ತಿರುವನಂತಪುರಂ:ಕೇರಳದ ವಯನಾಡು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದಾಗಿ ಮನೆ, ಆಸ್ತಿ ಕಳೆದುಕೊಂಡು ಸಂತ್ರಸ್ತರಾದವರ ಸಾಲಮನ್ನಾ ಮಾಡುವುದಾಗಿ ಕೇರಳ ಬ್ಯಾಂಕ್ ಸೋಮವಾರ(ಆಗಸ್ಟ್​​ 12) ಘೋಷಿಸಿದೆ.
ಇದನ್ನು ಓದಿ:ಹಣ ಕೊಟ್ಟು ಪದಕ ಗಳಿಸಲು ಸಾಧ್ಯವಿಲ್ಲ; ಶೂಟರ್​ ಅಭಿನವ್​ ಬಿಂದ್ರಾ ಹೀಗೆಳಿದ್ದೇಕೆ?
ಭೀಕರ ಭೂಕುಸಿತದಲ್ಲಿ ಗುಡ್ಡಗಾಡು ಜಿಲ್ಲೆ ವಯನಾಡಿನ ಚೂರಲ್​ಮಲದಲ್ಲಿ ಹಲವರು ಮೃತಪಟ್ಟಿದ್ದಾರೆ. ರಾಜ್ಯದ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಏಕೀಕರಣವಾದ ಕೇರಳ ಬ್ಯಾಂಕ್​ನ ಚೂರಲ್​ಮಲ ಶಾಖೆಯಲ್ಲಿ ಸಾಲ ಪಡೆದು ಈ ದುರಂತದಲ್ಲಿ ಮೃತಪಟ್ಟವರ ಸಾಲವನ್ನು ಮನ್ನಾ ಮಾಡಲು ಹಾಗೂ ಮನೆ, ಆಸ್ತಿ ಕಳೆದುಕೊಂಡಿರುವವರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ತಿಳಿಸಿದೆ.
ಕೇರಳ ಬ್ಯಾಂಕ್ ಈಗಾಗಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿಗಳನ್ನು ನೀಡಿದೆ. ಅಲ್ಲದೆ ಕೇರಳ ಬ್ಯಾಂಕ್​​​ನ ನೌಕರರು ಸ್ವಯಂಪ್ರೇರಿತರಾಗಿ ತಮ್ಮ 5 ದಿನಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಯನಾಡಿನಲ್ಲಿ ಜುಲೈ 30ರಂದು ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ ಈವರೆಗೆ 427 ಶವಗಳು ಪತ್ತೆಯಾಗಿವೆ. ಇನ್ನು ನಾಪತ್ತೆಯಾಗಿರುವ 130 ಜನರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಭೂಕುಸಿತದಿಂದಾಗಿ ಮನೆ-ಮಠ ಕಳೆದುಕೊಂಡು ಬೀದಿಪಾಲಾಗಿರುವ 4 ಸಾವಿರಕ್ಕೂ ಹೆಚ್ಚು ಸಂತ್ರಸ್ತರಿಗೆ ಜಿಲ್ಲೆಯ ಹಲವು ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.(ಏಜೆನ್ಸೀಸ್​)
ನಿವೃತ್ತಿ ಬಳಿಕ ನೌಕರರು ಜನ್ಮ ದಿನಾಂಕ ಬದಲಾಯಿಸುವಂತಿಲ್ಲ; ಕರ್ನಾಟಕ ಹೈಕೋರ್ಟ್ ಆದೇಶ​​​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 15 =
Remember me
