ಬೆಂಗಳೂರು:ಬೀದಿನಾಯಿ ಕಚ್ಚಲು ಬಂದರೆ ಯಾರೇ ಆದರೂ ಹಚಾ ಎಂದು ಓಡಿಸುತ್ತಾರೆ, ಕಲ್ಲು ಎತ್ತಿಕೊಂಡು ಬೆದರಿಸುತ್ತಾರೆ. ಆದರೆ ಬೀದಿನಾಯಿ ಕಚ್ಚಿದರೂ ಸುಮ್ಮನಿರಬೇಕು ಎನ್ನುತ್ತಾರೆ ಪ್ರಾಣಿ ದಯಾ ಸಂಘದವರು. ಅಷ್ಟಕ್ಕೇ ಸುಮ್ಮನಾಗದ ಅವರು ಮೇನಕಾ ಗಾಂಧಿಯಿಂದ ಫೋನ್​ ಮಾಡಿಸುತ್ತಾರೆ. ಹಾಗೆ ಫೋನ್​ ಮಾಡುವ ಮೇನಕಾ ಗಾಂಧಿ, ಬೀದಿನಾಯಿ ಉಪಟಳ ಅನುಭವಿಸಿದವರಿಗೆ ಗೂಂಡಾ-ಸ್ಕೌಂಡ್ರೆಲ್​ ಎಂದು ಬಾಯಿಗೆ ಬಂದ ಹಾಗೆ ಬೈದಿದ್ದಲ್ಲದೆ, ಪ್ರಾಣಿಗಳ ವಿಷಯದಲ್ಲಿ ಏನೇ ಆದರೂ ಸುಮ್ಮನಿರುವಂತೆ ಧಮ್ಕಿ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣಿಗಳ ತಂಟೆಗೆ ಹೋದರೆ ಮಹಿಳಾ ದೌರ್ಜನ್ಯ ಕೇಸ್ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಇದೆಲ್ಲೋ ದೂರದಲ್ಲಿ ನಡೆದಿದ್ದಲ್ಲ. ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗದಂತಿರುವ ಹೈಗ್ರೌಂಡ್ಸ್​ನ ಕ್ರೆಸೆಂಟ್ ರಸ್ತೆಯಲ್ಲಿನ ಶ್ರೀಕಂಠನ್​ ಲೇಔಟ್​ನಲ್ಲಿ ನಡೆದಿರುವಂಥದ್ದು. ಇಲ್ಲಿನ ಬೀದಿನಾಯಿಗಳ ಉಪಟಳ ಹೆಚ್ಚಳಗೊಂಡಿದ್ದು, ಈ ಬಡಾವಣೆಯ ರಾಮಲಿಂಗಂ ಎಂಬವರ ಮಗಳಿಗೆ ಇತ್ತೀಚೆಗೆ ಬೀದಿನಾಯಿಯೊಂದು ಕಚ್ಚಿದೆ. ಆಗ ರಕ್ಷಣೆಗೋಸ್ಕರ ಅವರು ಬೀದಿನಾಯಿಯತ್ತ ಬ್ಯಾಟ್ ಬೀಸಿದ್ದರು. ಆ ಬಳಿಕ ಅಲ್ಲಿರುವ ನಾಯಿಗಳನ್ನು ಓಡಿಸಲಾರಂಭಿಸಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಈ ನಡುವೆ ಅದೇ ಬಡಾವಣೆಯ ನಿತಿನ್ ಎಂಬವರು ದೊಡ್ಡ ಸಾಕುನಾಯಿಯೊಂದನ್ನು ಯಾವ ರಕ್ಷಣೆ ಇಲ್ಲದೆ ಅಡ್ಡಾಡಲು ಬಿಡುತ್ತಿದ್ದಾರೆ. ಈ ಬಗ್ಗೆ ಆಕ್ಷೇಪಿಸಿದರೆ ಅವರು ಜಗಳಕ್ಕೆ ಬರುತ್ತಿದ್ದು, ಅವರೊಂದಿಗೆ ಗೆಳೆಯರಾದ ಮಾನಸಿ ಹಾಗೂ ದೀಪಕ್​ ಎಂಬವರು ನಮ್ಮ ಬಡಾವಣೆಯವರಲ್ಲದಿದ್ದರೂ ಮಧ್ಯ ಪ್ರವೇಶಿಸಿ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ ಎಂದು ನಿತಿನ್​ ಮೊಬೈಲ್​ಫೋನ್​ ನಂಬರ್ ಉಲ್ಲೇಖಿಸಿ ಶ್ರೀಕಂಠನ್​ ಲೇಔಟ್​ ವೆಲ್​ಫೇರ್ ಅಸೋಸಿಯೇಷನ್​ ಸದಸ್ಯರೆಲ್ಲ ಸೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಜ. 2ರಂದು ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದೆ.
