ತಿರುವನಂತಪುರ:ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ತರಾತುರಿಯಲ್ಲಿ ಮಹತ್ವದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಪಿಣರಾಯಿ ವಿಜಯನ್ ಸರ್ಕಾರ ಇಂದು 100 ದಿನಗಳಲ್ಲಿ 10,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಪೂರೈಸುವುದಾಗಿ ಘೋಷಿಸಿದೆ.
ಜನವರಿ ಸೇರಿ ಮುಂದಿನ ನಾಲ್ಕು ತಿಂಗಳ ಅವಧಿಗೆ ಉಚಿತ ರೇಷನ್ ಕಿಟ್​ಗಳ ಹಂಚಿಕೆ ಮುಂದುವರಿಸುವುದಾಗಿಯೂ ಘೋಷಿಸಿರುವ ಪಿಣರಾಯಿ ಸರ್ಕಾರ, ವೆಲ್ಫೇರ್​ ಪೆನ್ಶನ್​ ಅನ್ನು ಉನ್ನತೀಕರಿಸಿದೆ. ಈ ಘೋಷಣೆಯನ್ನು ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ಎಡರಂಗ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದ 600 ಆಶ್ವಾಸನೆಗಳ ಪೈಕಿ 570 ಅನ್ನು ಪೂರೈಸಿದೆ. 2016ರಿಂದೀಚೆಗೆ ಇದುವರೆಗೆ ಪ್ರಣಾಳಿಕೆಯ ಭರವಸೆಯಲ್ಲದೇ ಇತರೆ ನೂರಾರು ಕಾಮಗಾರಿ, ಯೋಜನೆಗಳನ್ನೂ ಸರ್ಕಾರ ಪೂರ್ಣಗೊಳಿಸಿದೆ ಎಂದು ಹೇಳಿದರು.
ಇದನ್ನೂ ಓದಿ:ಮಮತಾ ಬ್ಯಾನರ್ಜಿ ಇನ್ವಿಟೇಷನ್​ ಡ್ರಾಮಾ! ಕರೆದರೂ ಬಂದಿಲ್ಲ ಎಂದು ಸಾಕ್ಷಿ​ ನೀಡಿದ ಬಿಜೆಪಿ!
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ್ದ 100 ದಿನಗಳಲ್ಲಿ ಪೂರೈಸುವ ಯೋಜನೆಗಳ ಬಹುದೊಡ್ಡ ಯಶ ಕಂಡಿದೆ. ಅದರಿಂದ ಪ್ರೇರಿತರಾಗಿ ಈಗ ಎರಡನೇ ಹಂತದ 100 ದಿನಗಳ ಯೋಜನೆಯನ್ನು ಘೋಷಿಸಲಾಗಿದೆ. 10,000 ಕೋಟಿ ರೂಪಾಯಿ ಪ್ರಾಜೆಕ್ಟ್​ ಪೈಕಿ 5,700 ಕೋಟಿ ರೂಪಾಯಿ ವೆಚ್ಚದ 5,526 ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಅಥವಾ ಉದ್ಘಾಟಿಸಲಾಗುವುದು. ಇದಲ್ಲದೇ 4,300 ಕೋಟಿ ರೂಪಾಯಿ ಮೌಲ್ಯದ 646 ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ವಿಜಯನ್ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
2,950 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರನ್ನು ಓಪನ್ ಮಾರ್ಕೆಟ್​ನಲ್ಲಿ ಖರೀದಿಸಿತು ವೇದಾಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 2 =
Remember me
