ತಿರುವನಂತಪುರಂ:ಕೇರಳ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಕೇರಳ ಕಾಂಗ್ರೆಸ್​ಗೆ ಶಾಕ್​ ಎದುರಾಗಿದೆ. ಪಕ್ಷದ ಹಿರಿಯ ನಾಯಕರೊಬ್ಬರು ಪಕ್ಷಕ್ಕೆ ಕೈ ಕೊಟ್ಟಿದ್ದು, ಪಕ್ಷದಲ್ಲಿ ಪ್ರಕಾಪ್ರಭುತ್ವ ಸತ್ತು ಹೋಗಿದೆ ಎನ್ನುವ ಆರೋಪವನ್ನೂ ಮಾಡಿದ್ದಾರೆ.
ಕಾಂಗ್ರೆಸ್​ನ ಹಿರಿಯ ಮುಖಂಡ ಪಿ.ಸಿ.ಚಾಕೊ ರಾಜೀನಾಮೆ ನೀಡಿರುವ ವ್ಯಕ್ತಿ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್​ನ ಸ್ಥಿತಿ ತೀರಾ ಹೀನಾಯವಾಗಿದೆ. ಇಲ್ಲಿ ಪ್ರಜಾಪ್ರಭುತ್ವವನ್ನು ಪಾಲಿಸಲಾಗುತ್ತಿಲ್ಲ ಬದಲಾಗಿ ಗುಂಪುಗಾರಿಕೆ ಮಾಡಿಕೊಂಡು ಅಧಿಕಾರ ಸಾಧಿಸಲಾಗುತ್ತಿದೆ. ಅದಕ್ಕೇ ಹೆಚ್ಚಿನ ಒತ್ತನ್ನೂ ನೀಡಲಾಗುತ್ತಿದೆ. ಇದರ ಬಗ್ಗೆ ನಾನು ಈಗಾಗಲೇ ಹೈ ಕಮಾಂಡ್​ಗೆ ಮಾಹಿತಿ ನೀಡಿದ್ದೇನೆ. ಆದರೆ ಯಾವುದೇ ಉಪಯೋಗವಾಗಿಲ್ಲ. ಹೈ ಕಮಾಂಡ್​ ಕೂಡ ಗುಂಪುಗಾರಿಕೆಗೇ ಆದ್ಯತೆ ನೀಡುತ್ತಿರುವುದರಿಂದ ಬೇಸರಗೊಂಡು ನಾನು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಚಾಕೊ ಅವರು ಕಾಂಗ್ರೆಸ್​ನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. ತ್ರಿಶೂರ್​ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಪಕ್ಷದ ವಕ್ತಾರರಾಗಿಯೂ ಸೇವೆ ಸಲ್ಲಿದ್ದರು. 74 ವರ್ಷದ ಹಿರಿಯ ನಾಯಕನ ದಿಢೀರ್​ ರಾಜೀನಾಮೆಯು ಕಾಂಗ್ರೆಸ್​ಗೆ ದೊಡ್ಡ ಹೊಡೆತವನ್ನು ನೀಡಿದಂತಾಗಿದೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

VIDEO| 60ರ ವೃದ್ಧನ 2ನೇ ಮದುವೆಗೆ ಒಪ್ಪದ ಮಕ್ಕಳು! ವಿದ್ಯುತ್​ ಕಂಬವೇರಿ ಕುಳಿತ ವೃದ್ಧ

ಬಾಯ್​ಫ್ರೆಂಡ್​ ಜತೆ 1 ಗಂಟೆ ಮಾತನಾಡಿ ಸಂಪರ್ಕ ಕಡಿದುಕೊಂಡ ಯುವತಿ ಮನೆಯಲ್ಲೇ ದುರಂತ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 14 =
Remember me
