ಕಾಶ್ಮೀರ:ಉಗ್ರರು ಪುಲ್ವಾಮಾದಲ್ಲಿ ಗುಂಡಿನ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಕಾಶ್ಮೀರಿ ಪಂಡಿತರೊರ್ವರು ಮೃತಪಟ್ಟಿದ್ದಾರೆ.
ಸಂಜಯ್ ಶರ್ಮಾ(40) ಮೃತರು, ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಂಜಯ್​ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆಯಿಂದ ಭಾರತದಲ್ಲಿ 34 ಲಕ್ಷ ಜನರ ಜೀವ ರಕ್ಷಣೆ: ಸ್ಟ್ಯಾನ್‌ಫೋರ್ಡ್‌ ವಿವಿ ಅಧ್ಯಯನ
ಸಂಜಯ್ ಶರ್ಮಾ ಜಮ್ಮು ಕಾಶ್ಮೀರದ ಬ್ಯಾಂಕ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾನುವಾರ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.
ಇದನ್ನೂ ಓದಿ:ವೆಡ್ಡಿಂಗ್ ಆ್ಯನಿವರ್ಸರಿ ಮರೆತ ಪತಿಗೆ ಗೂಸಾ ಕೊಟ್ಟ ಮಹಿಳೆ ವಿರುದ್ಧ ದೂರು ದಾಖಲು!
‘ದಕ್ಷಿಣ ಕಾಶ್ಮೀರ ಜಿಲ್ಲೆಯ ಅಚಾನ್ ಪ್ರದೇಶದಲ್ಲಿ ತನ್ನ ಗ್ರಾಮದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಸಂಜಯ್ ಶರ್ಮಾ ಮೇಲೆ ಭಯೋತ್ಪಾದಕರು ಬೆಳಗ್ಗೆ ಗುಂಡು ಹಾರಿಸಿದ್ದಾರೆ. ಪೊಲೀಸರು ಘಟನೆ ನಡೆದ ಸ್ಥಳದಲ್ಲಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಕಾಶ್ಮೀರಿ ಪೊಲೀಸರು ಟ್ವಿಟ್​​ ಮಾಡಿ ತಿಳಿಸಿದ್ದಾರೆ.
2022 ಮೇ 12 ರಂದು ಬುದ್ಗಾಮ್ ಜಿಲ್ಲೆಯಲ್ಲಿ ನಡೆದ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಹತ್ಯೆಯ ಆರೋಪದ ಮೇಲೆ ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರಿ ಪಂಡಿತರು ಕಣಿವೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಹೋಗಲು ದಾರಿ ತಪ್ಪಿ ಅಳುತ್ತ ನಿಂತಿದ್ದ ವಿದ್ಯಾರ್ಥಿನಿ: ಜೀರೋ ಟ್ರಾಫಿಕ್​​ನಲ್ಲಿ ಕರೆದೊಯ್ದ ಪೊಲೀಸ್

Terrorists fired upon one civilian from minority namely Sanjay Sharma from Pulwama while on way to local market. He was shifted to hospital however, he succumbed to injuries. There was Armed guard in his village. Area cordoned off. Details shall follow: Kashmir Policepic.twitter.com/cX5m9LaXdf
— ANI (@ANI)February 26, 2023

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
