ಕೊಚ್ಚಿ:ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸಿಂಥೆಟಿಕ್​ ಡ್ರಗ್​ ಮತ್ತು ಸ್ಟ್ಯಾಂಪ್​ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಕೇರಳದ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಶೀಲಾ ಸನ್ನಿ (51) ಎಂದು ಗುರುತಿಸಲಾಗಿದೆ. ಈಕೆ ಕೇರಳದ ತ್ರಿಸ್ಸೂರ್​ ಜಿಲ್ಲೆಯ ನಾಯರಂಗಡಿ ನಿವಾಸಿ. ಚಲಕುಡಿಯಲ್ಲಿ ಬ್ಯೂಟಿ ಪಾರ್ಲರ್​ ಇಟ್ಟುಕೊಂಡಿದ್ದಳು. ಆದರೆ, ಪಾರ್ಲರ್​ ಒಳಗೆ ಡ್ರಗ್ಸ್​ ಮತ್ತು ಸ್ಟ್ಯಾಂಪ್​ ಮಾರಾಟದಂತಹ ಅಕ್ರಮ ವ್ಯವಹಾರ ನಡೆಸುತ್ತಿದ್ದಳು. ಇರಿಂಜಲಕುಡ ವೃತ್ತದ ಕಚೇರಿಯಲ್ಲಿ ದೊರೆತ ರಹಸ್ಯ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಕೆ.ಸತೀಶನ್ ನೇತೃತ್ವದ ತಂಡ ಆಕೆಯನ್ನು ಬಂಧಿಸಿದೆ.
ಇದನ್ನೂ ಓದಿ:ಶ್ವಾನ ಪ್ರಿಯರಿಗೆ ಸಿಹಿ ಸುದ್ದಿ; ನಾಯಿಗಳ ಬರ್ತ​ಡೇ ಸೆಲೆಬ್ರೆಟ್​​ ಮಾಡಲು ಶುರುವಾಯ್ತು ಡಾಬಾ!
ಆಕೆಯ ಸ್ಕೂಟರ್‌ನ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಮಾರಣಾಂತಿಕ ಔಷಧಗಳ ಸುಮಾರು 12 ಸ್ಟ್ಯಾಂಪ್‌ಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಸ್ಟಾಂಪ್ ಮೌಲ್ಯ 60,000 ರೂಪಾಯಿ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಜಯದೇವನ್, ಶಿಜು ವರ್ಗೀಸ್, ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿಗಳಾದ ಪಿ ಎಸ್ ರಜಿತಾ, ಸಿ ಎನ್ ಸಿಜಿ ಮತ್ತು ಡ್ರೈವರ್ ಶಾನ್ ಇದ್ದರು. (ಏಜೆನ್ಸೀಸ್​)
ಮಹಿಳಾ ದಿನದ ಅಂಗವಾಗಿ ‘ಆದರ್ಶ ದಂಪತಿ’ ಸ್ಪರ್ಧೆ; ವಿಡಿಯೋ ಕ್ಲಿಪಿಂಗ್ ಕಳುಹಿಸಿ

ಶ್ವಾನ ಪ್ರಿಯರಿಗೆ ಸಿಹಿ ಸುದ್ದಿ; ನಾಯಿಗಳ ಬರ್ತ​ಡೇ ಸೆಲೆಬ್ರೆಟ್​​ ಮಾಡಲು ಶುರುವಾಯ್ತು ಡಾಬಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 3 =
Remember me
