ಆಲಪ್ಪುಳ:2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರ ಮನೆಗೆ ನುಗ್ಗಿ ಹೆಂಡತಿ ಮತ್ತು ಮಗಳ ಮುಂದೆಯೇ ಬರ್ಬರ ಹತ್ಯೆ ಮಾಡಿದಕ್ಕಾಗಿ ನಿಷೇಧಿತ ಇಸ್ಲಾಮಿಸ್ಟ್ ಸಂಘಟನೆಯ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ಗೆ ಸೇರಿದ 15 ಜನರಿಗೆ ಕೇರಳ ನ್ಯಾಯಾಲಯ ಇಂದು (ಮಂಗಳವಾರ) ಮರಣದಂಡನೆ ವಿಧಿಸಿದೆ. ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ವಿ.ಜಿ ಶ್ರೀದೇವಿ ಅವರು ಶಿಕ್ಷೆಯನ್ನು ಪ್ರಕಟಿಸಿದರು.
ಇದನ್ನೂ ಓದಿ:ಸಿಎಂ ಹೇಮಂತ್ ಸೊರೇನ್​ಗೆ ಬಂಧನದ ಭೀತಿ: ಜಾರ್ಖಂಡ್ ನೂತನ ಮುಖ್ಯಮಂತ್ರಿ ಇವರೇ?
ಆರೋಪಿಗಳು, ವ್ಯಕ್ತಿಯನ್ನು ಅವನ ತಾಯಿ, ಮಗು ಮತ್ತು ಹೆಂಡತಿಯ ಮುಂದೆ ಬಹಳ ಕ್ರೂರ ಹಾಗೂ ಪೈಶಾಚಿಕ ರೀತಿಯಲ್ಲಿ ಕೊಲೆಗೈದಿದ್ದರು. ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿತ್ತು.
ಅಪರಾಧಿಗಳನ್ನು ನೈಸಾಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಾಂ, ಸಲಾಂ, ಸಫರುದ್ದೀನ್, ಅಬ್ದುಲ್ ಕಲಾಂ, ಮನ್ಶಾದ್, ಜಸೀಬ್ ರಾಜಾ, ನವಾಸ್, ಸಮೀರ್, ನಜೀರ್, ಜಾಕೀರ್ ಹುಸೇನ್, ಶಾಜಿ ಮತ್ತು ಶೆರ್ನಾಸ್ ಅಶ್ರಫ್ ಎಂದು ಗುರುತಿಸಲಾಗಿದೆ.
ಶ್ರೀನಿವಾಸನ್ (40) ಅವರನ್ನು ಡಿಸೆಂಬರ್ 19, 2021 ರಂದು ಬೆಳಿಗ್ಗೆ 12 ಜನರ ತಂಡವು ಹರಿತವಾದ ಆಯುಧಗಳಿಂದ ಆಲಪ್ಪುಳ ಪಟ್ಟಣದ ವೆಲ್ಲಕಿನಾರ್‌ನಲ್ಲಿರುವ ಅವರ ಮನೆಯಲ್ಲಿ ಹತ್ಯೆ ಮಾಡಿತು. ಬಿಜೆಪಿ ನಾಯಕನ ತಾಯಿ, ಪತ್ನಿ ಮತ್ತು ಕಿರಿಯ ಮಗಳು ಸಾಕ್ಷಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸನ್ ಅವರ ಹತ್ಯೆಯು ಆಲಪ್ಪುಳ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯರಿಂದ ಹಿಂದಿನ ದಿನ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆಎಸ್ ಶಾನ್ ಅವರ ಹತ್ಯೆಗೆ ಪ್ರತೀಕಾರವಾಗಿ ಕಂಡುಬಂದಿದೆ. ಆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ.
ಕ್ರಿಮಿನಲ್ ಪಿತೂರಿ ಮತ್ತು ಕ್ರಿಮಿನಲ್ ಅತಿಕ್ರಮಣ ಸೇರಿದಂತೆ ಇತರ ಅಪರಾಧಗಳಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಲ್ಲಾ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತಾಪ್ ಜಿ ಪಡಿಕಲ್ ಹೇಳಿದ್ದಾರೆ.
ತಿರುಮಲ ತಿಮ್ಮಪ್ಪನಿಗೆ ಬರೋಬ್ಬರಿ 5,142 ಕೋಟಿ ರೂ. ಬಜೆಟ್‌! ಹುಂಡಿಯಿಂದ ಬರುವ ಮೊತ್ತ ಕೇಳಿದ್ರೆ ಬೆರಗಾಗ್ತೀರಾ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + twenty =
Remember me
