ಬೆಂಗಳೂರು:ಉತ್ತರಾಖಂಡದಲ್ಲಿ ಕುಂಭದ್ರೋಣ ಮಳೆ ಹಾಗೂ ಪ್ರವಾಹದಲ್ಲಿ ಸಿಲುಕಿದ್ದ 96 ಜನರ ಪೈಕಿ 92 ಕನ್ನಡಿಗರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೂ ಸಂಪರ್ಕಕ್ಕೆ ಸಿಗದ ನಾಲ್ವರಲ್ಲಿ ಮೂವರು ಬದರಿನಾಥದಲ್ಲಿ ಸಿಲುಕಿದ್ದಾರೆನ್ನಲಾಗಿದ್ದು, ಸದ್ಯ ಅವರನ್ನು ತಲುಪಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೀದರ್ ಜಿಲ್ಲೆಯ 30ಕ್ಕೂ ಹೆಚ್ಚು ಜನ ಪ್ರವಾಹದಲ್ಲಿ ಸಿಲುಕಿದ್ದರು. ತಂಡದಲ್ಲಿದ್ದ ಉಮೇಶ್ ಪಾಟೀಲ್ ವಿಡಿಯೋ ಮಾಡಿ ಪ್ರವಾಹದ ಪರಿಸ್ಥಿತಿ ವಿವರಿಸಿದ್ದಾರೆ. ಮಳೆ ಬೀಳುತ್ತಿದ್ದರೂ ನಾವೆಲ್ಲ ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ.
ಕಲಬುರಗಿ ಜಿಲ್ಲೆಯ ಬಸನೂರು ಗ್ರಾಮದಿಂದ 10ಕ್ಕೂ ಅಧಿಕ ಮಂದಿ ಕಳೆದ ಅ.15ರಂದು ಕೇದಾರನಾಥ ತಲುಪಿದ್ದರು. ಮಳೆ ಮತ್ತು ಹಿಮದ ಪರಿಸ್ಥಿತಿಯಲ್ಲಿ ಸಿಲುಕಿರುವ ಬಗ್ಗೆ ಆತಂಕವಿತ್ತು. ಆದರೆ, ಪ್ರವಾಸಿಗನೊಬ್ಬ ವಿಡಿಯೋ ಮಾಡಿದ್ದು, ‘ಮಳೆ ಮತ್ತು ಹಿಮದಿಂದ ಕೇದಾರನಾಥ ಹಾಗೂ ಬದರಿನಾಥ ನಡುವೆ ಸಿಲುಕಿದ್ದೆವು. ಒಂದೇ ಲಾಡ್ಜ್​ನಲ್ಲಿ ಮೂರು ದಿನ ತಂಗಿದ್ದೆವು. ಈ ವೇಳೆ ಬಹಳ ಕಷ್ಟವಾಗಿತ್ತು. ಬಳಿಕ ದುಪ್ಪಟ್ಟು ದರ ಕೊಟ್ಟು ಹರಿದ್ವಾರಕ್ಕೆ ತೆರಳಿದ್ದೇವೆ. ಸದ್ಯ ಎಲ್ಲರೂ ಸುರಕ್ಷಿತವಾಗಿದ್ದೇವೆ. ಯಾರೂ ಆತಂಕಪಡಬೇಡಿ’ ಎಂದು ಹೇಳಿದ್ದಾರೆ.
ವಿಜಯಪುರ ವೈದ್ಯೆ ಅತಂತ್ರಸೇನೆಯಲ್ಲಿ ವೈದ್ಯರಾಗಿರುವ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಡಾ.ಅನಿತಾ ಪಂಪಣ್ಣನವರ್ ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಅನಿತಾರನ್ನು ಕರೆತರಲು ರಾಜ್ಯ ತಂಡ ಕಾರ್ಯಾಚರಣೆ ಮುಂದುವರಿಸಿದೆ. ಸಿಂದಗಿಯಲ್ಲಿರುವ ಅನಿತಾ ತಂದೆ ಪ್ರೊ.ಶಂಕರಪ್ಪ ಪಂಪಣ್ಣನವರ್ ‘ದೀಪಾವಳಿಗೆ ರಜೆ ಹಾಕಿ ಊರಿಗೆ ಬರುವ ಸಂದರ್ಭದಲ್ಲಿಯೇ ಪ್ರವಾಹದಲ್ಲಿ ಸಿಲುಕಿದ್ದಾಳೆ. ಕರ್ತವ್ಯ ನಿರ್ವಹಿಸುತ್ತಿರುವ ಸೇನಾ ಆಸ್ಪತ್ರೆಯ ಎರಡು ಬದಿಯಲ್ಲಿ ಗುಡ್ಡ ಕುಸಿದು ಸಿಲುಕಿಕೊಂಡಿದ್ದು, ಸುರಕ್ಷಿತ ಪ್ರದೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ. 4 ದಿನವಾಗಿದ್ದು, ಆದಷ್ಟು ಬೇಗ ವಿಮಾನದ ಮೂಲಕ ಮಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು’ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
‘ಪ್ರತಿ ನಿತ್ಯ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದೇವೆ. ಮಗಳ ಜತೆ ಇನ್ನೂ ನಾಲ್ಕೈದು ಮಂದಿ ಇದ್ದಾರೆ. ಆಸ್ಪತ್ರೆಯ ಸಮೀಪದಲ್ಲೇ ಇದ್ದು, ಪಕ್ಕದ ಹೋಟೆಲ್​ನಿಂದ ಊಟ ತರಿಸುತ್ತಿದ್ದೇವೆ. ಧೈರ್ಯವಾಗಿರಿ, ಸುರಕ್ಷಿತವಾಗಿ ಮರಳುತ್ತೇನೆ ಎಂದು ಮಗಳು ಹೇಳಿದ್ದಾಳೆ’ ಎಂದು ಶಂಕರಪ್ಪ ಮಾಹಿತಿ ನೀಡಿದ್ದಾರೆ.
ಕನ್ನಡಿಗರು ಸಂಪರ್ಕಿಸಿ: ಉತ್ತರಾಖಂಡದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಸಹಾಯವಾಣಿ ತೆರೆದಿದೆ. ಯಾತ್ರಿಕರು ಮತ್ತು ಪ್ರವಾಸಿಗರು 080-1070 (ಟೋಲ್ ಫ್ರೀ) ಮತ್ತು 080- 2234 0676ಕ್ಕೆ ಸಂಪರ್ಕಿಸಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 4 =
Remember me
