| ವಿನೋದ್​ ಕುಮಾರ್​ ಕೆ, ಮ್ಯೂಚವಲ್​ ಫಂಡ್​ ವಿತರಕ
ನಿಮ್ಮ ಆದರ್ಶ ಜೀವನದ ಬಗ್ಗೆ ನೀವು ಎಷ್ಟು ಬಾರಿ ಯೋಚಿಸುತ್ತೀರಿ? ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮದೆಯಾದ ಆಸೆ-ಆಕಾಂಕ್ಷೆಗಳಿರುತ್ತವೆ. ಈ ಕ್ಷಣಿಕ ಜೀವನದಲ್ಲಿ ಒಂದೊಂದು ಕ್ಷಣವನ್ನು ತುಂಬಾ ಎಂಜಾಯ್​ ಮಾಡಬೇಕೆಂಬ ಆಸೆ ಎಲ್ಲರಲ್ಲೂ ಇದೆ. ಹೀಗಾಗಿ ತಮ್ಮ ಜೀವನದ ಬಗ್ಗೆ ಆಗಾಗ ಚಿಂತಿಸುತ್ತಲೇ ಇರುತ್ತಾರೆ. ಆದರೆ, ಹಣಕಾಸು ಮಿತಿ ಆಸೆ-ಆಕಾಂಕ್ಷೆಗಳನ್ನು ಕಟ್ಟಿಹಾಕುತ್ತದೆ. ಕೆಲಸ ಅಥವಾ ಹಣಕಾಸಿನ ಅವಶ್ಯಕತೆಗಳಿಗೆ ಬದ್ಧರಾಗಿರದ ಜೀವನ ಮತ್ತು ದಿನಗಳನ್ನು ನಮ್ಮಿಷ್ಟದಂತೆ ಕಳೆಯಲು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಲು ಎಲ್ಲರೂ ಬಯಸುತ್ತಾರೆ. ಯಾವುದೇ ಕ್ಷೇತ್ರವಾಗಿರಲಿ ಸಂಪೂರ್ಣ ಎಂಜಾಯ್​ ಮಾಡಲು ಬಯಸುತ್ತಾರೆ.
ನಿಮ್ಮ ಈ ಗುರಿಗಳನ್ನು ಅಥವಾ ಆಸೆಗಳನ್ನು ಈಡೇರಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಅದು ಆರ್ಥಿಕ ಸ್ವಾತಂತ್ರ್ಯದಿಂದ ಮಾತ್ರ. ಆರ್ಥಿಕವಾಗಿ ಸ್ವತಂತ್ರರಾಗಿದ್ದರೆ ನಿಮ್ಮ ಬಯಕೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು. ಯಾರ ಮೇಲೆಯೂ ಅವಲಂಬನೆ ಆಗಬೇಕಿಲ್ಲ. ಹಾಗಾದರೆ ಆರ್ಥಿಕ ಸ್ವಾತಂತ್ರ್ಯ ಗಳಿಸುವುದು ಹೇಗೆ ಅಂತೀರಾ? ಅದಕ್ಕಾಗಿ ನೀವು ಐಸಿಐಸಿಐ ಪ್ರುಡೆನ್ಸಿಯಲ್​ ಫ್ರೀಡಂ ಎಸ್​ಐಪಿ ಎಂದು ಕರೆಯಲ್ಪಡುವ ಐಸಿಐಸಿಐ ಪ್ರುಡೆನ್ಸಿಯಲ್ ಮ್ಯೂಚುವಲ್​ ಫಂಡ್ಸ್​​ ಫ್ರೀಡಂ ಎಸ್​​ಐಪಿ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಫ್ರೀಡಂ ಎಸ್​ಐಪಿ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲ ಪ್ರಮುಖ ವಿಚಾರಗಳು ಇಲ್ಲಿವೆ.
ಫ್ರೀಡಂ ಎಸ್​ಐಪಿ ಅನ್ನೋದು ಒಂದು ವಿಶಿಷ್ಟವಾದ ಯೋಜನೆಯಾಗಿದೆ. ಈ ಎಸ್​ಐಪಿ ಅಂದರೆ, ವ್ಯವಸ್ಥಿತ ಹೂಡಿಕೆ ಯೋಜನೆ ಎಂದರ್ಥ. ಈ ವಿಧಾನದ ಮೂಲಕ ನಿಮ್ಮಲ್ಲಿರುವ ಸಂಪತ್ತನ್ನು ನೀವು ಬೆಳೆಸಿಕೊಂಡು ಹೋಗಬಹುದು. ಅಲ್ಲದೆ, ನಿಮ್ಮ ಸಂಪತ್ತು ಬೆಳೆದಾಗ ನಿಮಗೆ ಬೇಕಾದ ಸಮಯದಲ್ಲಿ ಹಣದ ಹರಿವು ಸಿಗುತ್ತದೆ. ಎಸ್​ಐಪಿ ಮೂಲಕ ಹೂಡಿಕೆ ಮಾಡಿದ ಹಣವನ್ನು ವ್ಯವಸ್ಥಿತ ವಾಪಸಾತಿ ಯೋಜನೆ (SWP-Systematic withdraw plan) ಮೂಲಕ ಮಾಸಿಕವಾಗಿ ನಗದು ಹಣವನ್ನು ಪಡೆದುಕೊಳ್ಳಬಹುದು.
ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಆರ್ಥಿಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬಹುದು.ನೀವು ಮೊದಲು ಏನು ಮಾಡಬೇಕೆಂದರೆ, ನಿಮ್ಮದೆಯಾದ ಮತ್ತು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಎಸ್​ಐಪಿ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ನಿಮ್ಮ ಪ್ಲಾನ್​ ಅವಧಿ ಮತ್ತು ನಿಮ್ಮ ಪ್ಲಾನ್​ ಸೆಟ್​ ಅನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಮೂಲ ಸ್ಕೀಮ್, ನೀವು ಎಲ್ಲಿ ನಿಮ್ಮ ಎಸ್​ಐಪಿ ಪ್ರಾರಂಭಿಸುತ್ತೀರಿ ಮತ್ತು ನಿಮ್ಮ ಆಯ್ಕೆಯ ಪ್ಲಾನ್​ ಹಾಗೂ ನಿಮ್ಮ ವ್ಯವಸ್ಥಿತ ವಾಪಸಾತಿ ಯೋಜನೆ (ಎಸ್​ಡಬ್ಲ್ಯುಪಿ) ಗೆ ಲಿಂಕ್ ಮಾಡಲಾದ ಸ್ಕೀಮ್ ಒಳಗೊಂಡಿರುತ್ತದೆ. ಕೊನೆಯಲ್ಲಿ ನಿಮ್ಮ ಎಸ್​ಡಬ್ಲ್ಯುಪಿ ಅಂದರೆ ವಾಪಾಸಾತಿ ಮೊತ್ತವನ್ನು ನಿರ್ಧರಿಸಿ. ಇದಾದ ಬಳಿಕ ನೀವು ನಿರ್ಧಿಷ್ಟ ಸಮಯದವರೆಗೆ ಹೂಡಿಕೆ ಮಾಡಿಕೊಂಡು ಹೋದಲ್ಲಿ, ಎಲ್ಲಿಯವರೆಗೆ ನಿಮ್ಮ ಪ್ಲಾನ್ ಯೂನಿಟ್​ ಲಭ್ಯವಿರುತ್ತದೆ ಅಥವಾ ಮ್ಯೂಚುವಲ್ ಫಂಡ್ ನಿರ್ದಿಷ್ಟಪಡಿಸಿದ ದಿನಾಂಕದವರೆಗೆ ನಿಮ್ಮ ಮಾಸಿಕ ಎಸ್​ಡಬ್ಲ್ಯುಪಿ ಮೊತ್ತವನ್ನು ನೀವು ಪಡೆಯುತ್ತೀರಿ. ಇದರ ಮೂಲಕ ನಿಮ್ಮ ಆದರ್ಶ ಜೀವನ ನಡೆಸಲು ಮಾಸಿಕ ಆದಾಯವನ್ನು ನೀವು ಪಡೆಯುತ್ತೀರಿ.
ಅಂದಹಾಗೆ ಫ್ರೀಡಂ ಎಸ್​ಐಪಿ ಒಂದು ಅತ್ಯುತ್ತಮ ಗುರಿ ಆಧಾರಿತ ಹೂಡಿಕೆ ಪ್ಲಾನ್​ ಆಗಿದೆ. ಇದು ದೀರ್ಘಾವಧಿ ಹೂಡಿಕೆಯ ಅಭ್ಯಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮಿಷ್ಟದ ಪ್ಲಾನ್​ ಅವಧಿಯನ್ನು ಆಯ್ಕೆ ಮಾಡುವ ಸ್ವಾಂತಂತ್ರ್ಯವನ್ನು ನಿಮಗೆ ನೀಡುತ್ತದೆ. ಇದಿಷ್ಟೇ ಅಲ್ಲದೆ, ಹೆಚ್ಚುವರಿಯಾಗಿ, ಈ ಯೋಜನೆಯು ನಿಮ್ಮ ಹಣಕಾಸಿನ ಅವಶ್ಯಕತೆಗಳು ಮತ್ತು ಮಾರುಕಟ್ಟೆ ಅಪಾಯಗಳಿಗೆ ಅನುಗುಣವಾಗಿ ವ್ಯಾಪಕ ಶ್ರೇಣಿಯ ಮೂಲ ಮತ್ತು ನಿರ್ದಿಷ್ಟ ಪ್ಲಾನ್​ಗಳನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಮೂಲಕ ನಿಮ್ಮನ್ನು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ಕೊಂಡೊಯ್ಯುತ್ತದೆ.
ಸರಿಯಾದ ಮ್ಯೂಚುಯಲ್ ಫಂಡ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಸಾಧ್ಯವಾದಷ್ಟು ಬೇಗ ನಿಮ್ಮ ಫ್ರೀಡಮ್ ಎಸ್​ಐಪಿ ಅನ್ನು ಪ್ರಾರಂಭಿಸುವುದು ಸೂಕ್ತವಾಗಿದೆ. ನೀವು ಎಲ್ಲಿಯವರೆಗೆ ಹೂಡಿಕೆ ಮಾಡುತ್ತೀರೋ ನಿಮ್ಮ ಮಾಸಿಕ ವಾಪಾಸಾತಿ(ಎಸ್​ಡಬ್ಲ್ಯುಪಿ) ಮೊತ್ತವೂ ಕೂಡ ಅಷ್ಟೇ ದೊಡ್ಡದಾಗಿರುತ್ತದೆ. ಹೀಗಾಗಿ ಫ್ರೀಡಮ್ ಎಸ್​ಐಪಿಯೊಂದಿಗೆ ನಿಮ್ಮ ಆರ್ಥಿಕ ಸ್ವಾತಂತ್ರ್ಯ ನಿಮ್ಮ ಬಳಿಯೇ ಇದೆ.
ರೋಹಿತ್​ ಅಲ್ಲ ಈತನೇ ಟೀಮ್​ ಇಂಡಿಯಾದ ರಿಯಲ್​ ಲೀಡರ್​! ಮಾಜಿ ಬ್ಯಾಟಿಂಗ್​ ಕೋಚ್​ ಅಚ್ಚರಿ ಹೇಳಿಕೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seven + eighteen =
Remember me
