ಬೆಂಗಳೂರು:ಕರ್ನಾಟಕದಲ್ಲಿ ಈವರೆಗೆ 1,11,57,883 ಜನರು ಎರಡೂ ಡೋಸ್​ ಕರೊನಾ ಲಸಿಕೆಗಳನ್ನು ಪಡೆದು ಕರೊನಾ ವಿರುದ್ಧ ಸುರಕ್ಷತೆಯನ್ನು ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯವು ದೇಶದಲ್ಲೇ 6ನೇ ಸ್ಥಾನವನ್ನು ಗಳಿಸಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಟ್ವಿಟರ್​ನಲ್ಲಿ ತಿಳಿಸಿದೆ.
ದೇಶದಲ್ಲೇ ಅತಿಹೆಚ್ಚು ಪೂರ್ಣ ಲಸಿಕೀಕರಣವಾಗಿರುವ ರಾಜ್ಯವೆಂದರೆ ಮಹಾರಾಷ್ಟ್ರ. ಸೆಪ್ಟೆಂಬರ್​ 5 ರಂದು ಬೆಳಿಗ್ಗೆ 8 ಗಂಟೆಗೆ ಪ್ರಕಟವಾಗಿರುವ ಕೇಂದ್ರ ಸರ್ಕಾರದ ಕೋವಿನ್​ ಪಟ್ಟಿಯಲ್ಲಿ 2ನೇ ಡೋಸ್​ ಲಸಿಕೀಕರಣದ ಕೆಲವು ರಾಜ್ಯವಾರು ವಿವರಗಳು ಹೀಗಿವೆ:-
ಮಹಾರಾಷ್ಟ್ರ: 1,71,90,818 ಜನರುಉತ್ತರ ಪ್ರದೇಶ: 1,27,53,189 ಜನರುಗುಜರಾತ್​: 1,25,24,914 ಜನರುಪಶ್ಚಿಮ ಬಂಗಾಳ: 1,21,91,426 ಜನರುರಾಜಸ್ಥಾನ: 1,14,83,961 ಜನರುಕರ್ನಾಟಕ: 1,11,57,883 ಜನರು
ಇದನ್ನೂ ಓದಿ:ಶಾಲೆಗಳನ್ನು ತೆರೆಯಬಹುದೇ? ಮಕ್ಕಳಿಗೆ ಲಸಿಕೆ ಸಿಗೋದು ಯಾವಾಗ? ಏಮ್ಸ್​ ನಿರ್ದೇಶಕರು ಏನು ಹೇಳಿದ್ದಾರೆ ಓದಿ
ಈವರೆಗೆ ದೇಶಾದ್ಯಂತ 15,89,31,429 ಜನರು ಪೂರ್ಣ ಲಸಿಕೀಕರಣ ಹೊಂದಿದ್ದಾರೆ. ಕರ್ನಾಟಕದಲ್ಲಿ ಈವರೆಗೆ 4,47,97,767 ಡೋಸ್​​ ಕರೊನಾ ಲಸಿಕೆಗಳನ್ನು ನೀಡಲಾಗಿದ್ದು, ಡೋಸ್​ಗಳ ವಿಷಯದಲ್ಲೂ ರಾಜ್ಯ ಆರನೇ ಸ್ಥಾನದಲ್ಲಿದೆ.
ಒಂದೇ ಆಟದಲ್ಲಿ ಭಾರತಕ್ಕೆ ಎರಡು ಪದಕ! ಚಿನ್ನ ಗೆದ್ದ ಪ್ರಮೋದ್​ ಭಗತ್​​… ಕಂಚು ಗೆದ್ದ ಮನೋಜ್​ ಸರ್ಕಾರ್​!​

ತಮಿಳು ಚಿತ್ರದ ಮಾದರಿಯಲ್ಲಿ ಡ್ರಗ್ಸ್​ ಸಾಗಿಸುತ್ತಿದ್ದ ಖದೀಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
