ಮುಂಬೈ:ಬಾಲಿವುಡ್​ ಚೆಲುವೆ ಕತ್ರೀನಾ ಕೈಫ್​ ಮತ್ತು ನಟ ವಿಕಿ ಕೌಶಲ್​​ರ ಮದುವೆ ನಿಶ್ಚಿತಾರ್ಥವು ದೀಪಾವಳಿ ಸಂದರ್ಭದಲ್ಲಿ ನಡೆದ ಗೌಪ್ಯ ‘ರೋಕಾ’ ಕಾರ್ಯಕ್ರಮದಲ್ಲಿ ನಡೆದಿದೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಕೇಳಿ ಬಂತು. ಇದೀಗ ಡಿಸೆಂಬರ್​ ತಿಂಗಳಲ್ಲಿ ಈ ಹಾಟ್​ ಜೋಡಿಯ ವಿವಾಹವು ಎಲ್ಲಿ ಯಾವಾಗ ನಡೆಯಲಿದೆ ಎಂಬ ಬಗ್ಗೆ ವರದಿಗಳು ಹರಿದಾಡಿವೆ.
2019 ರಿಂದ ಡೇಟ್​ ಮಾಡುತ್ತಿದ್ದಾರೆ ಎನ್ನಲಾಗುವ ಕತ್ರೀನಾ ಮತ್ತು ವಿಕಿ ತಮ್ಮ ಆಪ್ತವರ್ಗಕ್ಕೆ ಡಿಸೆಂಬರ್​ ತಿಂಗಳಲ್ಲಿ ಫ್ರೀಯಾಗಿರಲು ಹೇಳಿದ್ದರೆಂದು ಈ ಮುನ್ನ ಕೇಳಿಬಂದಿತ್ತು. ಇದೀಗ ಅವರು ರಾಜಸ್ಥಾನದ ಸವಾಯಿ ಮಾಧೋಪುರ್​ನ ಸಿಕ್ಸ್​ ಸೆನ್ಸಸ್​ ಐಷಾರಾಮಿ ಹೋಟೆಲ್​ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಡಿ. 7 ರಿಂದ 9 ವಿವಾಹದ ಕಾರ್ಯಕ್ರಮಗಳು ನಡೆಯಲಿವೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ.
ಇದನ್ನೂ ಓದಿ:ಕತ್ರೀನಾ ಮತ್ತು ವಿಕಿ ಕೌಶಲ್​ರ ಮದುವೆ ಗಟ್ಟಿ! ದೀಪಾವಳಿ ಸಂದರ್ಭದಲ್ಲಿ ನಡೆಯಿತೇ ‘ರೋಕಾ’?
ವಿವಾಹ ಸಮಾರಂಭಕ್ಕೆ ತಮ್ಮ ಬಂಧುಬಳಗದೊಂದಿಗೆ ಚಿತ್ರರಂಗದ ಗಣ್ಯರನ್ನು ಆಮಂತ್ರಿಸಲಿದ್ದಾರೆ. ಆದ್ದರಿಂದ ಆ ಸಮಯಕ್ಕೆ ಸ್ಥಳೀಯ ಕಾರ್​ ರೆಂಟಲ್​ ಸೇವೆಗಳನ್ನು ಆಗಲೇ ಸಾರಾಸಗಟಾಗಿ ಬುಕ್​ ಮಾಡಲಾಗಿದೆ. ಆ ವೇಳೆ ಆಗಮಿಸುವ ಅತಿಥಿಗಳಿಗೆ ಏರ್​ಪೋರ್ಟ್​ನಿಂದ ಹೋಟೆಲ್​ಗೆ ತಲುಪಲು ಮತ್ತು ಮದುವೆಯ ಬೇರೆ ಬೇರೆ ಕಾರ್ಯಕ್ರಮಗಳ ಓಡಾಟಕ್ಕೆ ಅನುಕೂಲವಾಗುವಂತೆ ವಾಹನಗಳನ್ನು ಬುಕ್​ ಮಾಡಲಾಗಿದೆ ಎಂದು ವರದಿ ಹೇಳಿದೆ. ಆದರೆ ಕತ್ರೀನಾ ಆಗಲಿ, ವಿಕಿ ಆಗಲಿ ಈ ಬಗ್ಗೆ ಏನೂ ಹೇಳುತ್ತಿಲ್ಲ. ಅವರ ಕಡೆಯಿಂದ ಈವರೆಗೆ ಯಾವುದೇ ಆಮಂತ್ರಣವೂ ಹೊರಬಿದ್ದಿಲ್ಲ ಎನ್ನಲಾಗಿದೆ.(ಏಜೆನ್ಸೀಸ್)
ದಾಖಲೆ ಮೊತ್ತಕ್ಕೆ ಮಾರಾಟವಾದ ಬಂಡೂರು ಟಗರು; ಬೆಲೆ ಎಷ್ಟು ಗೊತ್ತೇ?

ವಿರಾಟ್​​ ಕೊಹ್ಲಿ ಪುತ್ರಿಗೆ ರೇಪ್​ ಬೆದರಿಕೆ ಹಾಕಿದ್ದವ ಪೊಲೀಸ್​ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 9 =
Remember me
