ದಾವಣಗೆರೆ:ಹೆತ್ತಾಕೆಗೇ ಬೇಡವಾದ ಐದು ದಿನಗಳ ಶಿಶುವೊಂದು ಕಾಣೆಯಾಗಿ ಸಿಕ್ಕಾಪಟ್ಟೆ ಗೊಂದಲ ಸೃಷ್ಟಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆ, ಆಸ್ಪತ್ರೆ ಸಿಬ್ಬಂದಿ ಎಲ್ಲರೂ ನೀಡುವ ತದ್ವಿರುದ್ಧ ಹೇಳಿಕೆಗಳಿಂದ ಇನ್ನಷ್ಟು ಗೊಂದಲು ಉಂಟು ಮಾಡಿದ್ದ ಮಗುವಿನ ನಾಪತ್ತೆ ಪ್ರಕರಣವಿದು.
ಹೊನ್ನಾಳಿಯ ನ್ಯಾಮತಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗರ್ಭಿಣಿಯೊಬ್ಬರಿಂದ ಶುರುವಾದ ಘಟನೆ ಇದೆ. ಅದಾಗಲೇ ಎರಡು ಮಕ್ಕಳ ತಾಯಿಯಾಗಿದ್ದ ವಿಧವೆ ಮಹಿಳೆ, ಮೂರನೆಯ ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಕೆಗೆ ಈ ಮಗು ಬೇಡವಾಗಿತ್ತು.
ಮೇ 20ರಂದು ಮಹಿಳೆಗೆ ಗಂಡುಮಗು ಹುಟ್ಟಿತು. ಈ ಮಗು ತಮಗೆ ಇಷ್ಟವಿಲ್ಲ ಎಂದು ಶಿಶು ಕಲ್ಯಾಣ ಇಲಾಖೆ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಗಳ ಮುಂದೆ ಮಹಿಳೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಗುವನ್ನು ತಮ್ಮ ಸುಪರ್ದಿಯಲ್ಲಿಯೇ ಬೆಳೆಸಲು ಇಲಾಖೆ ನಿರ್ಧರಿಸಿತ್ತು.
ಇದನ್ನೂ ಓದಿ:ಮಾವಿನ ತೋಟದಲ್ಲಿ ಬಾವಲಿಗಳ ಹೆಣದ ರಾಶಿ: ಇನ್ನೇನು ಕಾದಿದೆಯೋ ಆಪತ್ತು!
ನಂತರ ಇಲಾಖೆಯ ಅಧಿಕಾರಿಗಳು ಕೇಳಲು ಬಂದಾಗ ತಾನೇ ಮಗುವನ್ನು ಬೆಳೆಸುವುದಾಗಿ ಮಹಿಳೆ ಹೇಳಿದ್ದಳು. ಆಕೆಯ ಅಸ್ಪಷ್ಟ ಮಾತಿನಿಂದ ಅನುಮಾನಗೊಂಡಿದ್ದ ಅಧಿಕಾರಿಗಳು ಮಗುವನ್ನು ಮಾರಾಟ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ಆಕೆಯಿಂದ ಲಿಖಿತವಾಗಿ ಪಡೆದುಕೊಂಡಿದ್ದರು.
ಅಲ್ಲಿಂದ ಮಹಿಳೆ ಡಿಸ್​ಚಾರ್ಜ್​ ಆಗಿ ಹೋದಾಗ, ಮಗುವಿನ ವಿಷಯ ತಿಳಿಯಲು ಮಕ್ಕಳ ರಕ್ಷಣಾ ಸಮಿತಿಯ ಸಿಬ್ಬಂದಿ ಮನೆಗೆ ಹೋದಾಗ ಆ ಮಗು ಇರಲಿಲ್ಲ. ಮಗು ಎಲ್ಲಿ ಎಂದು ಕೇಳಿದಾಗ, ಮಗು ಸತ್ತು ಹೋಯಿತು ಎಂದಳು. ಇದರಿಂದ ಅನುಮಾನಗೊಂಡ ಸಿಬ್ಬಂದಿ ಮಗುವನ್ನು ಮಣ್ಣು ಮಾಡಿದ ಸ್ಥಳ ತೋರಿಸುವಂತೆ ಹೇಳಿದಾಗ, ಹೆದರಿದ ಮಹಿಳೆ, ಮಗುವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದಳು. ವೈದ್ಯರಿಗೆ ಮಗುವನ್ನು ಐದು ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ಆಕೆ ಹೇಳಿದಳು.
ಇದನ್ನೂ ಓದಿ:ಸುಂದರಿ ಸಿಕ್ಕಳೆಂದು ಜತೆಗಿದ್ದವಳ ದೇಹ ತುಂಡರಿಸಿ ಸೂಟ್​ಕೇಸ್​ನಲ್ಲಿ ತುಂಬಿದ!
ನಂತರ ಪೊಲೀಸರಿಗೆ ದೂರು ಹೋದಾಗ, ತನಿಖೆ ಆರಂಭಿಸಿದ ಪೊಲೀಸರು ಇದೆಲ್ಲಾ ಅಲ್ಲಿರುವ ಸ್ಟಾಫ್​ ನರ್ಸ್​ ಕುಮಾರ್​ನ(44) ಕಿತಾಪತಿ ಎಂದು ತಿಳಿಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತನಿಖೆ ಚುರುಕುಗೊಳಿಸಿದಾಗ ಈ ಮಗುವನ್ನು ಆತ ಅನ್ನೇಶ್​ ನಾಯ್ಕ್​ ಮತ್ತು ಲಾವಣ್ಯ ಎನ್ನುವವರಿಗೆ ಮಾರಾಟ ಮಾಡಿದ್ದ ವಿಷಯ ಬೆಳಕಿಗೆ ಬಂತು. ಅಷ್ಟೇ ಅಲ್ಲದೇ, ಮಗುವಿಗೆ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಸಾಕಷ್ಟು ಬೇಡಿಕೆ ಇದ್ದು, ಮುಂದೆ ಬೇರೆ ಮಗು ನೀಡುವುದಾಗಿ ಆತ ವಾಗ್ದಾನ ಮಾಡಿರುವ ವಿಷಯವೂ ತನಿಖೆಯಿಂದ ತಿಳಿದುಬಂದಿದೆ.
ಮಗುವನ್ನು ಪಡೆದವರು ಮಗು ಒಪ್ಪಿಸಲು ಆರಂಭದಲ್ಲಿ ಒಪ್ಪದಿದ್ದರೂ ಪೊಲೀಸರು ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಕೊನೆಗೂ ಮಗುವನ್ನು ಒಪ್ಪಿಸಿದ್ದಾರೆ. ಅವರನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಇವರ ಜತೆಗೆ ಆಸ್ಪತ್ರೆಯ ಗ್ರೂಪ್​ ಡಿ ಉದ್ಯೋಗಿ ಮಹೇಶ್​, ಹಿರೆಕೆರೂರು ಆಸ್ಪತ್ರೆಯ ಲ್ಯಾಬ್​ ಟೆಕ್ನೀಷಿಯನ್​ ಬಸವರಾಜ್​ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಆರೋಗ್ಯಸೇತು ಆ್ಯಪ್​: ದೋಷ ಕಂಡುಹಿಡಿಯಿರಿ, ಸಲಹೆ ನೀಡಿ- ಲಕ್ಷ ಬಹುಮಾನ ಗೆಲ್ಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + ten =
Remember me
