ಇಡುಕ್ಕಿ (ಕೇರಳ): ಜಿಲ್ಲೆಯ ಕ್ಯಾಥೋಲಿಕ್ ಪಾದ್ರಿಯೊಬ್ಬರು ಮಹಿಳೆಯ ಜತೆ ಚರ್ಚ್‌ನಲ್ಲಿಯೇ ಸೆಕ್ಸ್ ನಡೆಸಿ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ಅದು ಈಗ ಇಡೀ ಕೇರಳದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.
ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಇರುವುದರಿಂದ ಚರ್ಚ್‌ಗೆ ಯಾರೂ ಬರುವುದಿಲ್ಲ ಎಂದು ಭಾವಿಸಿ ಫಾದರ್ ಜೇಮ್ಸ್ ಮಂಗಲಶೇರಿ ನಿರಂತರವಾಗಿ ಈ ಕೃತ್ಯ ಎಸಗಿದ್ದಾನೆ. ಈ ರಾಸಲೀಲೆಯಲ್ಲಿ ಭಾಗವಹಿಸಿದ ಮಹಿಳೆ ವಿವಾಹಿತೆಯಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರ ನಡುವೆ ಹಲವಾರು ತಿಂಗಳುಗಳಿಂದ ಅನೈತಿಕ ಸಂಬಂಧ ಇತ್ತು. ಇದು ಕೆಲವು ಭಕ್ತರಿಗೆ ಗೊತ್ತಿತ್ತು. ಲಾಕ್‌ಡೌನ್ ಸಮಯದಲ್ಲಿಯೂ ಈಕೆ ನಿರಂತರವಾಗಿ ಚರ್ಚ್‌ಗೆ ಬಂದು ಫಾದರ್ ಜತೆಗಿದ್ದು ಹೋಗುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿವಯನಾಡ್​ನಲ್ಲಿ ರಾಹುಲ್​ ವಿರುದ್ಧ ಸರಿತಾ ಸೆಣಸು: ಲೈಂಗಿಕ ಕಿರುಕುಳ ನೀಡಿದವರಿಗೆ ಅವಮಾನಿಸಲು ಸ್ಪರ್ಧೆ ಎಂದ ನಾಯರ್​
ಚರ್ಚ್‌ಗೆ ಬಂದ ಒಬ್ಬ ಭಕ್ತ ತನ್ನ ಮೊಬೈಲ್ ಫೋನ್‌ನಲ್ಲಿ ಈ ಫಾದರ್‌ನ ರಾಸಲೀಲೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ ಎಂದು ಕೆಲವು ಮೂಲಗಳು ಹೇಳುತ್ತಿವೆ. ಇನ್ನು ಕೆಲವು ಮೂಲಗಳ ಪ್ರಕಾರ, ಫಾದರ್ ತನ್ನ ಮೊಬೈಲ್ ಫೋನನ್ನು ರಿಪೇರಿಗೆಂದು ಕೊಟ್ಟಾಗ ಅದರಲ್ಲಿದ್ದ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಬಹಿರಂಗವಾಗಿವೆ. ಅದೇನೇ ಇರಲಿ, ಫಾದರ್ ಮತ್ತು ಆ ಮಹಿಳೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಮತ್ತು ಚಿತ್ರಗಳು ಈಗ ಎಲ್ಲೆಡೆ ಹರಿದಾಡತೊಡಗಿವೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಚರ್ಚ್‌ನ ಆಡಳಿತ ಮಂಡಳಿಯವರು ಫಾದರ್‌ನನ್ನು ಸಸ್ಪೆಂಡ್ ಮಾಡಿ, ಚರ್ಚಿನ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದಾರೆ. ಈ ಘಟನೆಯು ಮಾರ್ಚ್‌ನಲ್ಲೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 24ರಂದೇ ಆತನ ವಿರುದ್ಧ ಚರ್ಚಿನಿಂದ ಕ್ರಮ ಕೈಗೊಂಡಿದ್ದರೂ ಅಧಿಕೃತ ಹೇಳಿಕೆ ಮಾತ್ರ ಈಗ ಹೊರಬಿದ್ದಿದೆೆ.
ಇದನ್ನೂ ಓದಿಲೈಂಗಿಕ ಕ್ರಿಯೆಗೆ ನಿರಾಕರಿಸಿದ 13 ವರ್ಷದ ಬಾಲಕನಿಗೆ ಈ ಮಹಿಳೆ ಮಾಡಿದ್ದೇನು?
ಯಾರೂ ದೂರು ಕೊಟ್ಟಿಲ್ಲವಾದ್ದರಿಂದ ಸ್ಥಳೀಯ ಪೊಲೀಸರು ಆತನ ವಿರುದ್ಧ ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಕೇರಳದಲ್ಲಿ ರಾಸಲೀಲೆಯ ಪ್ರಕರಣಗಳು ಒಂದರ ಮೇಲೊಂದು ಬಹಿರಂಗವಾಗುತ್ತಿರುವ ಸಂದರ್ಭದಲ್ಲಿಯೇ ಈ ಘಟನೆಯೂ ಬಯಲಿಗೆ ಬಂದು ಅಲ್ಲಿನ ಆಡಳಿತಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
