ಬೆಂಗಳೂರು:ಕರ್ನಾಟಕದಲ್ಲಿ ವಾಸಿಸುವ ಕನ್ನಡೇತರರಿಗೆ ಕನ್ನಡ ಕಲಿಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ.ಟ್ವಿಟರ್​ ಖಾತೆಯ ಮೂಲಕ ಹೊಸ ಬಗೆಯಲ್ಲಿ ಕನ್ನಡ ಕಲಿಯಲು ಅವಕಾಶವನ್ನು ಸಚಿವರು ರೂಪಿಸಿದ್ದಾರೆ. ಕಲಿ ಕನ್ನಡ ಹೆಸರಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿರುವುದಾಗಿ ರವಿಯವರು ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಮಾಹಿತಿ ನೀಡಿದ್ದಾರೆ.ಕರ್ನಾಟಕದ ಕನ್ನಡಿಗರಲ್ಲದವರಿಗೆ ಈ ಯೋಜನೆ ರೂಪಿಸಲಾಗಿದೆ. ಕರ್ನಾಟಕದಲ್ಲಿ ನೆಲೆಸಿರುವವರು ಎಲ್ಲರೂ ಕನ್ನಡಿಗರು ಎನ್ನುವ ಮನೋಭಾವ ಬರಬೇಕು. ಆದ್ದರಿಂದ ಇಲ್ಲಿ ನೆಲೆಸಿರುವವರು ಇಲ್ಲಿಯ ಭಾಷೆಯನ್ನು ಕಲಿಯಬೇಕು. ಅವರಿಗೆ ಕನ್ನಡ ಕಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಪ್ರತಿದಿನವೂ ನಮ್ಮ ತಂಡವು ಸ್ಪೋಕನ್​ (ಸಂಭಾಷಣೆ) ಕನ್ನಡವನ್ನು ಆನ್​ಲೈನ್​ನಲ್ಲಿ ಪ್ರಕಟಿಸುತ್ತದೆ ಎಂದಿರುವ ರವಿಯವರು ಇದಾಗಲೇ ಕನ್ನಡದ ಕೆಲವು ನುಡಿಗಟ್ಟುಗಳ ಪಟ್ಟಿಯನ್ನು ಪೋಸ್ಟ್​ ಮಾಡಿದ್ದಾರೆ.ಇದನ್ನೂ ಓದಿ:ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಯತ್ನಹೆಚ್ಚಿನ ಬ್ಯಾಂಕುಗಳಲ್ಲಿ ಅದರಲ್ಲಿಯೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡೇತರರೇ ತುಂಬಿರುವ ಕಾರಣ, ಇಂಗ್ಲಿಷ್​ ಅಥವಾ ಹಿಂದಿ ಮಾತನಾಡಲು ಬಾರದ ಗ್ರಾಹಕರಿಗೆ ತುಂಬಾ ಕಷ್ಟವಾಗುತ್ತಿದೆ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಹಾಗೂ ಸರ್ಕಾರಿ ಸೇವೆಗಳನ್ನು ಸಂಪೂರ್ಣವಾಗಿ ಕನ್ನಡಮಯ ಮಾಡಬೇಕು ಎಂಬ ಒತ್ತಾಸೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.ಈಗಾಗಲೇ ಬ್ಯಾಂಕುಗಳಿಗೆ ನಿರ್ದೇಶನ ನೀಡಿರುವ ಸರ್ಕಾರ, ಗ್ರಾಹಕರಿಗೆ ಕನ್ನಡದಲ್ಲಿಯೇ ಸೇವೆ ನೀಡುವಂತೆ ಹಾಗೂ ಸೈನ್​ಬೋರ್ಡ್​ಗಳನ್ನು ಕನ್ನಡಲ್ಲಿಯೇ ಪ್ರಕಟಿಸುವಂತೆ ಸೂಚಿಸಿದೆ.(ಏಜೆನ್ಸೀಸ್​)

Namaskara all,I've taken up the task to teaching Kannada to all non-Kannadigas residing in Karnataka. They are in Karnataka and they are our people, so it's our responsibility to teach them our language. I'll need you'll help in this task. ಕಲಿಕನ್ನಡ |#KALIKANNADApic.twitter.com/4BoxgzBrXh— C T Ravi 🇮🇳 ಸಿ ಟಿ ರವಿ (@CTRavi_BJP)June 16, 2020
Namaskara all,I've taken up the task to teaching Kannada to all non-Kannadigas residing in Karnataka. They are in Karnataka and they are our people, so it's our responsibility to teach them our language. I'll need you'll help in this task. ಕಲಿಕನ್ನಡ |#KALIKANNADApic.twitter.com/4BoxgzBrXh
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − four =
Remember me
