ಕಠ್ಮಂಡು:ಪ್ರಭಾಸ್​, ಸೈಫ್​ ಅಲಿ ಖಾನ್, ಕೃತಿ ಸನೊನ್​ ಅಭಿನಯದ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಚಿತ್ರ ಆದಿಪುರುಷ್ ಬಿಡುಗಡೆಯಾದ ದಿನದಿಂದಲ್ಲೇ ಒಂದಿಲ್ಲೊಂದು ವಿವಾದಗಳಿಂದಲ್ಲೇ ಹೆಚ್ಚು ಸದ್ದು ಮಾಡುತ್ತಿದೆ.
ಸಿನಿಮಾ ಬಿಡುಗಡೆ ಬಳಿಕ ಹಲವರು ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೀತೆಯ ಕುರಿತ ಸಂಭಾಷಣೆಯನ್ನು ತೆಗೆಯುವಂತೆ ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್​ ಸೇರಿದಂತೆ ಹಲವರು ಒತ್ತಾಯಿಸಿದ್ದರು.
ಆದಿಪುರುಷ್ ಸಿನಿಮಾದಲ್ಲಿ ಸೀತೆ ಭಾರತದ ಮಗಳು ಎಂಬ ಸಂಭಾಷಣೆ ಇದೆ. ಆದರೆ ಈ ಸಂಭಾಷಣೆಯನ್ನು ತೆಗೆಯುವಂತೆ ಕೆಲ ದಿನಗಳ ಹಿಂದೆ ನೇಪಾಳ ಸಿನಿಮಾ ಸೆನ್ಸಾರ್ ಬೋರ್ಡ್ ಸಿನಿಮಾದ ನಿರ್ಮಾಣ ಸಂಸ್ಥೆಗೆ ಸೂಚಿಸಿತ್ತು. ಇಲ್ಲವಾದಲ್ಲಿ ಸಿನಿಮಾವನ್ನು ವ್ಯಾನ್​ ಮಾಡುವುದಾಗಿ ಎಚ್ಚರಿಕೆ ನೀಡಿತ್ತು.
pic.twitter.com/LpVn6Cogns
ಇದನ್ನೂ ಓದಿ:ರಾಮಾಯಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆಂದು ಹೇಳುವವರು ಮೂರ್ಖರು: ಆದಿಪುರುಷ್​ ನಿರ್ದೇಶಕ
ಅದರಂತೆ. ಇದೀಗ ಕಠ್ಮಂಡುವಿನಲ್ಲಿ ಆದಿಪುರುಷ್​ ಚಿತ್ರ ಸೇರಿದಂತೆ ಭಾರತದ ಯಾವ ಸಿನಿಮಾಗಳನ್ನು ಪ್ರದರ್ಶನ ಮಾಡದಂತೆ ನಿಷೇಧಿಸಿ ಅಲ್ಲಿನ ಮೇಯರ್​ ಬಲೇನ್​ ಶಾ ಆದೇಶ ಹೊರಡಿಸಿದ್ದಾರೆ. ಕಠ್ಮಂಡುವಿನಲ್ಲಿರುವ 17 ಚಿತ್ರಮಂದಿರಗಳಲ್ಲಿ ಭಾರತದ ಯಾವ ಚಲನಚಿತ್ರಗಳನ್ನು ಪ್ರದರ್ಶಿಸಬಾರದು ಎಂಬ ಆದೇಶವನ್ನು ನೀಡಲಾಗಿದೆ ಎಂದು ಬಲನ್​ ಶಾ ಟ್ವೀಟ್​ ಮಾಡಿದ್ದಾರೆ.
ಸೀತೆ ಭಾರತದ ಮಗಳು ಎಂಬ ಸಂಭಾಷಣೆಯನ್ನು ಭಾರತದಲ್ಲಿ ಮಾತ್ರವೇ ಅಲ್ಲದೆ ಎಲ್ಲೆಡೆ ಪ್ರದರ್ಶಿತವಾಗುತ್ತಿರುವ ಆವೃತ್ತಿಗಳಿಂದಲೂ ತೆಗೆದಿಲ್ಲದ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಜರುಗಿಸಲಾಗಿದೆ ಎಂದು ಕಠ್ಮಂಡುವಿನ ಮೇಯರ್​ ಬಲನ್​ ಶಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fourteen =
Remember me
