ಇಂದೋರ್:ಈ ಕತೆ ಕೇಳಿದರೆ ಮನಸ್ಸು ಪಿಚ್ಚೆನಿಸುತ್ತದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಮದುವೆಯಾಗಬೇಕಿದ್ದ ಹುಡುಗಿಗೆ ಆಕೆಯ ತಂದೆಯೇ ವಿಲನ್ ಆಗಿ ಬಂದ.ಆಕೆ 19ರ ಹರೆಯದ ಹುಡುಗಿ, ತಾನಿಷ್ಟಪಟ್ಟ ಹುಡುಗನೊಂದಿಗೆ ಸಪ್ತಪದಿ ತುಳಿಯುವ ಕನಸು ಕಂಡು ಮದುವೆಯಾಗಲು ಕೋರ್ಟಿಗೆ ಹೋಗಿದ್ದಳು. ಆದರೆ ಆಕೆಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ಆಕೆಯ ಪೋಷಕರು ಹೇಳಿದ ನಂತರ ಆಕೆಯನ್ನು ಮಧ್ಯಪ್ರದೇಶದ ಖಾಂಡ್ವಾ ಜಿಲ್ಲಾ ನ್ಯಾಯಾಲಯದಿಂದ ಮನೆಗೆ ಕಳುಹಿಸಲಾಗಿದೆ.ಬಾಲಕಿಯ ಕರೋನವೈರಸ್ ವರದಿ ಇನ್ನೂ ಬಂದಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಪ್ರೋಟೋಕಾಲ್ ಪ್ರಕಾರ ಬಾಲಕಿಯನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್​​​ಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:ಶ್ರಮಿಕ್ ವಿಶೇಷ ರೈಲು ಸಂಚಾರಕ್ಕೆ ಅತಿಹೆಚ್ಚು ಶುಲ್ಕ ಪಾವತಿಸಿದ್ದು ಗುಜರಾತ್
ಸೋಮವಾರ, ಖಾಂಡ್ವಾದ ಭಾಲೈ ಗ್ರಾಮದ ಹುಡುಗ, ಹುಡುಗಿ ತಮ್ಮ ಸ್ನೇಹಿತರೊಂದಿಗೆ ಜಿಲ್ಲಾ ನ್ಯಾಯಾಲಯಕ್ಕೆ ಮದುವೆಗೆ ಅಫಿಡವಿಟ್ ಸಲ್ಲಿಸಲು ಹೋದರು. ವಕೀಲ ವೀರೇಂದ್ರ ವರ್ಮಾ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾಗ, ಬಾಲಕಿಯ ತಂದೆ ಆತನನ್ನು ಸಂಪರ್ಕಿಸಿದರು.ಹುಡುಗಿಗೆ ಕರೊನಾವೈರಸ್ ಸೋಂಕು ದೃಢಪಟ್ಟಿರುವುದಾಗಿ ಅವರು ವೀರೇಂದ್ರ ವರ್ಮಾಗೆ ಹೇಳಿದ್ದಾರೆ. ಆಗ ಅವರು ಆ ಹುಡುಗಿಗೆ ಸದ್ಯಕ್ಕೆ ವಿವಾಹವಾಗುವ ವಿಚಾರವನ್ನು ಬಿಡಬೇಕೆಂದು ಹೇಳಿದ್ದಾರೆ. “ಇಬ್ಬರೂ ವಯಸ್ಕರು. ಅವರಲ್ಲಿ ಯಾರಿಗೂ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಮತ್ತು ಅವರು ನನ್ನ ಬಳಿಗೆ ಬಂದಾಗ ಚೆನ್ನಾಗಿ ಕಾಣುತ್ತಿದ್ದರು. ಆದರೆ ಅವರ ಕುಟುಂಬವು ಅವರ ಮದುವೆಯನ್ನು ಬೆಂಬಲಿಸುವುದಿಲ್ಲ ಎಂದು ತೋರುತ್ತದೆ, ಆದ್ದರಿಂದ ಅವರು ಸ್ವಲ್ಪ ಸಮಯದವರೆಗೆ ಮದುವೆಯನ್ನು ಸ್ಥಗಿತಗೊಳಿಸುವ ಯೋಚನೆಯಿಂದ ಕೋವಿಡ್ 19 ಸೋಂಕನ್ನು ಒಂದು ನೆಪವಾಗಿಟ್ಟುಕೊಂಡು ಬಂದಂತಿದೆ ಎಂದು ವರ್ಮಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:ಆತ್ಮನಿರ್ಭರ ಭಾರತ ಪ್ಯಾಕೇಜ್​ ವ್ಯಾಪ್ತಿಯಲ್ಲಿ ಇದುವರೆಗೆ 5 ಪ್ರಸ್ತಾವನೆಗಳಿಗೆ ಅಂಕಿತ
ಬಾಲಕಿಯ ತಂದೆ ಮಾತಿನ ಬಗ್ಗೆ ಅನುಮಾನವಿದ್ದರೂ, ಆಕೆಯನ್ನು ಮನೆಗೆ ಕಳುಹಿಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ವರ್ಮಾ ಹೇಳಿದ್ದಾರೆ.ಬಾಲಕಿಯ ತಂದೆ ಆಕೆಗೆ ಸೋಂಕು ತಗುಲಿದೆಯೆಂದು ವಕೀಲರಿಗೆ ತಿಳಿಸಿದ ನಂತರ, ನ್ಯಾಯಾಲಯಕ್ಕೆ ಹಾಜರಿದ್ದ ವಕೀಲರು ಮತ್ತು ಸಿಬ್ಬಂದಿ ತಮ್ಮ ಕೆಲಸವನ್ನು ಮೊಟಕುಗೊಳಿಸಿ ಮನೆಗೆ ತೆರಳಿದರು.
ಅಪಘಾತದಲ್ಲಿ ಜಖಂಗೊಂಡಿದ್ದ ವಾಹನವನ್ನು ಹೊಕ್ಕರು, ಇಹಲೋಕವನ್ನೇ ತ್ಯಜಿಸಿದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
