ತಿರುವನಂತಪುರ: ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ 2020-21ನೇ ಸಾಲಿನ ರಾಜ್ಯ ಮುಂಗಡ ಪತ್ರದ ಮುಖಪುಟ ಈಗ ವಿವಾದದ ಕೇಂದ್ರ ಬಿಂದು.
ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಈ ರಾಜಕೀಯ ನಡೆ ವ್ಯಾಪಕ ಟೀಕೆಗೊಳಗಾಗಿದೆ. ಹಣಕಾಸು ಸಚಿವ ಥಾಮಸ್ ಐಸಾಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಬಜೆಟ್​ ಭಾಷಣದ ಮುಖಪುಟ ಖಚಿತವಾಗಿಯೂ ಒಂದು ರಾಜಕೀಯ ನಡೆ. ಮಹಾತ್ಮ ಗಾಂಧಿ ಅವರ ಹತ್ಯೆ ಕುರಿತಂತೆ ಮಲಯಾಳಿ ಕಲಾವಿದರೊಬ್ಬರು ರಚಿಸಿದ ವರ್ಣಚಿತ್ರ ಅದು. ಮಹಾತ್ಮ ಗಾಂಧಿ ಅವರ ಹತ್ಯೆಯನ್ನು ನಾವು ಮರೆಯುವುದಿಲ್ಲ ಎಂಬ ಸಂದೇಶ ರವಾನಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಎನ್​ಆರ್​ಸಿ, ಸಿಎಎ ಮುಂತಾದ ಕ್ರಮಗಳನ್ನು ನೇರವಾಗಿ ವಿರೋಧಿಸುತ್ತಿರುವ ಎಡರಂಗ ಸರ್ಕಾರದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ ಥಾಮಸ್​, ಯಾವಾಗ ಇತಿಹಾಸವನ್ನು ಮರುರಚಿಸಲಾಗುತ್ತದೆಯೋ ಅಂತಹ ಸನ್ನಿವೇಶದಲ್ಲಿ ಇದು ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಕೆಲವು ಜನಪ್ರಿಯ ನೆನಪುಗಳನ್ನು ಅಳಿಸಿಹಾಕುವ ಪ್ರಯತ್ನ ನಡೆಯುತ್ತಿದೆ. ದೇಶದ ಜನರನ್ನು ಕೋಮು ಭಾವನೆಗಳ ಮೂಲಕ ವಿಭಜಿಸುವ ಸಲುವಾಗಿ ಎನ್​ಆರ್​ಸಿಯನ್ನು ಬಳಸಲಾಗುತ್ತಿದೆ. ಕೇರಳ ಈ ವಿಚಾರದಲ್ಲಿ ಐಕ್ಯತೆಯನ್ನು ತೋರಿಸಲಿದೆ ಎಂದು ಹೇಳಿದರು.
ಈ ನಡೆಯಲ್ಲಿರುವ ಸಂದೇಶ ಸ್ಪಷ್ಟವಾಗಿದೆ. ಹಿಂದು ಕೋಮುವಾದಿಗಳು ಮಹಾತ್ಮ ಗಾಂಧಿ ಅವರ ಹತ್ಯೆ ಮಾಡಿದ್ದು. ಇಂದು ಕೇಂದ್ರ ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದಿರುವವರೂ ಅದೇ ಹಿಂದು ಕೋಮುವಾದಿಗಳು. ಅವರನ್ನು ಎಚ್ಚರಿಸುವ ಸಲುವಾಗಿ ಈ ರೀತಿ ನಡೆಯನ್ನು ನಾವು ಅನುಸರಿಸಿದ್ದೇವೆ ಎಂದು ಸಚಿವ ಥಾಮಸ್ಸುದ್ದಿಗಾರರಿಗೆತಿಳಿಸಿದ್ದಾರೆ.
ಚಿತ್ರದ ಬಗ್ಗೆ ಒಂದಿಷ್ಟು: ಟಾಮ್ ವೆಟ್ಟಕುಯಿ ಎಂಬ ಕಲಾವಿದನ ಡೆತ್ ಆಫ್ ಗಾಂಧಿ ಎಂಬ ಚಿತ್ರ ಇದು. ಇದರಲ್ಲಿ, ರಕ್ತ ಸಿಕ್ತವಾಗಿ ನೆಲದ ಮೇಲೆ ಉರುಳಿದ ಗಾಂಧಿ ಮತ್ತು ಅವರ ಸುತ್ತ ಇರುವ ಜನ ಕಂಬನಿ ಮಿಡಿಯುತ್ತಿರುವ ದೃಶ್ಯ ಇದರಲ್ಲಿದೆ. (ಏಜೆನ್ಸೀಸ್)
Kerala Finance Minister Thomas Isaac: This is important at the times when history is being re-written. There is an attempt to erase some popular memories and use National Register of Citizens (NRC) to divide the population on communal lines. Kerala will stand united. (2/2)https://t.co/RLEkCOrCDn
— ANI (@ANI)February 7, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
