ನವದೆಹಲಿ:ದೇಶದ ಪ್ರಮುಖ ದೇವಾಲಯಗಳಲ್ಲೊಂದಾದ ಕೇದಾರನಾಥ ದೇವಸ್ಥಾನದಲ್ಲಿ ನೂರಾರು ಕಿಲೋ ಚಿನ್ನ ನಾಪತ್ತೆಯಾಗಿರುವ ಆರೋಪದ ಕುರಿತು ದೇವಾಲಯ ಸಮಿತಿ ಬುಧವಾರ ಪ್ರತಿಕ್ರಿಯಿಸಿದೆ. ಸ್ವಾಮಿ ಅವಿಮುಕ್ತೇಶ್ವರಾನಂದ ಕಾರ್ವವೈಖರಿಯನ್ನು ಭದ್ರಿನಾಥ – ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಟೀಕಿಸಿದ್ದು, ಸ್ವಾಮೀಜಿ ವಾಸ್ತವ ಸಂಗತಿಗಳನ್ನು ಜನರ ಮುಂದಿಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಟ್ರಂಪ್​ರನ್ನು ಜಗನ್ನಾಥ ದೇವರೇ ರಕ್ಷಿಸಿದ್ದು: ಇಸ್ಕಾನ್​
ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಕೇದಾರನಾಥ ದೇಗುಲದಲ್ಲಿ 228 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಹೇಳುತ್ತಿದ್ದಾರೆ. ಇದು ದುರದೃಷ್ಟಕರ ಸಂಗತಿಯಾಗಿದೆ. ಸತ್ಯವನ್ನು ಪ್ರಪಂಚದ ಮುಂದೆ ತರುವಂತೆ ಸವಾಲು ಹಾಕುತ್ತಿದ್ದೇನೆ. ಹೇಳಿಕೆ ಕೊಡುವ ಬದಲು ಸ್ವಾಮೀಜಿ ದೂರು ನೀಡಬೇಕು. ಅವರ ಬಳಿ ಸಾಕ್ಷ್ಯವಿದ್ದರೆ ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸರ ಮುಂದೆ ದೂರು ಸಲ್ಲಿಸಲಿ. ಅದೂ ಅಲ್ಲದೆ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ದೇವಸ್ಥಾನದ ಕೀರ್ತಿಗೆ ಭಂಗ ತರುವ ಹಕ್ಕು ಶಂಕರಾಚಾರ್ಯರು( ಸ್ವಾಮಿ ಅವಿಮುಕ್ತೇಶ್ವರಾನಂದ) ಅವರಿಗೆ ಇಲ್ಲ. ಸ್ವಾಮೀಜಿ ರಾಜಕೀಯ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಕೇವಲ ವಿವಾದಗಳನ್ನು ಸೃಷ್ಟಿಸಲು ಹೀಗೆಲ್ಲ ಅವರು ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಅಜೆಂಡಾವನ್ನು ಮುಂದಕ್ಕೆ ತರಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.
ಕೇದಾರನಾಥ ದೇಗುಲದಲ್ಲಿ ಭದ್ರಪಡಿಸಿದ್ದ 228 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಸ್ವಾಮಿ ಅವಿಮುಕ್ತೀಶ್ವರಾನಂದ ಅವರು ಸೋಮವಾರ ಆರೋಪಿಸಿದ್ದರು. ಈ ವಿಷಯವನ್ನು ಏಕೆ ಬಹಿರಂಗಪಡಿಸುತ್ತಿಲ್ಲ? ಈ ಚಿನ್ನದಲ್ಲಿ ದೆಹಲಿಯಲ್ಲಿ ದೇಗಲುದ ಮಾದರಿ ನಿರ್ಮಾಣವಾಗುತ್ತಿದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆಲ್ಲ ಯಾರು ಹೊಣೆ? ತನಿಖೆಗೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದರು.
ಸ್ವಾಮೀಜಿ ಮೊದಲು 320ಕೆಜಿ ಬಳಿಕ 228ಕೆಜಿ, ಆಮೇಲೆ 36ಕೆಜಿ, 32ಕೆಜಿ ಈಗ 27ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಮಾತು ಬದಲಿಸುತ್ತಲೇ ಇದ್ದಾರೆ. ಇದರ ನಡುವೆ ಈಗ ಚಿನ್ನ ನಾಪತ್ತೆಯಾಗಿರುವುದು ಎಷ್ಟು ಎಂಬುದು ಮುಖ್ಯವಲ್ಲ, ನಾಪತ್ತೆಯಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಅವರ ಮೇಲೆಯೇ ಅನುವಾಮ ಪಡುವಂತಾಗಿದೆ.
ಕ್ಯೂಆರ್​ ಕೋಡ್​ ಬಳಸಿ ಕಾಶಿ ವಿಶ್ವನಾಥ ದೇಗುಲ ಪ್ರವೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 2 =
Remember me
