ತಿರುವನಂತಪುರ:ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಮಗುವೊಂದು ಸಾವನ್ನಪ್ಪಿರುವ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕನೊಬ್ಬ ಬುಧವಾರ ಮೃತಪಟ್ಟಿದ್ದಾನೆ.
ಇದನ್ನೂ ಓದಿ:ಬಿಜೆಪಿ ಹಿರಿಯ ನಾಯಕ ಎಲ್​ಕೆ ಅಡ್ವಾಣಿ ದೆಹಲಿಯ ಆಸ್ಪತ್ರೆಯಿಂದ ಬಿಡುಗಡೆ
ಕಲುಶಿತ ನೀರಿನಲ್ಲಿ ಪತ್ತೆಯಾದ ಅಮೀಬಾದಿಂದ ಉಂಟಾದ ಸೋಂಕಿನಿಂದ ಮಗು ಸಾವನ್ನಪ್ಪಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಅಮೀಬಾವನ್ನು ಮೆದುಳು ತಿನ್ನುವ ಅಮೀಬಾ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಕೋಝಿಕ್ಕೋಡ್‌ ಜಿಲ್ಲೆಯ ರಾಮನಾಟ್ಟುಕರ ನಿವಾಸಿ ಮೃದುಲ್ ಇ.ಪಿ. ಮೃತ ಬಾಲಕ ಕೊಳವೊಂದರಲ್ಲಿ ಈಜಾಡಿದ್ದರಿಂದ ಮೃದುಲ್ ಸೋಂಕು ತಗುಲಿತ್ತು ಎಂದು ಶಂಕಿಸಲಾಗಿದೆ.
ಈ ಅಪರೂಪದ ಸೋಂಕಿನಿಂದಾಗಿ ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ವರದಿಯಾದ ಮೂರನೇ ಸಾವು ಇದಾಗಿದೆ. ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಅನ್ನು ಮಿದುಳು ತಿನ್ನುವ ಅಮೀಬಾ ಎಂದೂ ಕರೆಯಲಾಗುತ್ತದೆ. ಕಲುಷಿತ ನೀರಿನ ಮೂಲಕ ಈ ಸೋಂಕು ಹರಡುತ್ತದೆ. ಕಳೆದ ತಿಂಗಳು ಕಣ್ಣೂರಿನಲ್ಲಿ 13 ವರ್ಷದ ಬಾಲಕಿ ಮೃತಪಟ್ಟಿದ್ದಳು. ಮಲ್ಲಪ್ಪುರಂನಲ್ಲಿ 5 ವರ್ಷದ ಮಗು ಮೇನಲ್ಲಿ ಮೃತಪಟ್ಟಿತ್ತು.
ಈ ಸೋಂಕಿನಿಂದ ಮೂರು ಸಾವುಗಳು ಸಂಭವಿಸಿದ ಬೆನ್ನೆಲ್ಲೇ ಆರೋಗ್ಯ ಇಲಾಖೆ ಕೆಲ ಸಲಹೆಗಳನ್ನು ನೀಡಿದೆ. ಕೊಳಗಳು ಹಾಗೂ ನದಿ ನೀರನ್ನು ಬಳಸುವ ವೇಳೆ ಎಚ್ಚರಿಕೆ ವಹಿಸಬೇಕು. ಈಜು ಕೊಳದ ನೀರನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡಲು ಸಂಬಂಧಪಟ್ಟವರು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಸೋಂಕಿನ ಲಕ್ಷಣಗಳು.ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ. ರೋಗವು ಮುಂದುವರೆದಂತೆ, ಗಟ್ಟಿಯಾದ ಕುತ್ತಿಗೆ, ಗೊಂದಲ, ರೋಗಗ್ರಸ್ತವಾಗುವಿಕೆಗಳು, ಭ್ರಮೆಗಳು, ಕೋಮಾ ಮತ್ತು ಜನರು ಮತ್ತು ಸುತ್ತಮುತ್ತಲಿನ ಕಡೆಗೆ ಗಮನವಿಲ್ಲದಿರುವಂತಹ ಹೆಚ್ಚುವರಿ ಲಕ್ಷಣಗಳು ಕಾಣಿಸಿಕೊಳ್ಳಬಹುದು.
.ಈ ರೋಗಲಕ್ಷಣಗಳು ಸಾಮಾನ್ಯವಾಗಿ ಕಲುಷಿತ ನೀರಿಗೆ ಒಡ್ಡಿಕೊಂಡ ನಂತರ 1 ರಿಂದ 12 ದಿನಗಳಲ್ಲಿ ಪ್ರಾರಂಭವಾಗುತ್ತವೆ. ಅವರು ವೇಗವಾಗಿ ಬೆಳೆಯಬಹುದು ಮತ್ತು ರೋಗಲಕ್ಷಣಗಳು ಕಾಣಿಸಿಕೊಂಡ ನಂತರ 5 ರಿಂದ 18 ದಿನಗಳಲ್ಲಿ ಸೋಂಕು ಮಾರಕವಾಗಬಹುದು.
.ಕಲುಷಿತ ನೀರಿನ ಸಂಪರ್ಕಕ್ಕೆ ಬರುವ ವಿಶ್ವದ 10 ಲಕ್ಷ ಜನರಲ್ಲಿ 2.6 ಜನರು ಸೋಂಕಿಗೆ ಒಳಗಾಗುತ್ತಾರೆ ಎಂದು ಅಂಕಿಅಂಶಗಳು ಸೂಚಿಸುತ್ತವೆ.
.ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಎರಡು ದಿನಗಳ ಹಿಂದೆ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಸಭೆ ನಡೆಸಿದ್ದರು. ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಕುರಿತು ರಾಜ್ಯಕ್ಕೆ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತು.
ಪ್ರಧಾನಿ ಮೋದಿ ಭೇಟಿ ಮಾಡಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 12 =
Remember me
