ನವದೆಹಲಿ:ಬುಧವಾರ ನವದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್, ತಮ್ಮ ಮೇಲೆ “ನಂಬಿಕೆ” ಇರಿಸಿದ್ದಕ್ಕಾಗಿ ಜನರಿಗೆ ಧನ್ಯವಾದ ಹೇಳಿದರು. ಅಷ್ಟೇ ಸಾಲಲ್ಲ ಎಂದು ಪ್ರಧಾನಿ ಮೋದಿಯ ಆಶೀರ್ವಾದವನ್ನೂ ಕೋರಿದ್ದಾರೆ!
ದೆಹಲಿಯ 250 ವಾರ್ಡ್‌ಗಳಲ್ಲಿ ಆಪ್​ 134 ಸ್ಥಾನಗಳನ್ನ ಗೆದ್ದಿದ್ದು ಬಿಜೆಪಿ 104 ವಾರ್ಡ್‌ಗಳನ್ನು ಗೆದ್ದಿದೆ. ದೆಹಲಿ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ನಂತರ ಕೇಜ್ರೀವಾಲ್, ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭ ‘ಈ ಗೆಲುವಿಗಾಗಿ ನಾನು ದೆಹಲಿಯ ಜನರನ್ನು ಅಭಿನಂದಿಸುತ್ತೇನೆ. ಬದಲಾವಣೆಯನ್ನು ತಂದಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಚುನಾವಣೆ ಹತ್ತಿರ ಬಂದಾಗಿನಿಂದ ಇಂದಿನವರೆಗೂ ರಾಜಕೀಯ ಮಾತ್ರ ಇತ್ತು. ಇನ್ನು ನಾವೆಲ್ಲರೂ ದೆಹಲಿಯ ಒಳಿತಿಗಾಗಿ ಶ್ರಮಿಸಬೇಕು ಎಂದು ನಾನು ಎಲ್ಲಾ ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ಮನವಿ ಮಾಡುತ್ತೇನೆ’ ಎಂದು ಕೇಜಿವಾಲ್ ಹೇಳಿದರು.
‘ನನಗೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಹಕಾರ ಬೇಕು. ಅವರ ಸಹಕಾರವನ್ನು ನಾನು ನಿರೀಕ್ಷಿಸುತ್ತೇನೆ. ನಾನು ದೆಹಲಿಯನ್ನು ಉತ್ತಮಗೊಳಿಸಲು ಕೇಂದ್ರಕ್ಕೆ ಮನವಿ ಮಾಡುತ್ತಾ ಪ್ರಧಾನಿಯವರ ಆಶೀರ್ವಾದ ಕೇಳುತ್ತೇನೆ. ನಾವು ದೆಹಲಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು. ಇದು ಇಡೀ ದೇಶಕ್ಕೆ ಒಂದು ಸಂದೇಶ” ಎಂದು ಕೇಜ್ರೀವಾಲ್​ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
