ನವದೆಹಲಿ :ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಆರೋಪಿಸಿದ್ದಾರೆ. ಅರವಿಂದ್​ ಕೇಜ್ರಿವಾಲ್​ ಅವರು ಕರೊನಾ ಸಂಬಂಧವಾಗಿ ಮಾತನಾಡುತ್ತಾ ಆಗಾಗ್ಗೆ ತೆರೆಯ ಮೇಲೆ ಕಾಣಿಸಿಕೊಳ್ಳುವಾಗ ಅವರ ಹಿಂದೆ ಕಂಡುಬರುವ ಧ್ವಜ ಅಲಂಕಾರಿಕವಾಗಿ ಬಳಸಲ್ಪಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ವಿಡಿಯೋ ಕಾನ್ಫರೆನ್ಸ್​ಗಳಲ್ಲಿ ಕೇಜ್ರಿವಾಲ್ ಹಿಂದೆ ಕಾಣಿಸುವ ಧ್ವಜದ ಬಿಳಿ ಮತ್ತು ಹಸಿರು ಬಣ್ಣದ ಪಟ್ಟಿಗಳು ಸರಿಯಾದ ಗಾತ್ರದಲ್ಲಿ ಕಾಣುವುದಿಲ್ಲ. ಹೀಗಾಗಿ ಭಾರತದ ಫ್ಲ್ಯಾಗ್​ ಕೋಡ್​ಗೆ ವಿರುದ್ಧವಾಗಿವೆ ಎಂದಿರುವ ಪಟೇಲ್​ ಅವರು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತು ದೆಹಲಿ ಲೆಫ್ಟಿನೆಂಟ್​ ಗವರ್ನರ್​ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಕೋವಿಡ್​ ಹೆಚ್ಚಿರುವ ಜಿಲ್ಲೆಗಳಿಗೆ ಸಿಎಂ ಭೇಟಿ; ಇಂದು ತುಮಕೂರಿಗೆ ಬಿಎಸ್​​ವೈ
ಪತ್ರದಲ್ಲಿ, “ಸಿಎಂ ಅರವಿಂದ್ ಕೇಜ್ರಿವಾಲ್​ ಅವರು ಟಿವಿಗಾಗಿ ಚಿತ್ರೀಕರಿಸಲಾದ ಹೇಳಿಕೆಯನ್ನು ಕೊಡುವಾಗಲೆಲ್ಲಾ ನನ್ನ ಗಮನ ಅವರ ಕುರ್ಚಿಯ ಹಿಂದಿನ ರಾಷ್ಟ್ರಧ್ವಜದ ಮೇಲೆ ಹೋಗುತ್ತದೆ… ಅದು ಸಂವಿಧಾನದ ಉಲ್ಲಂಘನೆಯಾಗಿದೆ. ರಾಷ್ಟ್ರ ಧ್ವಜವನ್ನು ಅಲಂಕಾರದ ಉದ್ದೇಶಕ್ಕಾಗಿ ಬಳಸಲಾಗಿದೆ” ಎಂದಿದ್ದಾರೆ.
“ಹಸಿರು ಪಟ್ಟಿಯು ಮಧ್ಯದ ಬಿಳಿ ಪಟ್ಟಿಯ ಮೇಲೆ ಬಂದ ಹಾಗೆ ಕಾಣುತ್ತದೆ. ಇದು ಧ್ವಜವನ್ನು ಪ್ರದರ್ಶಿಸುವ ಬಗ್ಗೆ ಇರುವ ಗೃಹ ಸಚಿವಾಲಯದ ನಿಯಮಗಳ ಪ್ರಕಾರವಿಲ್ಲ. ಇದನ್ನು ಪ್ರಜ್ಞಾಪೂರ್ವಕವಾಗಿ ಅಥವಾ ಉಪಪ್ರಜ್ಞೆಯಿಂದ ನಿರ್ಲಕ್ಷಿಸಿರುವ ಗೌರವಾನ್ವಿತ ಮುಖ್ಯಮಂತ್ರಿಗಳ ಗಮನಕ್ಕೆ ತರಲು ನಾನು ಬಯಸುತ್ತೇನೆ” ಎಂದಿದ್ದಾರೆ.(ಏಜೆನ್ಸೀಸ್)
ಟ್ವಿಟರ್​ ವಿರುದ್ಧ ದೆಹಲಿ ಹೈಕೋರ್ಟ್​ಗೆ ಅರ್ಜಿ

VIDEO | ಕಂಭ ಏರುವ ಮಗುವಿನ ವಿಡಿಯೋ ನೋಡಿದ್ದೀರಾ ?!

ಮದ್ಯದಂಗಡಿಯ ಶಟರ್​ ಕೊರೆದು ಒಳನುಗ್ಗಿ ಕಳ್ಳತನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
