ಉತ್ತರಪ್ರದೇಶ:ಧಾರ್ಮಿಕ ಪ್ರವಾಸೋದ್ಯಮದಲ್ಲಿ ಹೆಚ್ಚು ಹೆಸರುವಾಸಿಯಾದ ಕಾಶಿ ವಿಶ್ವನಾಥ ಧಾಮ ಇದೀಗ ಹೊಸ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ಕಳೆದ 2 ವರ್ಷಗಳಲ್ಲಿ ದೇಗುಕ್ಕೆ ಭೇಟಿ ನೀಡಿದ ಒಟ್ಟು ಭಕ್ತರ ಸಂಖ್ಯೆ ಬರೋಬ್ಬರಿ 13 ಕೋಟಿ ಎಂದು ಇತ್ತೀಚಿನ ವರದಿ ತಿಳಿಸಿದೆ. ಧಾರ್ಮಿಕ ಪ್ರವಾಸೋದ್ಯಮದಲ್ಲಿ ಇದು ಗಣನೀಯವಾಗಿ ಏರಿಕೆ ಕಂಡಿದೆ.
ಇದನ್ನೂ ಓದಿ:ಬಂಧನದ ಭೀತಿ, ನದಿಗೆ ಜಿಗಿದ 6 ಅಪರಾಧಿಗಳು; ಬಲೆಗೆ ಬಿದ್ದಿದ್ದೇ ರೋಚಕ!
ಉತ್ತರಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ಧಾಮದಲ್ಲಿ ಭಕ್ತರಿಗೆ ಪ್ರವೇಶ ಮತ್ತು ಸೌಕರ್ಯಗಳನ್ನು ಹೆಚ್ಚಿಸುವ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಅಚಲ ಬದ್ಧತೆಯ ಪರಿಣಾಮವಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, 16,000 ಅಂತಾರಾಷ್ಟ್ರೀಯ ಪ್ರವಾಸಿಗರು ಸೇರಿದಂತೆ 13 ಕೋಟಿಗೂ ಹೆಚ್ಚು ಭಕ್ತರು ಕಳೆದ ಬಾರಿ ಈ ಪವಿತ್ರ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಅದರಲ್ಲೂ ಪ್ರತ್ಯೇಕವಾಗಿ ಎರಡು ವರ್ಷಗಳಲ್ಲಿ ಎಂಬುದು ಗಮನಾರ್ಹವಾಗಿದೆ.
ಕಾಶಿ ವಿಶ್ವನಾಥ ಧಾಮ ಮತ್ತು ವಿಶೇಷ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿಲ್ ವರ್ಮಾ ಮಾತನಾಡಿ, “ಡಿಸೆಂಬರ್ 13, 2021ರಿಂದ ಡಿಸೆಂಬರ್ 6, 2023 ರವರೆಗೆ 15,930 ವಿದೇಶಿ ಭಕ್ತರು ಪೂಜ್ಯ ವಿಶ್ವನಾಥ ದೇವಾಲಯದ ದರ್ಶನಕ್ಕಾಗಿ ಕಾಯ್ದಿರಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:5ನೇ ದಿನಕ್ಕೆ ತೆರಿಗೆ ದಾಳಿ, ರೂ. 335 ಕೋಟಿ ರೂ. ನಗದು ಎಣಿಕೆ; ಸಾಹು ಬಳಿ ಸ್ಪಷ್ಟನೆ ಕೇಳಿದ ಕಾಂಗ್ರೆಸ್
“ಪುನರುಜ್ಜೀವನಗೊಂಡ ಶ್ರೀ ಕಾಶಿ ವಿಶ್ವನಾಥ ದೇವಾಲಯವನ್ನು ಡಿಸೆಂಬರ್ 13, 2021 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು. 2022ಕ್ಕೆ ಹೋಲಿಸಿದರೆ, 2023ರ ಬುಕಿಂಗ್ ಮತ್ತಷ್ಟು ದ್ವಿಗುಣಗೊಂಡಿದೆ. ಭಕ್ತರಲ್ಲಿ ಭೇಟಿ ನೀಡುವ ಆಸಕ್ತಿ ಹೆಚ್ಚಾಗುತ್ತಿದೆ” ಎಂದರು.
“ಯಾತ್ರಾಸ್ಥಳವು ಧಾರ್ಮಿಕ ಪ್ರವಾಸೋದ್ಯಮದಲ್ಲಿ ಗಣನೀಯ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದು, ಡಿಸೆಂಬರ್ 13 2021 ರಿಂದ ಡಿಸೆಂಬರ್ 6, 2023 ರವರೆಗೆ 12 ಕೋಟಿ 92 ಲಕ್ಷದ 24 ಸಾವಿರ ಜನರು ಭೇಟಿ ನೀಡಿದ್ದಾರೆ” ಎಂದು ಸಿಇಒ ತಿಳಿಸಿದರು. ಸಿಇಒ ಪ್ರಕಾರ, ಡಿಸೆಂಬರ್ 2021 ರಲ್ಲಿ ಭಕ್ತರ ಸಂಖ್ಯೆ 40, ಜನವರಿ 1, 2022 ರಿಂದ ಡಿಸೆಂಬರ್ 31, 2022 ರ ನಡುವೆ 4540 ಮತ್ತು ಜನವರಿ 1, 2023 ರಿಂದ ಡಿಸೆಂಬರ್ 6, 2023 ರ ನಡುವೆ 11,350 ಆಗಿದೆ,(ಏಜೆನ್ಸೀಸ್).
BBKS10: ವಿಶೇಷ ಅಧಿಕಾರಕ್ಕೆ ನಮ್ರತಾ ಹೆಸರೇಳಿದ ಸ್ನೇಹಿತ್​; ಕೊಟ್ಟ ಕಾರಣ ‘ನನಗೆ ಅವರು ತುಂಬ ಇಷ್ಟ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 1 =
Remember me
