂದು (ಫೆ.22) ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾ ಸೇನೆಯು ಅಮಾಯಕ ಯುವಕರನ್ನು ಯುದ್ಧಕ್ಕೆ ಬಳಸಿಕೊಂಡಿದೆ. ಈ ಮಾಹಿತಿಯನ್ನು ನಮ್ಮ ಜಿಲ್ಲಾಧಿಕಾರಿ ನೀಡಿದ್ದಾರೆ ಎಂದರು.
ಉನ್ನತ ಹುದ್ದೆ ಪಡೆಯಲು ತೆರಳಿದ್ದ ಯುವಕರನ್ನು ಯುದ್ಧಕ್ಕೆ ಬಳಸಿಕೊಂಡ ಮಾಹಿತಿ ಇದೆ. ರಷ್ಯಾದ ವ್ಯಾಗ್ನರ್​​ ಗ್ರೂಪ್​ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಕರ್ನಾಟಕ ಮಾತ್ರವಲ್ಲದೆ, ತೆಲಂಗಾಣ, ಉತ್ತರ ಭಾರತದ ಯುವಕರು ಸಿಲುಕಿರುವ ಮಾಹಿತಿ ಇದೆ. ಈ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಮನಕ್ಕೆ ತಂದಿದ್ದು, ವಿದೇಶಾಂಗ ಸಚಿವರ ಜೊತೆ ಮಾತನಾಡುವಂತೆ ಮನವಿ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ರಷ್ಯಾಕ್ಕೆ ಉದ್ಯೋಗಕ್ಕೆ ತೆರಳಿ ಯುದ್ಧದಲ್ಲಿ ಬಳಕೆಯಾಗಿರುವ ರಾಜ್ಯ ಹಾಗೂ ದೇಶದ ಯುವಕರನ್ನು ಕೇಂದ್ರ ಸರ್ಕಾರ ರಕ್ಷಣೆ ಮಾಡಬೇಕಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
‘ದಯವಿಟ್ಟು ರಕ್ಷಿಸಿ, ನಮ್ಮ ಪ್ರಾಣ ಅಪಾಯದಲ್ಲಿದೆ’; ರಷ್ಯಾದಿಂದ ಬಲವಂತವಾಗಿ ವ್ಯಾಗ್ನರ್ ಸೇನೆಗೆ ಸೇರ್ಪಡೆಗೊಂಡ ಕನ್ನಡಿಗರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 1 =
Remember me
