ಭೋಪಾಲ್​:ದೇವರ ಮುಂದೆ ಪಾರ್ಥಿಸುವಾಗಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಾವಿರಾರು ಮಂದಿ ವಿಡಿಯೋ ಶೇರ್ ಮಾಡಿದ್ದು, ಈ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿನ ದೇವಸ್ಥಾನವೊಂದರಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ವಿಡಿಯೋದಲ್ಲಿ ಏನಿದೆ?ವ್ಯಕ್ತಿಯೊಬ್ಬ ಸಾಯಿಬಾಬ ವಿಗ್ರಹದ ಮುಂದೆ ಕುಳಿತು ಪ್ರಾರ್ಥಿಸುತ್ತಿರುತ್ತಾನೆ. ಬಳಿಕ ತನ್ನ ತಲೆಯನ್ನು ದೇವರ ಪಾದ ಮೇಲೆ ಇಡುವ ವ್ಯಕ್ತಿ ನಂತರ ಸಾಕಷ್ಟು ಸಮಯದವರೆಗೆ ಮೇಲೆ ಏಳುವುದೇ ಇಲ್ಲ. ತುಂಬಾ ಗಾಢ ಭಕ್ತಿಯಲ್ಲಿ ಮುಳುಗಿರಬೇಕೆಂದು ಅಲ್ಲಿ ಓಡಾಡುತ್ತಿದ್ದವರು ಆರಂಭದಲ್ಲಿ ಭಾವಿಸುತ್ತಾರೆ. ಆದರೆ, ತುಂಬಾ ಸಮಯವಾದರೂ ಆ ವ್ಯಕ್ತಿ ಮೇಲೆ ಏಳದಿದ್ದಾಗ ಅನುಮಾನಗೊಂಡ ಜನರು ಪರೀಕ್ಷಿಸಿದಾಗ ಆತ ಮೃತಪಟ್ಟಿರುವುದು ಗೊತ್ತಾಗುತ್ತದೆ. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.
रहस्यमय मौत… कटनी में साईं मंदिर में दर्शन करते समय शख्स की हो गई मौत. गिरते ही हो गई उसकी वहीं पर मौत.#Trending#TrendingNowpic.twitter.com/rOAYx852eU
— Narendra Singh (@NarendraNeer007)December 4, 2022

ಮೃತ ವ್ಯಕ್ತಿಯನ್ನು ರಾಕೇಶ್​ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ. ಆದರೆ, ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಯಾವುದೇ ಖಚಿತತೆ ಇಲ್ಲ. ಸಾಯಿಬಾಬನ ಪಾದದಲ್ಲಿ ಪ್ರಾಣ ಬಿಡುವ ಮೂಲಕ ಆ ವ್ಯಕ್ತಿ ಮೋಕ್ಷ ಪಡೆದಿದ್ದು, ಸ್ವರ್ಗ ಸೇರಿದ್ದಾನೆ ಎಂದು ಅನೇಕ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಸಣ್ಣ ಮಕ್ಕಳಿಂದ ಹಿಡಿದ ಮಧ್ಯ ವಯಸ್ಕರವರೆಗೂ ಹೃದಯಾಘಾತಗಳು ಸಾಮಾನ್ಯವಾಗಿವೆ. ನೋಡಲು ಆರೋಗ್ಯಯುತವಾಗಿ ಮತ್ತು ಕಟ್ಟುಮಸ್ತಾಗಿರುವವರು ಕೂಡ ಹಠಾತ್​ ಹೃದಾಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಲಖನೌದಲ್ಲಿ ಮದುವೆ ಸಮಾರಂಭದ ವೇಳೆ 21 ವರ್ಷದ ವಧು ಶಿವಾಂಗಿ ಶರ್ಮಾ ಹಾರ ಬದಲಾಯಿಸುವ ವೇಳೆ ಹೃದಯಾಘಾತದಿಂದ ಕುಸಿದುಬಿದ್ದು ಸಾವಿಗೀಡಾಗಿದ್ದಳು.
ಕರೊನಾ ನಂತರ ದಿಢೀರ ಹೃದಯ ಸ್ತಂಭನದಿಂದ ಅನೇಕ ಆರೋಗ್ಯವಂತ ಜನರು ಕೂಡ ಮೃತರಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಸಿದ್ಧಾರ್ಥ್ ಶುಕ್ಲಾ ಮತ್ತು ಹಾಸ್ಯನಟ ರಾಜು ಶ್ರೀವಾಸ್ತವ್ ಅವರಂತಹ ನಟರು ಸೇರಿದ್ದಾರೆ. ಲೈವ್ ಕನ್ಸರ್ಟ್‌ನಲ್ಲಿ ಬಾಲಿವುಡ್​ ಗಾಯಕ ಕೆಕೆ ಕೂಡ ಮೃತಪಟ್ಟಿದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.(ಏಜೆನ್ಸೀಸ್​)
ಹಾರ ಬದಲಾಯಿಸಿದ ಬೆನ್ನಲ್ಲೇ ಕುಸಿದು ಬಿದ್ದ ವಧು: ಆಸ್ಪತ್ರೆಗೆ ಕರೆದೊಯ್ದ ಕುಟುಂಬಕ್ಕೆ ಕಾದಿತ್ತು ಶಾಕ್​

ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ ಕೇಸ್​: ಇನ್ನೂ ಸಿಗದ ಸುಳಿವು, ಮಹಿಳಾ PSI ವಿರುದ್ಧ FIR​ ದಾಖಲು

ಹಾರ ಬದಲಾಯಿಸಿದ ಬೆನ್ನಲ್ಲೇ ಕುಸಿದು ಬಿದ್ದ ವಧು: ಆಸ್ಪತ್ರೆಗೆ ಕರೆದೊಯ್ದ ಕುಟುಂಬಕ್ಕೆ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 3 =
Remember me
