ಜಮ್ಮು ಕಾಶ್ಮೀರ:ಪ್ರೀತಿಗೆ ಒಪ್ಪದ ಯುವತಿ ರುಂಡ ಕಡಿದು, ಕೈಕಾಲುಗಳನ್ನು ತುಂಡರಿಸಿ ಊರ ತುಂಬೆಲ್ಲಾ ಎಸೆದು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಭಯಾನಕ ಘಟನೆಯೊಂದು ಜಮ್ಮು ಕಾಶ್ಮೀರದಲ್ಲಿ ನಡೆದಿದೆ.
ಶಬ್ಬೀರ್ ಅಹ್ಮದ್​ ಬಂಧಿತ ಆರೋಪಿ. ಈತ ಬದ್ಗಾಮ್ ಜಿಲ್ಲೆಯ ಓಂಪೋರಾ ಪ್ರದೇಶದ ನಿವಾಸಿ. ಪ್ರೀತಿ ತಿರಸ್ಕರಿಸಿದ ಯುವತಿಯನ್ನು ಕೊಂದು ಪೊಲೀಸರ ಅತಿಥಿಯಾಗಿದ್ದಾನೆ.
ಕಾರ್ಪೆಂಟರ್​ ಕೆಲಸಕ್ಕಾಗಿ ಯುವತಿ ಮನೆಗೆ ಬಂದಿದ್ದ. ಬಂದ ಮೊದಲ ದಿನವೇ ಆಕೆಯನ್ನು ಇಷ್ಟಪಟ್ಟಿದ್ದ, ಯುವತಿ ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸಿದ್ದಾಳೆ ಆಗ ಕೋಪಗೊಂಡ ಆತ ಯುವತಿಯನ್ನು ಹತ್ಯೆ ಮಾಡಿದ್ದಾನೆ. ಆಕೆಯ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬದ್ಗಾಮ್ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಎಸೆದಿದ್ದನು.
ಇದನ್ನೂ ಓದಿ:VIDEO| ಪಾನಿಪುರಿ ಮಾರಾಟ ಮಾಡುವ BTech ಪದವೀಧರೆ; ಇಲ್ಲಿದೆ ನೋಡಿ ಸ್ಫೂರ್ತಿದಾಯಕ ಕಥೆ
ಯುವತಿ ಕಾಣುತ್ತಿಲ್ಲವೆಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ಮಾರ್ಚ್ 7 ರಂದು ಮನೆಯಿಂದ ಕೋಚಿಂಗ್ ತರಗತಿಗಳಿಗೆ ಹೋಗಿದ್ದರು ಆದರೆ ಸಂಜೆ ಮನೆಗೆ ಹಿಂತಿರುಗಿರಲಿಲ್ಲ. ಬಳಿಕ, ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು. ಯುವತಿಯ ಕರೆ ವಿವರದ ಮೇಲೆ ಈ ಬಂಧನ ಸಾಧ್ಯವಾಗಿದೆ.
ಆರೋಪಿಯೂ ಕೂಡ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ವಿವಾಹಿತನಾಗಿದ್ದಾನೆ. ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಡಾಳ್ ಲೂಟಿಯಲ್ಲಿ ನಿಮಗೂ ಪಾಲಿದೆಯಾ ಮೋದಿಯವರೇ?; ಮೋದಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + four =
Remember me
