ಬೆಂಗಳೂರು:ರಾಜ್ಯದಲ್ಲಿ ಕರೊನಾ ಅಟ್ಟಹಾಸ ಮುಂದುವರೆದಿದೆ. ಒಂದೇ ದಿನದಲ್ಲಿ 48 ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದಾರೆ. ಅದರಲ್ಲಿಯೂ ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಬೆಳಗಾವಿಯ ಹಿರೇಬಾಗೇವಾಡಿ ಹಾಗೂ ಬೆಂಗಳೂರು ನಗರ ಸೋಂಕಿತರ ಗೂಡಾಗುತ್ತಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ದಾವಣಗೆರೆಯಲ್ಲಿ ಒಂದೇ ದಿನ 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ಭಟ್ಕಳದಲ್ಲಿ 12, ಹಿರೇಬಾಗೇವಾಡಿಯಲ್ಲಿ 10, ಬೆಂಗಳೂರು ನಗರದಲ್ಲಿ 7 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:ತಾಯಿಯನ್ನು ಜೀವಂತ ಸಮಾಧಿ ಮಾಡಿದ ಮಗ, 3 ದಿನಗಳ ನಂತರ ಕಾದಿತ್ತೊಂದು ಅಚ್ಚರಿ!
ಇನ್ನುಳಿದಂತೆ ಚಿತ್ರದುರ್ಗದಲ್ಲಿ 3, ಬಳ್ಳಾರಿಯಲ್ಲಿ 1 ಹಾಗೂ ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ 1 ಪ್ರಕರಣ ದಾಖಲಾಗಿದೆ.
ಈ ಮೂಲಕ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 753ಕ್ಕೆ ಏರಿದೆ. ಈ ಪೈಕಿ 376 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಇದನ್ನೂ ಓದಿ:ಅಮೆರಿಕದ ಶ್ವೇತಭವನದಲ್ಲಿ ಮೊಳಗಿತು ವೇದ ಮಂತ್ರ ಘೋಷ- ಪುರೋಹಿತರ ಆಹ್ವಾನಿಸಿದ ಟ್ರಂಪ್​
ಒಟ್ಟಾರೆ ಸೋಂಕಿತರದಲ್ಲಿ ಶೇ.50ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎನ್ನುವುದೇ ಇದೀಗ ಸಮಾಧಾನ ತಂದಿರುವ ಸಂಗತಿಯಾಗಿದೆ. ಕರೊನಾ ಸೋಂಕು ಕರ್ನಾಟಕದಲ್ಲಿ 30 ಮಂದಿಯನ್ನು ಇಲ್ಲಿಯವರೆಗೆ ಬಲಿ ಪಡೆದಿದೆ.
ಮತ್ತೊಂದು ಆಘಾತಕಾರಿ ವರದಿ ಎಂದರೆ, ನಿನ್ನೆಯಿಂದ ಪತ್ತೆಯಾಗಿರುವವರ ಪೈಕಿ ಹೆಚ್ಚಿನವರು 40 ವರ್ಷಕ್ಕಿಂತ ಕಡಿಮೆ ವಯೋಮಾನದವರು. ದಾವಣಗೆರೆಯಲ್ಲಿ 3, 8, 11 ವರ್ಷದ ಮಕ್ಕಳಿಗೂ ಸೋಂಕು ತಗುಲಿದ್ದರೆ. ಭಟ್ಕಳದಲ್ಲಿ 5 ತಿಂಗಳ ಶಿಶು, 3 ಮತ್ತು 12 ವರ್ಷದ ಮಕ್ಕಳನ್ನೂ ಕರೊನಾ ಬಿಟ್ಟಿಲ್ಲ.
ಇದನ್ನೂ ಓದಿ:ಮಾತೃ ಹೃದಯಕ್ಕೆ ಸಾಟಿ ಎಲ್ಲಿ? ಮರಿ ಎತ್ತಿಕೊಂಡು ಎಮರ್ಜೆನ್ಸಿ ವಾರ್ಡ್​ನತ್ತ ಓಡಿದ ಬೆಕ್ಕು!.
ರಾಜ್ಯದ ವಿವಿಧ ಜಿಲ್ಲೆಗಳ ಕರೊನಾ ಸೋಂಕಿತರ ವಿವರ ಇಲ್ಲಿದೆ:

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