ಇದನ್ನೂ ಓದಿ:7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!
ಹೀಗೆ ಬೀದಿನಾಯಿಗಳ ಉಪಟಳದಿಂದ ರಕ್ಷಣೆ ಕೋರಿ ಪೊಲೀಸರಿಗೆ ದೂರುನೀಡಿದ್ದಕ್ಕೆ ನಿತಿನ್​ ಹಾಗೂ ಮಾನಸಿ ಎಂಬವರು ಸಂಸದೆ ಹಾಗೂ ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತೆ ಮೇನಕಾ ಗಾಂಧಿಗೆ ವಿಷಯ ತಿಳಿಸಿದ್ದಾರೆ. ಶ್ರೀಕಂಠನ್​ ಬಡಾವಣೆಯ ನಿವಾಸಿ ರಾಮಲಿಂಗಂ ಎಂಬವರಿಗೆ ಮೇನಕಾ ಗಾಂಧಿ ಕರೆ ಮಾಡಿ, ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಗೂಂಡಾ- ಸ್ಕೌಂಡ್ರೆಲ್​ ಎಂದೆಲ್ಲ ಬೈದಿರುವ ಮೇನಕಾ, ಸ್ಥಳೀಯ ಕಾರ್ಪೋರೇಟರ್​, ಶಾಸಕರಷ್ಟೇ ಅಲ್ಲದೆ ಬಿಜೆಪಿ ಮುಖ್ಯಸ್ಥರಿಗೂ ದೂರು ಹೇಳುವುದಾಗಿ ಬೆದರಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣಿಗಳ ತಂಟೆಗೆ ಹೋದರೆ ಮಹಿಳಾ ದೌರ್ಜನ್ಯ ಕೇಸ್ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಉತ್ತರಿಸಿದ ರಾಮಲಿಂಗಂ, ‘ನನ್ನ ಮಗಳಿಗೆ ನಾಯಿ ಕಚ್ಚಿದೆ, ಅದಕ್ಕೆ ರಕ್ಷಣೆಗಾಗಿ ಬ್ಯಾಟ್​ ಬೀಸಿದ್ದೇನೆ, ನಿಮಗೆ ಮಾಹಿತಿ ನೀಡಿರುವವರು ದಾರಿ ತಪ್ಪಿಸಿದ್ದಾರೆ, ನಿಮಗೆ ಸಂಪೂರ್ಣ ವಿಷಯ ಗೊತ್ತಿಲ್ಲ’ ಎಂದು ವಿವರಿಸಲು ಯತ್ನಿಸಿದರೆ, ಗೂಂಡಾ-ಸ್ಕೌಂಡ್ರೆಲ್ ಎಂದು ಮತ್ತೆ ಮತ್ತೆ ಹೇಳಿ, ಬೀದಿನಾಯಿಗಳ ತಂಟೆಗೆ ಹೋಗದಂತೆ ಮೇನಕಾ ಗಾಂಧಿ ಧಮಕಿ ಹಾಕಿದ್ದಾರೆ. ಈ ಸಂಭಾಷಣೆಯ ಆಡಿಯೋ ತುಣುಕು ಈಗ ವೈರಲ್ ಆಗುತ್ತಿದ್ದು, ಪ್ರಕರಣ ಕುತೂಹಲ ಮೂಡಿಸಿದೆ.
ಮುಂಬೈ ಯುವಕ ಕುತ್ತಿಗೆ ಸೀಳಿಕೊಂಡ… ಐರ್ಲೆಂಡ್​ನಲ್ಲಿ ಕೂತವ ಬಚಾವ್​ ಮಾಡಿದ… ಅಬ್ಬಬ್ಬಾ ಎಂಥ ವಿಚಿತ್ರವಿದು!

ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

ಇನ್ಶೂರೆನ್ಸ್ ಪಾಲಿಸಿ ಮಾಡಿಸೋ ಮುನ್ನ ಹುಷಾರು!; ದೊಡ್ಡ ಕಂಪನಿಗಳ ಹೆಸರಲ್ಲೇ ನಕಲಿ ಪಾಲಿಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 11 =
Remember me
