ಬೆಂಗಳೂರು:ಅಲ್ಲಿ ಇಲ್ಲಿ ಎನ್ನದೆ ಪ್ರತಿನಿತ್ಯವೂ ಎಲ್ಲ ಕಡೆ ಹಲವು ಮೊಬೈಲ್‌ಫೋನ್‌ಗಳು ಕಳವಾಗುತ್ತವೆ. ಅವುಗಳಲ್ಲಿ ಕೆಲವು ಪತ್ತೆಯಾದರೆ ಇನ್ನು ಕೆಲವು ಸಿಗುವುದೇ ಇಲ್ಲ. ಅದಾಗ್ಯೂ ಪೊಲೀಸರು ಒಂದಷ್ಟು ಮೊಬೈಲ್‌ಫೋನ್‌ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಾರಸುದಾರರಿಗೆ ಒಪ್ಪಿಸುತ್ತಿರುತ್ತಾರೆ. ಆ ಪೈಕಿ ಈಗ ಕರ್ನಾಟಕ ಪೊಲೀಸರು ಮೊದಲ ಸ್ಥಾನದಲ್ಲಿದ್ದಾರೆ.
ಅರ್ಥಾತ್.. ಕಳವಾದ ಇಲ್ಲವೇ ಕಾಣೆಯಾದ ಪೈಕಿ ಅತಿಹೆಚ್ಚು ಮೊಬೈಲ್‌ಫೋನ್‌ಗಳನ್ನು ಕರ್ನಾಟಕ ಪೊಲೀಸರು ಪತ್ತೆ ಮಾಡಿ ಅವುಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಸಿಇಐಆರ್ ಪೋರ್ಟಲ್ ಮೂಲಕ ಕಾರ್ಯಾಚರಣೆ ನಡೆಸಿ ಅವರು ಈ ಮೊಬೈಲ್‌ಫೋನ್‌ಗಳನ್ನು ಪತ್ತೆ ಹಚ್ಚಿದ್ದರು.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಕಳವಾದ ಮೊಬೈಲ್‌ಫೋನ್‌ಗಳನ್ನು ಪತ್ತೆ ಮಾಡಲೆಂದೇ ಕೇಂದ್ರ ದೂರಸಂಪರ್ಕ ಇಲಾಖೆ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಎಂಬ ಈ ಪೋರ್ಟಲ್ ಆರಂಭಿಸಿದೆ. ಕರ್ನಾಟಕ ಪೊಲೀಸರು ಕಳವಾದ ಇಲ್ಲವೇ ಕಾಣೆಯಾದ 16,232 ಮೊಬೈಲ್​ಫೋನ್​ಗಳನ್ನು ಈ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಅವುಗಳಲ್ಲಿ 8,878 ಫೋನ್​​ಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ದೆಹಲಿ ಪೊಲೀಸರು 2,10,879 ಮೊಬೈಲ್​ಫೋನ್​​ಗಳನ್ನು ಪತ್ತೆ ಮಾಡಿದ್ದರೂ ಆ ಪೈಕಿ 1,491 ಫೋನ್​ಗಳನ್ನಷ್ಟೇ ವಾರಸುದಾರರಿಗೆ ಒಪ್ಪಿಸಿದ್ದಾರೆ. ತೆಲಂಗಾಣ ಪೊಲೀಸರು 5,134 ಹಾಗೂ ಮಹಾರಾಷ್ಟ್ರ ಪೊಲೀಸರು 4,334 ಮೊಬೈಲ್​ಫೋನ್​​ಗಳನ್ನು ವಾರಸುದಾರರಿಗೆ ಒಪ್ಪಿಸುವ ಮೂಲಕ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

ಮದುವೆಯಾಗುವ ಕನಸು ಚಿಗುರಿಸಿದ ಟೊಮ್ಯಾಟೋ; ಹುಡುಗಿ ಹುಡುಕಲು ಮುಂದಾದ ಕೃಷಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − five =
Remember me
