ನವದೆಹಲಿ:ಭಾರತದ ಇತರೆಡೆಗಳಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕೂಡ ಕೋವಿಡ್​-ಪಿಡುಗಿನ ಹಾವಳಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಈ ರಾಜ್ಯದಲ್ಲಿ ಮಾಸ್ಕ್​ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಕಾಶ್ಮೀರದ ದಿನಪತ್ರಿಕೆಯೊಂದು ವಿಶಿಷ್ಟ ಮಾದರಿ ಅನುಸರಿಸಿ ಜನಮಾನಸವನ್ನು ಗೆದ್ದಿದೆ.
ಡೈಲಿ ರೋಶ್ನಿ ಎಂಬ ಪತ್ರಿಕೆ ತನ್ನ ಮಂಗಳವಾರದ ದಿನಪತ್ರಿಕೆಗಳಿಗೆ ಮಾಸ್ಕ್​ಗಳನ್ನು ಲಗತ್ತಿಸಿ, ಮಾಸ್ಕ್​ನ ಬಳಕೆ ಅತ್ಯಗತ್ಯವಾಗಿದೆ ಎಂಬ ಸಂದೇಶದೊಂದಿಗೆ ತನ್ನ ಗ್ರಾಹಕರೆಲ್ಲರಲ್ಲೂ ಜಾಗೃತಿ ಮೂಡಿಸಲು ಪ್ರಯತ್ನಿಸಿದೆ.
ಮಾಸ್ಕ್​ಗಳನ್ನು ಪ್ಯಾಕ್​ ಮಾಡಿ, ಪತ್ರಿಕೆಗಳಿಗೆ ಅಂಟಿಸಲು ನಾವು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕಾಯಿತು. ಮಾಸ್ಕ್​ಗಳನ್ನು ಲಗತ್ತಿಸಲಾದ ಪ್ರತಿಕೆಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲುಪಿಸುವಲ್ಲಿ ಈ ಸಿಬ್ಬಂದಿಯ ಶ್ರಮ ಶ್ಲಾಘನಾರ್ಹ ಎಂದು ಪತ್ರಿಕೆಯ ಮುಖ್ಯ ಸಂಪಾದಕ ಝಹೂರ್​ ಅಹಮದ್​ ಶೋರಾ ಹೇಳಿದ್ದಾರೆ.
ಇದನ್ನೂ ಓದಿ:ವಾಲ್ವ್​ ಇರುವ ಎನ್​95 ಮಾಸ್ಕ್​ಗಳನ್ನು ಬಳಸ ಬೇಡಿ, ಅನುಕೂಲಕ್ಕಿಂತ ಅನನಕೂಲವೇ ಹೆಚ್ಚು
ಪ್ರತಿಯೊಂದು ಪತ್ರಿಕೆಗೆ ಮಾಸ್ಕ್​ಗಳನ್ನು ಲಗತ್ತಿಸಿ, ಅವುಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಐಡಿಯಾ ಜೆಹಾದ್​ ಶೋರಾ ಅವರದ್ದಾಗಿತ್ತು. ಸಮಾಜದ ಒಳಿತಿಗಾಗಿ ಒಂದಷ್ಟು ಕ್ರಿಯಾಶೀಲತೆಯನ್ನು ಬೆರೆಸುವುದು ನಮ್ಮ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಕರೊನಾ ವೈರಾಣು ಸೋಂಕು ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರ ಕಣಿವೆ ರಾಜ್ಯದಲ್ಲಿ ಜು.12ರಿಂದ ಮತ್ತೊಮ್ಮೆ ಸಂಪೂರ್ಣ ಲಾಕ್​ಡೌನ್​ ಜಾರಿಗೊಳಿಸಿದೆ. ಲಡಾಖ್​ ಕೇಂದ್ರಾಡಳಿತ ಪ್ರದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 14,650ಕ್ಕೆ ಹೆಚ್ಚಳವಾಗಿದ್ದು, ಇದುವರೆಗೆ 259 ಜನರ ಮರಣಿಸಿದ್ದಾರೆ.
35 ವರ್ಷಗಳ ಬಳಿಕ ತೀರ್ಪು: ರಾಜಸ್ಥಾನದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಕೊಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
