ಬೆಂಗಳೂರು:ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಸಬ್ ಇನ್​ಸ್ಪೆಕ್ಟರ್ (ಸಿವಿಲ್) ಹುದ್ದೆಯ ನೇರ ನೇಮಕಾತಿಯಲ್ಲಿ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಲಾಗಿದೆ.ಪೊಲೀಸ್ ಸಬ್ ಇನ್ಸ್​ಪೆಕ್ಟರ್ (ಸಿವಿಲ್) (ಪುರುಷ ಹಾಗೂ ಮಹಿಳೆ) ಹುದ್ದೆಗೆ ನಿಗದಿಪಡಿಸಿರುವ ವಯೋಮಿತಿಯನ್ನು 2 ವರ್ಷ ಹೆಚ್ಚಿಸಿದ್ದು, ಪ್ರಸ್ತುತ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ- 30, ಎಸ್​ಸಿ, ಎಸ್​ಟಿ, ಒಬಿಸಿ ಅಭ್ಯರ್ಥಿಗಳಿಗೆ 32 ವರ್ಷ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿರುವ 125 ಹುದ್ದೆಗಳು ಸೇರಿ ಒಟ್ಟು 556 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿಂಗಡಣೆ ಇಂತಿದೆ.
ಇದನ್ನೂ ಓದಿ:ಗರ್ಭಿಣಿ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ಎಂದ ಕೇಂದ್ರ
ಪುರುಷ- 278 , ಮಹಿಳೆ– 91, ಸೇವೆಯಲ್ಲಿರುವ (ಪುರುಷ) – 46, ಸೇವೆಯಲ್ಲಿರುವ ಮಹಿಳೆಯರಿಗೆ 16 ಹುದ್ದೆಗಳನ್ನು ಮೀಸಲಿಡಲಾಗಿದೆ.ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ / ತತ್ಸಮಾನ ಶಿಕ್ಷಣ ಪೂರೈಸಿರಬೇಕು. ಸೇವಾ ನಿರತರು ಇಲಾಖೆಯ ಯಾವುದೇ ವೃಂದದಲ್ಲಿ 5 ವರ್ಷ ಕನಿಷ್ಠ ಸೇವೆಯನ್ನು ಪೂರ್ಣಗೊಳಿಸಿರಬೇಕು.ವೇತನಶ್ರೇಣಿ: 37,900 ರೂ. ದಿಂದ 70,850 ರೂ. ಇರುತ್ತದೆ.
ಇದನ್ನೂ ಓದಿ:ರಾಮಜನ್ಮ ಭೂಮಿಯಲ್ಲಿ ಮತ್ತಷ್ಟು ಪುರಾತನ ವಿಗ್ರಹ, ಶಿವಲಿಂಗ, ಅವಶೇಷಗಳು ಪತ್ತೆ
ನೇಮಕಾತಿ ಪ್ರಕ್ರಿಯೆಯಲ್ಲಿ ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇರುತ್ತದೆ. ಈ ಹಿಂದೆ 10 ಅಂಕಗಳಿಗೆ ನಡೆಸಲಾಗುತ್ತಿದ್ದ ಸಂದರ್ಶನವನ್ನು ಈ ಸಲ ರದ್ದುಪಡಿಸಲಾಗಿದೆ.ಜೂನ್ 1 ರಿಂದ ಜೂನ್ 30ರ ಸಂಜೆ 6 ಗಂಟೆ ವರೆಗೆ www.ksp.gov.in ನಲ್ಲಿ ಆನ್​ಲೈನ್ ಅರ್ಜಿ ಸಲ್ಲಿಸಬಹುದು. ಜುಲೈ 2ರ ವರೆಗೆ ಶುಲ್ಕ ಪಾವತಿಸಬಹುದು.
ಬಳಕೆದಾರರ ಸುರಕ್ಷತೆಗೆ ಫೇಸ್‌ಬುಕ್​ ತಂದಿದೆ ಹೊಸ ಫೀಚರ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 10 =
Remember me
