ಕೇರಳ:ಕೇರಳ ಚಲನಚಿತ್ರ ನಿರ್ದೇಶಕ ರಾಮಸಿಂಹನ್ ಅಬೂಬಕ್ಕರ್(Ramasimhan Aboobakker)ಅವರು ಇಂದು ಅಧಿಕೃತವಾಗಿ ಬಿಜೆಪಿಯನ್ನು(BJP)ತೊರೆದಿದ್ದು, ಪಕ್ಷದಿಂದ ಹೊರಬಂದರೂ ಕೂಡ ಪ್ರಧಾನಿ ಮೋದಿ ಅವರನ್ನು ಸದಾ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಬಿಜೆಪಿ; ಮತ್ತೆ ಲಿಂಗಾಯತ ಸಿಎಂ ವಿಚಾರ ಪ್ರಸ್ತಾಪ
ರಾಮಸಿಂಹನ್ ಅಬೂಬಕ್ಕರ್ ಅವರು ತಾವು ಬಿಜೆಪಿ ತೊರೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ(Social Media)ಪೋಸ್ಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಬೂಬಕ್ಕರ್, “ನಾನು ಯಾವಾಗಲೂ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತೇನೆ. ಕಲಾವಿದರು ಯಾವುದೇ ರಾಜಕೀಯ ಪಕ್ಷದ ಗುಲಾಮರಲ್ಲ. ಚುನಾವಣೆ ಸಂದರ್ಭದಲ್ಲಿ ಕಲಾವಿದರು ಶೋಪೀಸ್ ಅಲ್ಲ, ಜಗತ್ತನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ನಾವು ಪ್ರಮುಖರು ಎಂಬುದನ್ನು ಪಕ್ಷ ಅರಿಯಬೇಕು. ಕೇರಳ ಬಿಜೆಪಿಯಲ್ಲಿನ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ನಾಯಕತ್ವಕ್ಕೆ ಅರಿವಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಾರ್ವಜನಿಕ ಪ್ರದೇಶಗಳಲ್ಲಿ ನಮಾಜ್ ಮಾಡುವಂತಿಲ್ಲ, ಹೊಸ ಮಸೂದೆ ತರಲು ಮುಂದಾಗಿದೆ ಈ ದೇಶ…
ಕಳೆದ ವಾರದಲ್ಲಿ ಬಿಜೆಪಿ ತೊರೆದ ನಿರ್ದೇಶಕ ಅಬೂಬಕ್ಕರ್, ಇಂದು ಫೇಸ್‌ಬುಕ್‌ನಲ್ಲಿ(Facebook)ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ತಮ್ಮ ರಾಜೀನಾಮೆ(Resignation)ಪತ್ರವನ್ನು ಕೇರಳ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್ ಅವರಿಗೆ ಇಮೇಲ್ ಮುಖಾಂತರ ಕಳುಹಿಸಿದ್ದಾರೆ.
ವಿಜಯ್ ದೇವರಕೊಂಡ ಜತೆ ನಟಿ ಶ್ರೀಲೀಲಾ; ರಿವೀಲ್ ಆಯ್ತು ಮುಂದಿನ ಚಿತ್ರದ ಟೈಟಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 1 =
Remember me
