ಬೆಂಗಳೂರು:ಕೋವಿಡ್ 19 ಹೆಚ್ಚಾಗಿರುವ ಆರು ರಾಜ್ಯಗಳಿಂದ ವಾಪಸಾಗುವವರು ಕಡ್ಡಾಯವಾಗಿ 5 ರಿಂದ 7 ದಿನಗಳ ಮಧ್ಯೆ ಕೋವಿಡ್- 19 ಪರೀಕ್ಷೆಗೊಳಪಡಬೇಕೆಂದು ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.ಮೇ 21 ರಂದು ಹೊರಡಿಸಿದ ರಾಜ್ಯದ ಹೊಸ ಪರೀಕ್ಷಾ ನೀತಿಯ ಒಂದು ಭಾಗ ಇದಾಗಿದೆ.ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ಮಧ್ಯ ಪ್ರದೇಶದಿಂದ ವಾಪಸಾಗುವವರು ರೋಗ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆಗೊಳಪಡಬೇಕು ಎಂದು ಸರ್ಕಾರ ಆದೇಶಿಸಿದೆ.
ಈ ಆರು ರಾಜ್ಯಗಳ ಪೈಕಿ ಮೂರು ರಾಜ್ಯಗಳು ಅಂದರೆ, ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ ನಿಂದ ಹಿಂದಿರುಗಿದ ಬಹಳಷ್ಟು ಜನರನ್ನು ಪರೀಕ್ಷಿಸಿದಾಗ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಮೇ 18 ರಂದು ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ – ಈ ಮೂರು ರಾಜ್ಯಗಳ ಜನರ ಪ್ರವೇಶವನ್ನು ನಿರ್ಬಂಧಿಸಿದ್ದರು. ಈ ನಿರ್ಧಾರದಿಂದಾಗಿ ಕರ್ನಾಟಕಕ್ಕೆ ಪ್ರವೇಶಿಸಲು ಈ ರಾಜ್ಯಗಳಲ್ಲಿ ಸದ್ಯ ಇರುವ ಜನರ 21,607 ವಿನಂತಿಗಳನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ:ರಾಮಜನ್ಮ ಭೂಮಿಯಲ್ಲಿ ಮತ್ತಷ್ಟು ಪುರಾತನ ವಿಗ್ರಹ, ಶಿವಲಿಂಗ, ಅವಶೇಷಗಳು ಪತ್ತೆ
ಪ್ರಸ್ತುತ ಪರೀಕ್ಷಾ ನೀತಿಯಡಿ, ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಮರಳುವ ಎಲ್ಲರನ್ನು ರೋಗಲಕ್ಷಣಗಳಿಗಾಗಿ ಪರೀಕ್ಷಿಸಲಾಗುತ್ತದೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ COVID-19 ಪರೀಕ್ಷಿಸಲಾಗುತ್ತದೆ ಮತ್ತು ಆಸ್ಪತ್ರೆಯ ಕ್ವಾರಂಟೈನ್​​ಗೆ ಕಳುಹಿಸಲಾಗುತ್ತದೆ. ರೋಗಲಕ್ಷಣವಿಲ್ಲದವರನ್ನು 14 ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್​​ಗೆ ಕಳುಹಿಸಲಾಗುತ್ತದೆ ಮತ್ತು ಬಿಡುಗಡೆಯ ಮೊದಲು ಪರೀಕ್ಷಿಸಲಾಗುತ್ತದೆ.
ರೋಗಲಕ್ಷಣವಿಲ್ಲದವರು ಕೋವಿಡ್ ಪ್ರಕರಣಗಳು ಹೆಚ್ಚಿರುವ ರಾಜ್ಯಗಳಿಂದ ಆಗಮಿಸಿದ 5 ಮತ್ತು 7 ನೇ ದಿನದ ನಡುವೆ ಒಮ್ಮೆ ಪರೀಕ್ಷೆಗೊಳಪಡಬೇಕೆಂದು ಗುರುವಾರದ ಆದೇಶದಲ್ಲಿ ಸರ್ಕಾರ ಸೂಚಿಸಿದೆ.ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿನ ಜನರಿಗೆ ಮೇ 31 ರವರೆಗೆ ಪ್ರವೇಶಕ್ಕೆ ಅನುಮತಿಸದಿರಲು ನಿರ್ಧರಿಸಿದ್ದು, ಅವರಿಗೆ ಹಂತ ಹಂತವಾಗಿ ಅವಕಾಶ ನೀಡಲಾಗುವುದು ಎಂದು ಸಿಎಂ ಸೋಮವಾರ ಹೇಳಿದ್ದಾರೆ.
ಕುತೂಹಲ ಹೆಚ್ಚಿಸಿತು ಬಾಂದಳದ ಆ ಬೆಳ್ಳಿ ಬೆಳಕು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 7 =
Remember me
