ನವದೆಹಲಿ:ಅಬಕಾರಿ ಹಗರಣ ಪ್ರಕರಣದಲ್ಲಿ ‘ಕಿಕ್‌ಬ್ಯಾಕ್’ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇತರ ಆರೋಪಿಗಳನ್ನು ಒತ್ತಾಯಿಸಿದ್ದು, ಪ್ರಮುಖ ಸಂಚುಕೋರರಾಗಿದ್ದಾರೆ. ಹೀಗಾಗಿ ಅವರನ್ನು 10 ದಿನಗಳ ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಲಯವನ್ನು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಕೋರಿದೆ.
ಇದನ್ನೂ ಓದಿ:ಮದ್ಯದ ವಿರುದ್ಧ ಮಾತನಾಡಿದ ಕೇಜ್ರಿವಾಲ್ ಇಂದು ಮದ್ಯಪಾನ ನೀತಿ ಮಾಡುತ್ತಿದ್ದಾರೆ: ಅಣ್ಣಾ ಹಜಾರೆ ಟೀಕೆ
ದೆಹಲಿ ಮದ್ಯ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಬಂಧಿಸಿದ ಇಡಿ ಶುಕ್ರವಾರ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಪ್ರಕರಣದ ಇತರ ಕೆಲವು ಆರೋಪಿಗಳಿಂದ 100 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಕೇಜ್ರಿವಾಲ್​ ಪ್ರಮುಖ ಸಂಚುಕೋರರಾಗಿದ್ದಾರೆ. ಇದರಲ್ಲಿ 45 ಕೋಟಿ ರೂ.ಗಳನ್ನು ಗೋವಾ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.
ಕೇಜ್ರಿವಾಲ್​ರನ್ನು ವಿಶೇಷ ನ್ಯಾಯಾಧೀಶರಾದ ಕಾವೇರಿ ಎದುರು ಹಾಜರುಪಡಿಸಲಾಯಿತು. ದೆಹಲಿ ಮದ್ಯ ನೀತಿಯ ರಚನೆ ಮತ್ತು ಅನುಷ್ಠಾನದ ಸಮಯದಲ್ಲಿ ಹಲವಾರು ಕೋಟಿ ರೂಪಾಯಿ ಕೈ ಬದಲಾಗಿದೆ. 2021-22ರ ಅವಧಿಯಲ್ಲಿ ಈ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
ಏಜೆನ್ಸಿ ಕೇಜ್ರಿವಾಲ್ ಅವರನ್ನು “ಪ್ರಮುಖ ಪಿತೂರಿ” ಎಂದೂ ಕರೆದಿದೆ. ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುತ್ತಿದ್ದು, ನ್ಯಾಯಾಧೀಶರು ಯಾವರೀತಿಯ ತೀರ್ಪು ನೀಡುತ್ತಾರೆ ಎಂಬ ಕುತೂಹಲ ಮೂಡಿದೆ.
ಮಧ್ಯಾಹ್ನ 3.15 ಗಂಟೆಗೆ ಇಡಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ. ರಾಜು, ಎಎಪಿ ರಾಷ್ಟ್ರೀಯ ಸಂಚಾಲಕರು ಸೌತ್ ಗ್ರೂಪ್‌ನಿಂದ 100 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಗಳ ಕರೆ ಡೇಟಾ ಕೂಡ ಕಾನೂನುಬಾಹಿರ ಚಟುವಟಿಕೆಗಳನ್ನು ದೃಢಪಡಿಸಿದೆ ಎಂದು ಹೇಳಿದರು.
ತನ್ನ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೇಜ್ರಿವಾಲ್​ ಹಿಂತೆಗೆದುಕೊಂಡ ಸ್ವಲ್ಪ ಸಮಯದ ನಂತರ ಅಂದರೆ ಮಧ್ಯಾಹ್ನ 2ಗಂಟೆಗೆ ಕೇಜ್ರಿವಾಲ್ ಅವರನ್ನು ವಿಚಾರಣೆ ನ್ಯಾಯಾಲಯದಲ್ಲಿ ಬಿಗಿ ಭದ್ರತೆ ನಡುವೆ ಹಾಜರುಪಡಿಸಲಾಯಿತು. ಇಡಿಯ 12 ಸದಸ್ಯರ ತಂಡ ಗುರುವಾರ ರಾತ್ರಿ ದೆಹಲಿ ಸಿಎಂ ಅವರನ್ನು ಬಂಧಿಸಿತ್ತು. ಬಂಧನಕ್ಕೆ ಮುನ್ನ ದೆಹಲಿ ಹೈಕೋರ್ಟ್ ಬಂಧನ ತಪ್ಪಿಸಿ ರಕ್ಷಣೆ ನೀಡುವಂತೆ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು.
ಪ್ರಸಕ್ತ ಲೋಕಸಭೆ ಚುನಾವಣೆಯ ನಡುವೆ ಅರವಿಂದ್ ಕೇಜ್ರಿವಾಲ್ ಬಂಧನ ರಾಷ್ಟ್ರೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
‘ಅವನಿಗೆ ಕಾಗೆ ಬಣ್ಣ, ಸುಂದರಾಂಗನಲ್ಲ’: ಸಹಕಲಾವಿದನ ಟೀಕಿಸಿದ ಮೋಹಿನಿಯಾಟ್ಟಂ ನೃತ್ಯಗಾರ್ತಿ ಸತ್ಯಭಾಮಾಗೆ ಎದುರಾಯ್ತು ಭಾರಿ ಆಕ್ರೋಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
