ತಿರುವನಂತಪುರಂ:ಕೇರಳ ವಿಧಾನಸಭೆ ಚುನಾವಣೆಗೆ ಪಾಲಕ್ಕಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮೆಟ್ರೋ ಮ್ಯಾನ್ ಎಂದೇ ಖ್ಯಾತಿಯಾಗಿರುವ ಇ ಶ್ರೀಧರನ್ ಅವರಿಗೆ ಸೋಲುಂಟಾಗಿದೆ.
ಅವರು ಯುಡಿಎಫ್ ಒಕ್ಕೂಟದ ಕಾಂಗ್ರೆಸ್​ನ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಶರೀಪ್ ಪರಾಂಬಿಲ್ ಅವರ ವಿರುದ್ಧ ಸೋತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 3600 ಮತಗಳ ಅಂತರದಿಂದ ಬಿಜೆಪಿಯ ಬಹು ನಿರೀಕ್ಷಿತ ಅಭ್ಯರ್ಥಿಗೆ ಸೋಲಾಗಿದೆ.
ಆರಂಭದ ಸುತ್ತಿನ ಮತ ಎಣಿಕೆಯಲ್ಲಿ ಶ್ರೀಧರನ್ ಅವರು ಲೀಡ್ ಕಾಯ್ದುಕೊಂಡಿದ್ದರು. ಇನ್ನೇನು ಅವರ ಗೆಲುವು ಪಕ್ಕಾ ಎನ್ನುವಂತಾಗಿತ್ತು. ಆದರೆ ಕೊನೆಯ ಕೆಲ ಸುತ್ತಿನ ಮತ ಎಣಿಕೆಯಲ್ಲಿ ಅದೃಷ್ಠ ಶ್ರೀಧರನ್​ಗೆ ಒಲಿಯಲಿಲ್ಲ. ಇದರೊಂದಿಗೆ ಕೇರಳದಲ್ಲಿ ಒಂದು ಸೀಟ್​ ಆದ್ರೂ ಗೆಲ್ಲುತ್ತೇವೆ ಎಂಬ ಬಿಜೆಪಿ ಕನಸು ಕೂಡ ನನಸಾಗಲಿಲ್ಲ.
ಚುನಾವಣೆಯಲ್ಲಿ ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಕಡೆಗೆ ಬಿಜೆಪಿಯಿಂದ ಅವರೊಬ್ಬರಾದರೂ ಗೆಲ್ಲುತ್ತಾರೆ ಎಂದು ಬಿಜೆಪಿ ನಿರೀಕ್ಷಿಸಿತ್ತು. ಆದರೆ ಬಿಜೆಪಿಗೆ ಕೇರಳ ಫಲಿತಾಂಶ ತೀವ್ರ ನಿರಾಸೆ ತರಿಸಿದೆ. ಇನ್ನು ಕೇರಳದ ವಿಧಾನಸಭೆ ಚುನಾವಣೆ ಫಲಿತಾಂಶ ಬಹುತೇಕ ಅಂತಿಮಗೊಂಡಿದ್ದು, ಎಲ್​ಡಿಎಫ್ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಯುಡಿಎಫ್ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮತ್ತೆ ಪಿಣರಾಯಿ ವಿಜಯನ್ ಅವರು ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಲಿದ್ದಾರೆ.
ಅಂತೂ ನಂದಿಗ್ರಾಮದಲ್ಲಿ ಗೆದ್ದು ಬೀಗಿದ ದೀದಿ: ಬಿಜೆಪಿಗೆ ತೀವ್ರ ಮುಖಭಂಗ!
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಅಚ್ಚರಿಯ ನಿರ್ಧಾರ ತೆಗೆದುಕೊಂಡ ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 1 =
Remember me
