ಮುಂಬೈ:ದೆಹಲಿಯ ಬುರಾರಿಯಲ್ಲಿ ಕೇದಾರನಾಥ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಧ್ಯಾತ್ಮಿಕ ಒಗ್ಗಟ್ಟಿನ ಮಹತ್ವದ ಪ್ರದರ್ಶನದಲ್ಲಿ ಜ್ಯೋತಿರ್​​​ ಮಠದ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸವಾದ ಮಾತೋಶ್ರೀಗೆ ಭೇಟಿ ನೀಡಿದರು.
ಇದನ್ನು ಓದಿ:ಸಿಎಂ ಕೇಜ್ರಿವಾಲ್​​ 8.5 ಕೆಜಿ ಅಲ್ಲ ಕಡಿಮೆ ಆಗಿರೋದಿಷ್ಟೆ…. ಜೈಲಿನ ಸೂಪರಿಂಟೆಂಡೆಂಟ್ ಕೊಟ್ಟ ಸ್ಪಷ್ಟನೆ ಹೀಗಿದೆ
ಈ ವೇಳೆ ಕೇದಾರನಾಥ ದೇವಾಲಯಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಪಾವಿತ್ರ್ಯದ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಕೇದಾರನಾಥ ದೇವಾಲಯವನ್ನು ದೆಹಲಿಯಲ್ಲಿ ಮಾಡಲು ಸಾಧ್ಯವಿಲ್ಲ, ಇದು ತಪ್ಪು. ಶಿವಪುರಾಣದಲ್ಲಿ ಹೆಸರು ಮತ್ತು ಸ್ಥಳದೊಂದಿಗೆ ಹನ್ನೆರಡು ಜ್ಯೋತಿರ್​​ಲಿಂಗಗಳನ್ನು ಉಲ್ಲೇಖಿಸಲಾಗಿದೆ. ಕೇದಾರನಾಥದ ವಿಳಾಸ ಹಿಮಾಲಯದಲ್ಲಿರುವಾಗ ಅದು ದೆಹಲಿಯಲ್ಲಿ ಹೇಗೆ ಇರುತ್ತದೆ?. ಸಾಂಕೇತಿಕವಾಗಿ ದೆಹಲಿಯಲ್ಲಿ ಕೇದಾರನಾಥ ದೇವಾಲಯ ಇರಬಾರದು ಎಂದು ಹೇಳಿದ್ದಾರೆ.
ಕೇದಾರನಾಥದಲ್ಲಿ 228 ಕೆಜಿ ಚಿನ್ನದ ಹಗರಣ ನಡೆದಿದೆ. ಯಾರೂ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲಿ ಹಗರಣ ನಡೆದ ನಂತರ ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣವಾಗುತ್ತದೆ. ಇಲ್ಲಿಯವರೆಗೆ ಅದರ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಇದಕ್ಕೆ ಯಾರು ಹೊಣೆ? ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಿಸಲಾಗುವುದು ಎಂದು ಹೇಳಲಾಗುತ್ತಿದೆ. ಇದು ಆಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
VIDEO | Swami Avimukteshwaranand Saraswati, Shankaracharya of Jyotirmath was at ‘Matoshree’ in Mumbai on request of Shiv Sena (UBT) Chief Uddhav Thackeray. Here’s what he said interacting with the media.
“We follow Hindu religion. We believe in ‘Punya’ and ‘Paap’. ‘Vishwasghat’…pic.twitter.com/AZCJaDfHhi
— Press Trust of India (@PTI_News)July 15, 2024
ಇನ್ನು ಇದೇ ವೇಳೆ ಉದ್ಧವ್ ಠಾಕ್ರೆ ವಿರುದ್ಧದ ದ್ರೋಹದ ಬಗ್ಗೆ ಮಾತನಾಡಿದ ಸ್ವಾಮಿ ಅವಿಮುಕ್ತೇಶ್ವರಾನಂದರು, ನಾವು ಹಿಂದೂ ಧರ್ಮವನ್ನು ಅನುಸರಿಸುತ್ತೇವೆ. ಪುಣ್ಯ ಮತ್ತು ಪಾಪವನ್ನು ನಂಬುತ್ತೇವೆ. ವಿಶ್ವಾಸದ್ರೋಹ ದೊಡ್ಡ ಪಾಪಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಉದ್ಧವ್ ಠಾಕ್ರೆ ಅವರ ವಿಚಾರದಲ್ಲೂ ಅದೆ ನಡೆದಿದೆ. ಅವರು ನನ್ನನ್ನು ಕರೆದರು ನಾನು ಇಲ್ಲಿಗೆ ಬಂದಿದ್ದೇನೆ. ಅವರಿಗೆ ಮಾಡಿದ ದ್ರೋಹದ ಬಗ್ಗೆ ನಮಗೆ ನೋವಾಗಿದೆ. ಅವರು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ನಮ್ಮ ನೋವು ಹೋಗುವುದಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಅವರಿಗೆ ಆಶೀರ್ವಾದ ಮಾಡಿದ್ದೇವೆ. ನರೇಂದ್ರ ಮೋದಿ ನಮ್ಮ ಶತ್ರು ಅಲ್ಲ, ನಾವು ಅವರ ಹಿತೈಷಿಗಳು, ಯಾವಾಗಲೂ ಅವರ ಕಲ್ಯಾಣವನ್ನು ಬಯಸುತ್ತೇವೆ. ಯಾರೇ ತಪ್ಪು ಮಾಡಿದರು ನಾವು ಅದರ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​​)
ನೇಪಾಳದ ನೂತನ ಪ್ರಧಾನಿ ಕೆಪಿ ಶರ್ಮಾ ಒಲಿಗೆ ಅಭಿನಂದಿಸಿದ ‘ನಮೋ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + fifteen =
Remember me
