ನವದೆಹಲಿ:ದೆಹಲಿಯ ಎಷ್ಟೋ ವಸ್ತುಗಳು ಜನಪ್ರಿಯವಾಗಿದ್ದು, ದೇಶದಾದ್ಯಂತದ ಜನರು ಅಲ್ಲಿ ಶಾಪಿಂಗ್​ ಮಾಡುವ ಆಸೆ ಹೊಂದಿರುತ್ತಾರೆ. ಇಂತಹ ಆಸೆಗೆ ಇನ್ನು ಕೆಲವು ತಿಂಗಳಲ್ಲಿ ರೆಕ್ಕೆಗಳು ಸಿಗಲಿವೆ. ಏಕೆಂದರೆ, ದೆಹಲಿಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಆನ್​ಲೈನ್​ ಮೂಲಕ ಪಡೆಯುವ ವಿಶಿಷ್ಟ ಪೋರ್ಟಲ್​ಅನ್ನು ದೆಹಲಿ ಸರ್ಕಾರ ನಿರ್ಮಿಸಲಿದೆ.
ಈ ಬಗ್ಗೆ ಟ್ವೀಟ್​ ಮಾಡಿ ತಿಳಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಯ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ವೃತ್ತಿಶೀಲರು ತಮ್ಮ ಉತ್ಪನ್ನಗಳನ್ನು ಜಗತ್ತಿನ ಎಲ್ಲೆಡೆಗೂ ಮಾರಾಟ ಮಾಡಲು ಸಾಧ್ಯವಾಗುವಂತಹ ‘ದೆಹಲಿ ಬಜಾರ್​​’ ವೆಬ್​ ಪೋರ್ಟಲ್​ಅನ್ನು ಶೀಘ್ರವೇ ಲಾಂಚ್​ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ಟೈಪಿಂಗ್‌ ಬಲ್ಲಿರಾ? ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇವೆ 150 ಟೈಪಿಸ್ಟ್‌ ಹುದ್ದೆಗಳು: ಅರ್ಜಿ ಆಹ್ವಾನ
ದೆಹಲಿಯ ಖ್ಯಾತ ಹೌಜ್​ ಖಾಸ್​, ಖಾನ್​ ಮಾರ್ಕೆಟ್​ ಮುಂತಾದೆಡೆಗಳಿಂದ ಇಡೀ ಜಗತ್ತಿನಾದ್ಯಂತದ ಕೊಳ್ಳುಗರು ನೇರವಾಗಿ ಸಾಮಾನುಗಳನ್ನು ಖರೀದಿಸಬಹುದು ಎಂದು ಘೋಷಿಸಿರುವ ಕೇಜ್ರಿವಾಲ್​, ದೀಪಾವಳಿ ಸಂದರ್ಭದಲ್ಲಿ ದೆಹಲಿಯ ಬಿಸಿನೆಸ್​ಮೆನ್​ಗಳಿಗೆ ಇದು ತಮ್ಮ ದೊಡ್ಡ ಸುದ್ದಿ ಎಂದಿದ್ದಾರೆ. ಅಲ್ಲಿನ ಇಡೀ ಮಾರುಕಟ್ಟೆ ಈ ಪೋರ್ಟಲ್​ನಲ್ಲಿ ಲಭ್ಯವಾಗಲಿದ್ದು, ದೆಹಲಿಯ ಜಿಡಿಪಿಯನ್ನು, ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ದೊಡ್ಡ ಆಟಗಾರರು ಇಷ್ಟು ಕೆಟ್ಟ ಕ್ರಿಕೆಟ್​ ಆಡಿದರೆ..? ಹೀಗೆ ಮಾಡಿ ಎಂದು ಬಿಸಿಸಿಐಗೆ ಸಲಹೆ ಕೊಟ್ಟ ಕಪಿಲ್​ದೇವ್​

ಅಕ್ರಮ ಸಂಬಂಧ ಬಹಿರಂಗ: ಒಂದು ಆತ್ಮಹತ್ಯೆ, ಒಂದು ಕೊಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
