ತಿರುವನಂತಪುರ:ಕೇಂದ್ರ ಸರ್ಕಾರ ಅಂಗೀಕರಿಸಿರುವ ಪರಿಷ್ಕೃತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕೆ ಆಗ್ರಹಿಸಿದ ನಿರ್ಣಯವನ್ನು ಕೇರಳ ವಿಧಾನಸಭೆ ಇಂದು ಒಮ್ಮತದಿಂದ ಅಂಗೀಕರಿಸಿದೆ. ಈ ನಿರ್ಣಯ ಅಂಗೀಕರಿಸುವುದರ ಸಂಬಂಧವೇ ಕೇರಳ ಸರ್ಕಾರ ಇಂದು ವಿಶೇಷ ವಿಧಾನಸಭೆ ಅಧಿವೇಶನ ನಡೆಸಿತ್ತು.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಒಗ್ಗಟ್ಟು ಪ್ರದರ್ಶಿಸಿ ಕೇರಳದ ಎಡರಂಗ ಮತ್ತು ಐಕ್ಯರಂಗ ಸದಸ್ಯರು ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸಿದರು. ವಿಧಾನಸಭೆಯಲ್ಲಿರುವ ಏಕೈಕ ಬಿಜೆಪಿ ಸದಸ್ಯ ರಾಜಗೋಪಾಲ್ ಅವರು ಈ ನಿರ್ಣಯದಲ್ಲಿನ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಆದರೆ, ನಿರ್ಣಯ ಅಂಗೀಕರಿಸುವುದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ.
ಇದನ್ನೂ ಓದಿ:ಕೇರಳದಲ್ಲೀಗ ಎಲ್​ಡಿಎಫ್​ ವರ್ಸಸ್ ಬಿಜೆಪಿಯಂತೆ!
ಸದನದಲ್ಲಿ ಸಾಮಾನ್ಯ ಒಮ್ಮತ ಏರ್ಪಟ್ಟಿತ್ತು. ಹೀಗಾಗಿ ನಾನು ಅದನ್ನು ವಿರೋಧಿಸುವುದಕ್ಕೆ ಹೋಗಲಿಲ್ಲ. ಇದು ಪ್ರಜಾಪ್ರಭುತ್ವ ಮನೋಭಾವವಾಗಿದೆ.ಒ. ರಾಜಗೋಪಾಲ್, ಬಿಜೆಪಿ ಶಾಸಕ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿರ್ಣಯ ಮಂಡಿಸಿ, ಕಾರ್ಪೊರೇಟ್ ವಲಯಕ್ಕೆ ನೆರವು ನೀಡಲು ಕೇಂದ್ರ ಸರ್ಕಾರ ಕೃಷಿ ಕಾನೂನನ್ನು ಪರಿಷ್ಕರಿಸಿದೆ. ಸಂಸತ್ತಿನ ಸ್ಥಾಯೀ ಸಮಿತಿ ಪರಿಶೀಲನೆಗೆ ರವಾನಿಸದೆಯೇ ಕೃಷಿ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಒಂದೊಮ್ಮೆ ರೈತರ ಪ್ರತಿಭಟನೆ ಮುಂದುವರಿದರೆ ಅದು ಗ್ರಾಹಕ ರಾಜ್ಯವಾಗಿರುವ ಕೇರಳವನ್ನು ತೀವ್ರವಾಗಿ ಬಾಧಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೃಷಿ ಕಾನೂನು ವಿಚಾರ: ಡಿ.31ಕ್ಕೆ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲರ ಅನುಮತಿ ಕೋರಿದ ಕೇರಳ ಸರ್ಕಾರ
ಮುಖ್ಯಮಂತ್ರಿ ವಿಜಯನ್ ನಿರ್ಣಯ ಮಂಡಿಸಿದ ಬಳಿಕ ಎರಡು ಗಂಟೆ ಕಾಲ ಚರ್ಚೆ ನಡೆಯಿತು. ನಂತರ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ನಿರ್ಣಯವನ್ನು ಧ್ವನಿಮತಕ್ಕೆ ಹಾಕಿದರು. ಸದನ ಒಮ್ಮತದಿಂದ ಅದನ್ನು ಅಂಗೀಕರಿಸಿತು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಗ್ರಾ.ಪಂ​. ಚುನಾವಣೇಲೂ ನೋಟಾ ಜಾರಿಗೆ ತನ್ನಿ- ಮತಪತ್ರದ ಬದಲೊಂದು ಮನವಿಪತ್ರ!
ParagraphShortcodesFormats
ತಿರುವನಂತಪುರ:ಕೇಂದ್ರ ಸರ್ಕಾರ ಅಂಗೀಕರಿಸಿರುವ ಪರಿಷ್ಕೃತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕೆ ಆಗ್ರಹಿಸಿದ ನಿರ್ಣಯವನ್ನು ಕೇರಳ ವಿಧಾನಸಭೆ ಇಂದು ಒಮ್ಮತದಿಂದ ಅಂಗೀಕರಿಸಿದೆ. ಈ ನಿರ್ಣಯ ಅಂಗೀಕರಿಸುವುದರ ಸಂಬಂಧವೇ ಕೇರಳ ಸರ್ಕಾರ ಇಂದು ವಿಶೇಷ ವಿಧಾನಸಭೆ ಅಧಿವೇಶನ ನಡೆಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − thirteen =
Remember me
