ನವದೆಹಲಿ:ಭಾರತಕ್ಕೆ ಮೊದಲ ಬಾರಿಗೆ ಇದೇ ತಿಂಗಳ ಕೊನೆಯಲ್ಲಿ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಭಾರಿ ತಯಾರಿ ನಡೆದಿದೆ. ಟೆಕ್ಸಾಸ್​ನ ಹ್ಯೂಸ್ಟನ್​ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ 5 ತಿಂಗಳ ಬಳಿಕ ಮತ್ತೊಮ್ಮೆ ಉಭಯ ರಾಷ್ಟ್ರಗಳ ನಾಯಕರು ಒಟ್ಟಿಗೆ ಕಾಣಿಸಿಕೊಳ್ಳಲು ಮಹಾ ವೇದಿಕೆಯೊಂದು ಸಜ್ಜಾಗುತ್ತಿದೆ.
ಟ್ರಂಪ್​ ಅವರು ಯುನೈಟೆಡ್​ ಸ್ಟೇಟ್ಸ್​ನ ಪ್ರಥಮ ಮಹಿಳೆ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್​ ಜತೆ ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಫೆ. 24ರಂದು ಭಾರತಕ್ಕೆ ಬಂದಿಳಿಯಲಿದ್ದಾರೆ. ಬಳಿಕ ನವದೆಹಲಿ ಮತ್ತು ಪ್ರಧಾನಿ ಮೋದಿ ತವರು ಗುಜರಾತಿನ ಅಹಮದಾಬಾದ್​ ಪ್ರವಾಸ ಮಾಡಲಿದ್ದಾರೆ.
ಇದನ್ನೂ ಓದಿ:ನಿಮಗೆಲ್ಲ ಗೊತ್ತಾ ವಿಶ್ವದಲ್ಲೇ ಬಹುದೊಡ್ಡ ಕ್ರೀಡಾಂಗಣವನ್ನು ಮೋದಿ ನಿರ್ಮಾಣ ಮಾಡುತ್ತಿದ್ದಾರೆ: ಭಾರತ ಪ್ರವಾಸ ಕುರಿತು ಟ್ರಂಪ್​ ಮಾತು
ಹೇಗಿದ್ದೀರಿ ಟ್ರಂಪ್​?ಅಮೆರಿಕದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ರೀತಿಯಲ್ಲೇ ಆಯೋಜನೆಗೊಂಡಿರುವ ಜಂಟಿ ಸಾರ್ವಜನಿಕ ಸಭೆಯಲ್ಲಿ ಉಭಯ ನಾಯಕರು ಭಾಗಿಯಾಗಲಿದ್ದಾರೆ. ಈ ಮೆಗಾ ಸಮಾರಂಭಕ್ಕೆ “ಕೆಮ್ ಚೋ ಟ್ರಂಪ್​” ಎಂದು ಹೆಸರಿಸಲಾಗಿದೆ. ಅಂದಹಾಗೆ ಕೆಮ್​ ಚೋ ಎಂಬುದು ಗುಜರಾತಿ ಭಾಷೆಯಾಗಿದ್ದು, “ಹೇಗಿದ್ದೀರಿ ಟ್ರಂಪ್​” ಎನ್ನುವ ಅರ್ಥ ಕೊಡುತ್ತದೆ. ಇದು ಹೌಡಿ ಮೋದಿ ಪದದ ಸಮನಾರ್ಥವಾಗಿದೆ.
ಸಮಾರಂಭಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಸಜ್ಜುಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದ್ಧೂರಿ ಸಮಾರಂಭವು ಅಹಮದಾಬಾದ್​ನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಸರ್ದಾರ್​ ಪಟೇಲ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ವಿಶ್ವದಲ್ಲೇ ಬಹುದೊಡ್ಡ ಸ್ಟೇಡಿಯಂ ಅನ್ನೋ ಹೆಸರಿಗೆ ಪಾತ್ರವಾಗಿದ್ದು, ಸುಮಾರು 1.10 ಲಕ್ಷ ಆಸನ ವ್ಯವಸ್ಥೆಯನ್ನು ಹೊಂದಿದೆ. ಇದು ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಸ್ಟೇಡಿಯಂಗಿಂತಲೂ ಬಹುದೊಡ್ಡ ಕ್ರಿಕೆಟ್​ ಸ್ಟೇಡಿಯಂ ಆಗಿದೆ. ಈ ಸ್ಟೇಡಿಯಂ ಅನ್ನು ಟ್ರಂಪ್​ ಉದ್ಘಾಟನೆ ಮಾಡಲಿದ್ದಾರೆ.
ಹೌಡಿ ಮೋದಿ ಕಾರ್ಯಕ್ರಮದ ಮೆಲಕುಈ ಹಿಂದೆ ಅಮೆರಿಕದಲ್ಲಿ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಹ್ಯೂಸ್ಟನ್​ನ ಎನ್​ಆರ್​ಜಿ ಸ್ಟೇಡಿಯಂನಲ್ಲಿ ಕಳೆದ ಸೆಪ್ಟೆಂಬರ್​ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅಮೆರಿಕ ಮಣ್ಣಿನಲ್ಲಿ ಆಯ್ಕೆಯಾದ ವಿದೇಶಿ ನಾಯಕರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇಂಡಿಯನ್​-ಅಮೆರಿಕನ್ನರು ಭಾರಿ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ನೆರೆದಿದ್ದರು.
ಇದನ್ನೂ ಓದಿ:ಭಾರತ ಸ್ಮರಣೀಯ ಸ್ವಾಗತವನ್ನು ನೀಡಲಿದೆ: ಡೊನಾಲ್ಡ್​ ಟ್ರಂಪ್​ ಪ್ರವಾಸ ಕುರಿತು ಪ್ರಧಾನಿ ಮೋದಿ ಟ್ವೀಟ್​
ಬೃಹತ್​ ರೋಡ್​ ಶೋಹೇಗಿದ್ದೀರಿ ಟ್ರಂಪ್​ ಕಾರ್ಯಕ್ರಮಕ್ಕೂ ಮುನ್ನ ಟ್ರಂಪ್​, ಪ್ರಧಾನಿ ಮೋದಿಯೊಂದಿಗೆ ರೋಡ್​ಶೋನಲ್ಲಿ ಭಾಗವಹಿಸಲಿದ್ದಾರೆ. ಉಭಯ ನಾಯಕರು ಸಬರಮತಿ ಆಶ್ರಮಕ್ಕೆ ತೆರಳಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಲಿದ್ದಾರೆ. ಅಹಮದಾಬಾದ್​ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೂ 10 ಕಿ.ಮೀ ಉದ್ದದ ರೋಡ್​ ಶೋ ನಡೆಯಲಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
