ಶ್ರೀನಗರ:ದಯವಿಟ್ಟು ಭಯೋತ್ಪಾದನೆಯನ್ನು ನಿಲ್ಲಿಸಿ ಇದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಪಾಕಿಸ್ತಾನಕ್ಕೆ ಮನವಿ ಮಾಡಿದ್ದಾರೆ. ಕಥುವಾದಲ್ಲಿ ಭಾರತೀಯ ಸೇನೆಯ ಮೇಲೆ ಉಗ್ರರ ದಾಳಿ ಖಂಡಿಸಿ ಈ ಹೇಳಿಕೆಯನ್ನು ನೀಡಿದ್ದು, ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಕಥುವಾದಲ್ಲಿ ಭಾರತೀಯ ಸೇನಯನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದದು, ಐವರ ಸ್ಥಿತಿ ಚಿಂತಾಜನಕವಾಗಿದೆ. ಉಗ್ರರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದ್ದು, ಕಳೆದ ಕೆಲವು ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗಳು ಉಲ್ಬಣಗೊಂಡಿವೆ.
ಈ ಕುರಿತು ಮಾತನಾಡಿರುವ ಫಾರೂಕ್​ ಅಬ್ದುಲ್ಲಾ, ಭಯೋತ್ಪಾದನೆಯು ಯಾರಿಗೂ ಸಹಾಯ ಮಾಡುವುದಿಲ್ಲ. ನಮ್ಮ ನೆರೆಹೊರೆಯವರು (ಪಾಕಿಸ್ತಾನ) ಈ ಭಯೋತ್ಪಾದಕರನ್ನು ಗಡಿಯುದ್ದಕ್ಕೂ ಕಳುಹಿಸುವ ಮೂಲಕ ಬದಲಾವಣೆಯನ್ನು ತರುತ್ತಾರೆ ಎಂದು ಭಾವಿಸಿದರೆ ಅದು ಎಂದಿಗೂ ಸಂಭವಿಸುವುದಿಲ್ಲ. ಇಂದು ನಡೆದ ಸಂಘರ್ಷದಿಂದ ಐವರು ಯೋಧರು ಮೃತಪಟ್ಟಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ. ಹೀಗಿದ್ದಲ್ಲಿ ಪರಿಸ್ಥಿತಿ ಹೇಗೆ ಬದಲಾಗಲು ಸಾಧ್ಯ.
#WATCH| Kathua Terror Attack | JKNC Chief Farooq Abdullah says, "… The only way forward now is that the pressure of the world on that country must increase. This is not the path to peace. This is the path to destruction… Terrorism will not help anyone. If our neighbour…pic.twitter.com/aMkP266F3I
ಇದನ್ನೂ ಓದಿ:ಕೊಹ್ಲಿ-ರೋಹಿತ್​ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ:​ ರಾಹುಲ್​ ದ್ರಾವಿಡ್​
ನಿಮ್ಮ ದೇಶವು ಈಗಾಗಲೇ ತೊಂದರೆಯಿಂದ ಬಳಲುತ್ತಿದೆ. ಹೀಗಿರುವಾಗ ಹೀಗೇ ಮಾಡಿದರೆ ಪರಿಸ್ಥಿತಿ ಹೇಗೆ ಸುಧಾರಿಸುತ್ತದೆ. ಈ ರೀತಯ ಘಟನೆಗಳಿಂದ ಎರಡು ದೇಶಗಳು ವಿನಾಶವನ್ನು ಹೊಂದುತ್ತವೆ. ದಯವಿಟ್ಟು ಈ ಭಯೋತ್ಪಾದನೆಯನ್ನು ನಿಲ್ಲಿಸಿ. ಇದನ್ನು ವಿಶ್ವದ ಎಲ್ಲೆಡೆ ಖಂಡಿಸಲಾಗುತ್ತಿದೆ. ಇಂದು, ವಿಶ್ವದ ಯಾವುದೇ ದೇಶವು ಭಯೋತ್ಪಾದನೆಯನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ, ಎಲ್ಲರೂ ಭಯೋತ್ಪಾದನೆಯ ವಿರುದ್ಧ ಮಾತನಾಡುತ್ತಿದ್ದಾರೆ, ಅವರು (ಪಾಕಿಸ್ತಾನ) ಭಯೋತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಏನು ಪಡೆಯಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲಾ. ಪ್ರಾಣ ಕಳೆದುಕೊಂಡವರ ಕುಟುಂಬಗಳು ಇಂದಿಗೂ ದುಃಖಿಸುತ್ತವೆ.
ಬಯೋತ್ಪಾದನೆ ನಿಂತಾಗ ಮಾತ್ರ ಭಾರತ ಹಾಗೂ ಪಾಕಿಸ್ತಾನದ ನಡುವೆ ಮಾತುಕತೆ ಸಾಧ್ಯವಾಗುತ್ತದೆ. ನಾವು ಮಾತುಕತೆಯ ಪರವಾಗಿದ್ದೇವೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಹತ್ತಿಕಲಿಲ್ಲ ಎಂದರೆ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + fourteen =
Remember me
