ಕಾಸರಗೋಡು:ಬೆತ್ತಲೆ ವಿಡಿಯೋ ಕಾಲ್​ಗಳನ್ನು​ ಮಾಡುವಂತೆ ಗಂಡ ಒತ್ತಾಯ ಮಾಡಿ ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬಳು ದೂರು ದಾಖಲಿಸಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರಂನಲ್ಲಿ ಶುಕ್ರವಾರ ನಡೆದಿದೆ.
ಸಂತ್ರಸ್ತ ಮಹಿಳೆಯ ವಯಸ್ಸು 20 ವರ್ಷ. ಆಕೆಯ ಪತಿ ಬಂಕಲಂ ಮೂಲದವರಾಗಿದ್ದು, ಪಾಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ದೂರಿನ ಪ್ರಕಾರ, ಆರೋಪಿ ಗಂಡ ಕೆಲವು ವ್ಯಕ್ತಿಗಳಿಂದ ಹಣ ಪಡೆದಿದ್ದು ಅದಕ್ಕೆ ಪ್ರತಿಯಾಗಿ ತನ್ನ ಪತ್ನಿಯನ್ನು ನಗ್ನವಾಗಿ ಕಾಣಿಸಿಕೊಳ್ಳಲು ಮತ್ತು ವಿಡಿಯೋ ಕರೆ ಮಾಡಲು ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಮಹಿಳೆಗೆ ಬೆದರಿಕೆ ಹಾಕಿ ಹಲ್ಲೆ ಮಾಡಿರುವ ಆರೋಪವೂ ಆತನ ಮೇಲಿದೆ.
ಇದೇ ಸಂದರ್ಭದಲ್ಲಿ ನೀಲೇಶ್ವರಂ ಪೊಲೀಸರು ವ್ಯಕ್ತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಬಾಕ್ಸ್​​ ಆಫೀಸ್​ನಲ್ಲಿ 300 ಕೋಟಿ ಬಾಚಿಕೊಂಡ ‘ಗದರ್ 2’ ಸಿನಿಮಾ; ‘ಕೆಜಿಎಫ್ 2’, ‘ಪಠಾಣ್’ ದಾಖಲೆ ಬ್ರೇಕ್​​​
ಇದೇ ರೀತಿಯ ಘಟನೆ ಗುಜರಾತ್​ನ ರಾಜ್​ಕೋಟ್​ನಲ್ಲಿ ಮೂರು ದಿನಗಳ ಹಿಂದೆ ಬೆಳಕಿಗೆ ಬಂದಿತು. ಪೋರ್ನ್​ ವೆಬ್​ಸೈಟ್​ ಒಂದಕ್ಕೆ ವಿಡಿಯೋ ಚಿತ್ರೀಕರಿಸಲು ಲೈವ್​ ಸೆಕ್ಸ್ ಮಾಡುವಂತೆ ಗಂಡ ಮತ್ತು ಮಾವ ಒತ್ತಾಯಿಸಿದರು ಎಂದು ಮಹಿಳೆಯೊಬ್ಬಳು ದೂರು ನೀಡಿದ್ದಾಳೆ. ಸಂತ್ರಸ್ತೆ ಮಹಿಳೆಯ ವಯಸ್ಸು 21 ವರ್ಷ. ಕಳೆದ ಎರಡು ವಾರಗಳಿಂದ 10 ಬಾರಿ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಆಕೆಯ ಬೆತ್ತಲೆ ವಿಡಿಯೋವನ್ನು ರಹಸ್ಯವಾಗಿ ಸೆರೆಹಿಡಿದಿರುವುದಾಗಿ ಸಂತ್ರಸ್ತೆ ಆರೋಪ ಮಾಡಿದ್ದಾಳೆ.
ಮಾವ ನಗರದ ಹೋಟೆಲ್‌ ಒಂದರಲ್ಲಿ ಷೇರು ಹೊಂದಿದ್ದರು. ಆದರೆ, ಈಗ ಸ್ವಲ್ಪ ಷೇರು ಮಾತ್ರ ಹೊಂದಿದ್ದಾರೆ. ಈ ಕಾರಣಕ್ಕಾಗಿ ಇಬ್ಬರು ಅಶ್ಲೀಲ ವೆಬ್‌ಸೈಟ್‌ಗಳಿಂದ ಹಣ ಗಳಿಸಲು ಯೋಜಿಸಿದ್ದಾರೆ ಎಂದು ಸಂತ್ರಸ್ತ ತಿಳಿಸಿದ್ದಾಳೆ. ಸಂತ್ರಸ್ತೆ ಮತ್ತು ಆಕೆಯ ಗಂಡ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದರು. ಅವರಿಗೆ ಅವಳಿ ಮಕ್ಕಳಿದ್ದಾರೆ. ಇತ್ತೀಚೆಗೆ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಕ್ಯಾಮೆರಾದಲ್ಲಿ ಲೈವ್ ಸೆಕ್ಸ್ ಮಾಡುವುದನ್ನು ಕಲಿಸಲು ವಿದೇಶಿ ಮಹಿಳೆಯರನ್ನು ಹೋಟೆಲ್ ಕೋಣೆಗೆ ಮಾವ ಕರೆತಂದರು ಮತ್ತು ನನ್ನ ಮುಂದೆಯೇ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರು. ಹೆಚ್ಚಾಗಿ ಲೈಂಗಿಕ ಆಟಿಕೆಗಳನ್ನು ಬಳಸಿದ್ದರಿಂದ ನನಗೆ ಸೋಂಕು ಸಹ ತಗುಲಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್​)
ತನ್ನ ವಿದ್ಯಾರ್ಥಿನಿ ಮನೆಯಲ್ಲೇ ಬಾಡಿಗೆಗೆ ಉಳಿದುಕೊಂಡಿದ್ದ ಬೀದರ್​ ಶಿಕ್ಷಕನ ಬೇಸಿಗೆ ರಹಸ್ಯ ಬಯಲು!

ಪೋರ್ನ್​ ​ಸೈಟ್​ಗೆ ಲೈವ್​ S*x ಮಾಡಲು ಗಂಡ, ಮಾವನಿಂದ ಒತ್ತಾಯ: ತನಿಖೆಯಲ್ಲಿ ಭಯಾನಕ ರಹಸ್ಯ ಬಯಲು

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ನರ್ಸ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fifteen =
Remember me
