ಕೊಚ್ಚಿ:ಕ್ರಿಕೆಟಿಗ ವಿರಾಟ್ ಕೋಹ್ಲಿ, ಕಲಾವಿದರಾದ ತಮನ್ನಾ ಭಾಟಿಯ ಮತ್ತು ಅಜು ವರ್ಗೀಸ್​ಗೆ ಕೇರಳ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಆನ್​ಲೈನ್​ ರಮ್ಮಿ ಆಟದ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸಂಬಂಧ ನೋಟೀಸು ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ:ಟೀಮ್ ಇಂಡಿಯಾ ಎದುರು ಸೋತ ಆಸೀಸ್ ತಂಡದಲ್ಲಿ ಬದಲಾವಣೆ..!ಕೊಚಿಯ ಪೌಲಿ ವದಕ್ಕನ್ ಹೆಸರಿನವರು ಆನ್​ಲೈನ್​ ರಮ್ಮಿ ನಿಲ್ಲಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿರುವ ನ್ಯಾಯಾಲಯ ನೋಟೀಸು ನೀಡಿದೆ. ಆನ್​ಲೈನ್ ರಮ್ಮಿ ಆಟಗಳು ಕಾನೂನುಬಾಹಿರವಾಗಿದ್ದು, ನಿಯಂತ್ರಿಸಲು ಕಷ್ಟಕರವಾದವು ಎನ್ನಲಾಗಿದೆ. ಈ ರೀತಿಯ ಆಟಗಳನ್ನು ನಡೆಸುತ್ತಿರುವ ಕೆಲವು ಪ್ಲಾಟ್​ಫಾರಂಗಳು ಸೆಲೆಬ್ರಿಟಿಗಳನ್ನು ತಮ್ಮ ಜಾಹೀರಾತಿಗಾಗಿ ಬಳಸಿಕೊಳ್ಳುತ್ತಿವೆ. ಆ ಮೂಲಕ ಯುವಜನರನ್ನು ಆಕರ್ಷಿಸಿ ಆರ್ಥಿಕವಾಗಿ ಸಂಕಷ್ಟಕ್ಕೀಡುಮಾಡುತ್ತಿವೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್, ರಮ್ಮಿ ಗೇಮ್ಸ್​ ನಡೆಸುತ್ತಿವೆ ಎನ್ನಲಾದ ಪ್ಲೇ ಗೇಮ್ಸ್ 24*7 ಮತ್ತು ಮೊಬೈಲ್ ಪ್ರೀಮಿಯರ್ ಲೀಗ್ ಕಂಪೆನಿಗಳಿಗೆ ನೋಟೀಸು ಜಾರಿ ಮಾಡಿದೆ. ವಿರಾಟ್ ಕೊಹ್ಲಿ ಮೊಬೈಲ್ ಪ್ರೀಮಿಯರ್ ಲೀಗ್​ನ ಬ್ರಾಂಡ್ ಅಂಬಾಸಿಡರ್ ಆಗಿದ್ದರೆ, ನಟಿ ತಮನ್ನಾ ಜಾಹೀರಾತೊಂದರಲ್ಲಿ ನಟಿಸಿದ್ದಾರೆ. ಮಲಯಾಳಂ ನಟ ಅಜು ವರ್ಗೀಸ್ ರಮ್ಮಿ ಸರ್ಕಲ್​ ಅನ್ನು ಎಂಡಾರ್ಸ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:VIDEO| ಬೀದಿನಾಯಿಯ ಮೇಲೆ ಕಾರು ಹತ್ತಿಸಿ ದುಷ್ಕೃತ್ಯ ಮೆರೆದ ಪೊಲೀಸಪ್ಪ!
ಆನ್​ಲೈನ್​ ಬೆಟ್ಟಿಂಗ್ ಒಂದು ಗಂಭೀರ ಸಾಮಾಜಿಕ ಪಿಡುಗು ಎಂದಿರುವ ನ್ಯಾಯಾಲಯ, ಈ ವಿಚಾರವಾಗಿ ಕೇರಳ ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟನೆ ಕೇಳಿದೆ. ಈ ಪ್ಲಾಟ್​ಫಾರಂಗಳನ್ನು ಎಂಡಾರ್ಸ್ ಮಾಡಿರುವುದರ ಬಗ್ಗೆ ವಿವರಣೆ ಕೇಳಿ ಕೊಹ್ಲಿ, ತಮನ್ನಾ ಮತ್ತು ಅಜು ಅವರಿಗೆ ನೋಟೀಸುಗಳನ್ನು ಕಳಹಿಸಿದೆ.(ಏಜೆನ್ಸೀಸ್​)
ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + fifteen =
Remember me
