ಅತ್ತ ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿ ಶಿಲಾನ್ಯಾಸದ ಸಂಭ್ರಮ…ಇತ್ತ ಕಾಶ್ಮಿರದಲ್ಲಿ ಆರ್ಟಿಕಲ್​ 370 ರದ್ದುಗೊಂಡ ಮೊದಲ ವಾರ್ಷಿಕೋತ್ಸವದ ಸಂಭ್ರಮ.
ಕಳೆದ ವರ್ಷ ಅಂದರೆ 2019ರ ಆಗಸ್ಟ್​ 5ರಂದು ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370ನ್ನು ರದ್ದುಗೊಳಿಸಿತ್ತು. ಇಂದಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಶ್ಮೀರದ ಕುಪ್ವಾರಾ, ಗುಜ್ಜರ್​​, ಬಕರ್​ವಾಲ್​​ ಸೇರಿ ಮತ್ತಿತರ ಕಾಶ್ಮೀರಿಯರು ಭರ್ಜರಿ ಸಂಭ್ರಮ ಆಚರಿಸಿದ್ದಾರೆ.
ಆರ್ಟಿಕಲ್​ 370 ರದ್ದುಗೊಂಡಿರುವ ಕ್ಷಣದ ಸ್ಮರಣೆಗಾಗಿ ಕಾಶ್ಮೀರಿಗಳು ಸೋಮವಾರದಿಂದಲೇ ಬ್ಯಾಂಗಸ್​ ಆವಮ್​ ಮೇಳವನ್ನು ಪ್ರಾರಂಭಿಸಿದ್ದಾರೆ.  ಹಳ್ಳಿಗಾಡಿನ ಆಟಗಳಾದ ಕುದುರೆ ಓಟ, ಕುರಿ ಹಿಂಡಿನ ಓಟದಂಥ ಸ್ಪರ್ಧೆಗಳನ್ನು ನಡೆಸಿದ್ದಾರೆ.ಇದನ್ನೂ ಓದಿ:ಕರೊನಾ ಕರಾಳ ಛಾಯೆ: ಲಾಕ್​ಡೌನ್ ನಿಂದ ತುತ್ತು ಕಳೆದುಕೊಂಡ ಶಿಕ್ಷಕನಿಗೆ ಕೈ ಹಿಡಿದದ್ದು ಮಿರ್ಚಿ ಬಜ್ಜಿ
ಕಾಶ್ಮಿರದ ಬುಡಕಟ್ಟು ಸಮುದಾಯದ ಹಿರಿಯ ಮುಖಂಡ ಮನವಿಯ ಮೇರೆಗೆ ಸ್ಥಳೀಯ ರಾಷ್ಟ್ರೀಯ ರೈಫಲ್ಸ್​ ಘಟಕದಿಂದ ವೈದ್ಯಕೀಯ ಮತ್ತು ಪಶುವೈದ್ಯಕೀಯ ಶಿಬಿರಗಳನ್ನೂ ಆಯೋಜಿಸಲಾಗಿತ್ತು. ಇದರಲ್ಲಿ 49 ಮಕ್ಕಳು ಸೇರಿ ಒಟ್ಟು 670 ರೋಗಿಗಳು ತಪಾಸಣೆಗೆ ಒಳಗಾಗಿ, ಚಿಕಿತ್ಸೆ ಪಡೆದಿದ್ದಾರೆ. ಹಾಗೇ 135 ಜಾನುವಾರುಗಳಿಗೂ ಅಗತ್ಯ ತಪಾಸಣೆ ಮಾಡಲಾಗಿದೆ.ಇನ್ನು ಮಂಗಳವಾರ ಗುಜ್ಜರ್​ ಸಮುದಾಯದಿಂದ ಜಾನಪದ ಹಾಡು, ನೃತ್ಯ ಕಾರ್ಯಕ್ರಮಗಳು ನಡೆದಿವೆ. ಮಕ್ಕಳಿಂದ ದೇಶಭಕ್ತಿ ಗೀತೆ, ನೃತ್ಯ, ಕರಾಟೆ ಪ್ರದರ್ಶನಗಳನ್ನೂ ಆಯೋಜಿಸಲಾಗಿತ್ತು.
ಒಟ್ಟಾರೆ ಮೇಳದೊಂದಿಗೆ ಆರ್ಟಿಕಲ್​ 370 ರದ್ದುಗೊಂಡ ಸ್ಮರಣಾರ್ಥ ಅನೇಕ ಕಾರ್ಯಕ್ರಮಗಳನ್ನೂ ಅಲ್ಲಿನ ಬುಡಕಟ್ಟು ಜನಾಂಗದ ಜನರು ಹಮ್ಮಿಕೊಂಡು ಸಂಭ್ರಮ ಆಚರಿಸಿದ್ದಾರೆ. (ಏಜೆನ್ಸೀಸ್)
ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಪ್ರಮುಖರನ್ನು ನೆನಪಿಸಿಕೊಂಡ ಮೋಹನ್​ ಭಾಗವತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − four =
Remember me
